ಮಾನವನ ಜ್ಞಾನತೃಷೆ ಇಂದು-ನಿನ್ನೆಯದಲ್ಲ, ಬಹಳ ಹಿಂದಿನಿಂದಲೂ ಆತ ತಾನು ವಾಸಿಸುವ ಪರಿಸರವನ್ನು, ತನ್ನನ್ನು ಆವರಿಸಿದ ನಿಸರ್ಗವನ್ನು ಮತ್ತು ತಾನೇ ಸೃಷ್ಟಿಸಿರುವ ಸಾಮಾಜಿಕ ಜಗತ್ತನ್ನು ಹೆಚ್ಚು ಆಳವಾಗಿ ಮತ್ತು ನಿಖರವಾಗಿ ಆರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ ಬರುತ್ತಿದ್ದಾನೆ. ತನ್ನ ಈ ಪರಿಶ್ರಮದಲ್ಲಿ ಆತ ಹಲವಾರು ಬಗೆಯ ವಿಜ್ಞಾನಗಳ ಹಾಗೂ ಅಧ್ಯಯನಶಾಸ್ತ್ರಗಳ ಉಗಮಕ್ಕೆ ಕಾರಣನಾಗಿದ್ದಾನೆ. ನೈಸರ್ಗಿಕ ವಸ್ತು ವಿಷಯ ಹಾಗೂ ಜೀವಿಗಳ ಕುರಿತಾದ ವಿಜ್ಞಾನಗಳನ್ನು ನೈಸರ್ಗಿಕ ವಿಜ್ಞಾನ"ಗಳೆಂದು ಮತ್ತು ಮಾನವ ಸೃಷ್ಠಿಯ ಸಾಮಾಜಿಕ ಜಗತ್ತನ್ನು ಅಧ್ಯಯನ ಮಾಡುವ ವಿಜ್ಞಾನಗಳನ್ನು “ಸಮಾಜ ವಿಜ್ಞಾನ"ಗಳೆಂದು ಕರೆಯುವುದು ವಾಡಿಕೆಯಾಗಿದೆ.
ಸಮಾಜ ವಿಜ್ಞಾನಗಳ ಪರಂಪರೆ ಆರಂಭವಾದದ್ದು ಕ್ರಿ.ಶ.18-19ನೇ ಶತಮಾನಗಳಲ್ಲಿ, ಸಮಾಜ ವಿಜ್ಞಾನಗಳ ಸಮೂಹಕ್ಕೆ ಇತ್ತೀಚೆಗೆ ಸೇರಿಕೊಂಡ ಸಮಾಜಶಾಸ್ತ್ರವು ಮಾನವ ಸಮಾಜದ ಸಮಗ್ರ ಅಧ್ಯಯನವನ್ನು ತನ್ನ ಉದ್ದೇಶವನ್ನಾಗಿಸಿಕೊಂಡಿದೆ. ಅದನ್ನು “ಸಮಾಜದ ವಿಜ್ಞಾನ" (Science of Society) ಎಂದು ಕರೆಯುತ್ತೇವೆ.
ಸಮಾಜಶಾಸ್ತ್ರದ ಪಿತಾಮಹ ಆಗಸ್ಟ್ ಕಾಮ್ ಸಮಾಜಶಾಸ್ತ್ರವನ್ನು “ವಿಜ್ಞಾನ"ವೊಂದರ ಸ್ಥಾನಮಾನ ಸಿಗುವಂತೆ ಮಾಡಿದ್ದಾರೆ. ಅವರ ಈ ಪ್ರಯತ್ನವನ್ನು ಬಲವಾಗಿ ಸಮರ್ಥನೆ ಮಾಡಿದವರಲ್ಲಿ ಹರ್ಬಟ್ ಸ್ಪೆನ್ಸರ್, ಇಮೈಲ್ , ಡರ್ಖೀಮ್, ಮ್ಯಾಕ್ಸ್ ವೇಬರ್ ಬಹಳ ಪ್ರಮುಖರು. ಪರೋಕ್ಷವಾಗಿ ಕಾರ್ಲ್ ಮಾರ್ಕ್ಸ್ ಕೂಡಾ ಈ ಕೆಲಸ ಮಾಡಿದ್ದಾರೆ. ಅನಂತರ ಬಂದ ಸಾವಿರಾರು ಮಂದಿ ಸಮಾಜ ಚಿಂತಕರ, ಬರಹಗಾರರ ಹಾಗೂ ಸಮಾಜಶಾಸ್ತ್ರಜ್ಞರ ಪರಿಶ್ರಮದ ಫಲವಾಗಿ “ಸಮಾಜಶಾಸ್ತ್ರ" ಒಂದು ವಿಶಿಷ್ಟ ವಿಜ್ಞಾನವೆನ್ನಿಸಿಕೊಂಡಿದೆ.
