ಆಗಸ್ಟ್ ಕಾಮ್ಸ್‌ರವರಿಗಿಂತ ಮೊದಲು "ಸಾಮಾಜಿಕ ಚಿಂತನೆ" ಎಂಬುದಿತ್ತು. ಸಹಸ್ರಾರು ವರ್ಷಗಳಿಂದಲೂ ಚಿಂತಕರು, ತತ್ವಜ್ಞಾನಿಗಳು, ಕಾನೂನು ಪಂಡಿತರು, ಸಮಾಜ ಸುಧಾರಕರು ತಾವು ವಾಸವಾಗಿದ್ದ ಸಮಾಜಗಳ ಸ್ಥಿತಿಗತಿ ಹಾಗೂ ಅಲ್ಲಿನ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಕುರಿತಾಗಿ ತಮ್ಮದೇ ಆದ ವಿಚಾರಗಳನ್ನು ಹೊಂದಿದ್ದರು. ಅವರ ಬರವಣಿಗೆಗಳ ಮೂಲಕ ಅವರ ಸಾಮಾಜಿಕ ವಿಚಾರ ಚಿಂತನೆಗಳು ವ್ಯಕ್ತವಾದವು. ವೇದಗಳು, ಉಪನಿಷತ್ತುಗಳು, ಮಹಾಕಾವ್ಯಯಗಳಾದ ರಾಮಯಣ ಮತ್ತು ಮಹಾಭಾರತ, ಕೌಟಿಲ್ಯನ “ಅರ್ಥಶಾಸ್ತ್ರ" ಹಾಗೂ ಮನುವಿನ "ಧರ್ಮಶಾಸ್ತ್ರ," ಅಥವಾ ಸ್ಮೃತಿ, ಗ್ರೀಕ್ ದಾರ್ಶನಿಕ ಪ್ಲೇಟೋ ಬರೆದ
“ರಿಪಬ್ಲಿಕ್" ಹಾಗೂ ಅರಿಸ್ಟಾಟಲ್‌ನ "ಪಾಲಿಟಿಕ್ಸ್ ಮತ್ತು ಎಥಿಕ್ಸ್", ರೋಮ್ ದೇಶದ ಸಿಸಿರೋ ರಚಿಸಿದ
“ಆನ್ ಜಸ್ಟೀಸ್” ಚೀನಾ ದೇಶದ ಕನ್ನೂಷಿಯಸ್‌ನ ಕೃತಿ "ಅನಲೆಕ್ಸ್" ಅರಬ್ ಚಿಂತಕ ಇಬನ್‌ಬಲ್ಡನ್
ರವರ ಮಕಶ್ಚಿಮ್ ಮುಂತಾದವರ ಪ್ರಾಚೀನ ಸಾಮಾಜಿಕ ಚಿಂತನೆಯ ಕೆಲವು ಮೂಲಗಳೆನಿಸಿಕೊಂಡಿವೆ.
ಪಾಶ್ಚಾತ್ಯ ಸಮಾಜಶಾಸ್ತ್ರೀಯ ದೃಷ್ಟಿಕೋನದಂತೆ ಈ ಮೇಲೆ ಉಲ್ಲೇಖಿಸಿದ ಚಿಂತಕರುಗಳನ್ನು "ದಾರ್ಶನಿಕರು", “ಇತಿಹಾಸಕಾರರು”, “ಕಾನೂನು ತಜ