1.1 ಸಮಾಜಶಾಸ್ತ್ರ: ಅರ್ಥ(Meaning)
ಸಮಾಜಶಾಸ್ತ್ರವು ಸಮಾಜ ವಿಜ್ಞಾನಗಳಲ್ಲಿ ಅತ್ಯಂತ ಕಿರಿಯ ವಿಜ್ಞಾನವೆನಿಸಿಕೊಂಡಿದೆ. ಇತ್ತೀಚೆಗೆ, ಕ್ರಿ.ಶ. 19ನೇ ಶತಮಾನದ ಫಾನ್ಸಿನ ತತ್ವಜ್ಞಾನಿ 'ಆಗಸ್ಟ್ ಕಾಮ್” (August Comte) “ಸಮಾಜಶಾಸ್ತ್ರ ಎಂಬ ಹೊಸ ಸಮಾಜ ವಿಜ್ಞಾನದ ಸ್ಥಾಪನೆಗೆ ಕಾರಣರಾದರು. ಆದ್ದರಿಂದ ಆಗಸ್ಟ್ ಕಾಮ್ರವರನ್ನು "ಸಮಾಜಶಾಸ್ತ್ರ"ದ 'ಪಿತಾಮಹ'ರೆಂದು ಪರಿಗಣಿಸಲಾಗಿದೆ.
ಕ್ರಿ.ಶ.1839 ರಲ್ಲಿ “ಪೊಸಿಟಿವ್ ಫೀಲೊಸಫಿ” (Positive Philosophy) ಎಂಬ ವಿಷಯದ ಕುರಿತಾಗಿ ತನ್ನ ಸಾರ್ವಜನಿಕ ಉಪನ್ಯಾಸವನ್ನು ನೀಡುವ ಸಂದರ್ಭದಲ್ಲಿ ಆಗಸ್ಟ್ ಕಾಮ್ಸ್ ಮೊದಲ ಬಾರಿಗೆ “ಸಮಾಜಶಾಸ್ತ್ರ" ಎಂಬ ಪದವನ್ನು ಬಳಸಿದರು. ಮಾನವ ಸಮಾಜವನ್ನು ವೈಜ್ಞಾನಿಕವಾಗಿ ಹಾಗೂ ಸಮಗ್ರ ರೀತಿಯಲ್ಲಿ ಅಧ್ಯಯನ ಮಾಡಲು ಹೊಸ ವಿಜ್ಞಾನವೊಂದರ ಅವಶ್ಯಕತೆಯಿದೆ ಎಂದು ವಾದಿಸಿ ಅದನ್ನು “ಸಮಾಜಶಾಸ್ತ್ರ" ಎಂದು
ಹೆಸರಿಸಿದರು.
Anchainut now a cortab: (Emergence of the Word "Sociology"):
“ಸೋಸಿಯಾಲಜಿ” ಎಂಬುದು “ಸಮಾಜಶಾಸ್ತ್ರ" ಎಂಬ ಕನ್ನಡ ಪದಕ್ಕೆ ತತ್ಸಮಾನ ಅರ್ಥವುಳ್ಳ, ಇಂಗ್ಲೀಷ್ ಪದವಾಗಿದೆ. “ಸೋಸಿಯಾಲಜಿ” ಎಂಬ ಪದವು ಲ್ಯಾಟಿನ್ ಭಾಷೆಯ “ಸೋಶಿಯಸ್" (Socius) ಮತ್ತು ಗ್ರೀಕ್ ಭಾಷೆಯ "ಲಾಗೋಸ್" (Logos) ಎಂಬ ಶಬ್ದಗಳಿಂದ ವ್ಯುತ್ಪತ್ತಿ ಹೊಂದಿದೆ. "ಸೋಶಿಯಸ್" ಎಂದರೆ ಜೊತೆಗಾರ, ಸಹಚರ ಅಥವಾ ಸಮಾಜ ಎಂದರ್ಥ. ಹಾಗೆಯೇ ಲಾಗೋಸ್ ಎಂದರೆ 'ಶಾಸ್ತ್ರ' ಅಥವಾ 'ವಿಜ್ಞಾನ'ವೆಂಬ ಅರ್ಥವಿದೆ. ಹೀಗೆ 'ಸೋಸಿಯಾಲಜಿ' ಅಥವಾ 'ಸಮಾಜಶಾಸ್ತ್ರ' ಎಂಬುದು ಸಮಾಜದ ಅಧ್ಯಯನ ಶಾಸ್ತ್ರವಾಗಿದೆ.
1.2 ಸಮಾಜಶಾಸ್ತ್ರದ ವ್ಯಾಖ್ಯೆ (Defination of Sociology)
1. ಆಗಸ್ಟ್ ಕಾಮ್: “ಸಮಾಜಶಾಸ್ತ್ರವು ನಿಸರ್ಗ ಸಹಜವಾದ ಹಾಗೂ ಸ್ಥಿರ ರೂಪದ ನಿಯಮಗಳಿಗೆ ಒಳಪಟ್ಟ ಸಾಮಾಜಿಕ ವಿದ್ಯಮಾನಗಳ ವಿಜ್ಞಾನವಾಗಿದ್ದು, ಅಂತಹ ನಿಯಮಗಳನ್ನು ಕಂಡುಕೊಳ್ಳುವುದೇ ಅದರ ಶೋಧನೆಯ ಉದ್ದೇಶವಾಗಿರುತ್ತದೆ.
ಹೆಚ್ ಎಂ.ಜಾನ್ಸನ್: “ಸಾಮಾಜಿಕ ಸಮೂಹಗಳ ಕುರಿತಾದ ವೈಜ್ಞಾನಿಕ ಅಧ್ಯಯನವೇ ಸಮಾಜಶಾಸ್ತ್ರ” 3. ಇಮೈಲ್ ಡರ್ಖೀಮ್: “ಸಮಾಜಶಾಸ್ತ್ರವು ಸಾಮಾಜಿಕ ಸಂಸ್ಥೆಗಳ ವಿಜ್ಞಾನವಾಗಿದೆ".
2.
4. ಮ್ಯಾಕ್ಸ್ ವೇಬರ್: “ಸಾಮಾಜಿಕ ವರ್ತನೆಯನ್ನು ಅರ್ಥೈಸುವ ಅಧ್ಯಯನವನ್ನು ಸಮಾಜಶಾಸ್ತ್ರ' ಎಂದು ಕರೆದಿದ್ದಾನೆ. ಆತನ ಪ್ರಕಾರ ಈ ವಿಜ್ಞಾನದ ಮುಖ್ಯ ಉದ್ದೇಶ, ಮಾನವನ ಸಾಮಾಜಿಕ ವರ್ತನೆಯ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸುವುದೇ ಆಗಿದೆ”
5. ಮೆಕೈವರ್ ಮತ್ತು ಪೇಜ್: “ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳ ಕುರಿತಾದುದು" ವಿಜ್ಞಾನವಾಗಿದೆ. 6. ಮೋರಿಸ್ ಗಿನ್ಸ್ಬರ್ಗ್: ಸ್ಕೂಲವಾಗಿ ಹೇಳುವುದಾದರೆ “ಮಾನವನ ಅನ್ನೋನ್ಯ ಕ್ರಿಯೆ ಹಾಗೂ ಪರಸ್ಪರ ಸಂಬಂಧಗಳ ಜೊತೆಗೆ ಅವುಗಳ ಕಾರಣ ಮತ್ತು ಪರಿಣಾಮಗಳು ಇವುಗಳ ಅಧ್ಯಯನವೇ ಸಮಾಜಶಾಸ್ತ್ರವಾಗಿದೆ".
ಈ ಮೇಲಿನ ವ್ಯಾಖ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವು ಸಮಾಜಶಾಸ್ತ್ರದ ಮುಖ್ಯ ಉದ್ದೇಶವು ಮಾನವನ ಸಮಾಜ ಮತ್ತು ಆತನ ಸಾಮಾಜಿಕ ಸಂಬಂಧಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತದೆ.
Abhishek
ReplyDeleteಸಮಾಜ ಶಾಸ್ತ್ರ ಸ್ವರೂಪ
ReplyDeletePushamavathi
ReplyDeletePushamavathi
ReplyDeletePost a Comment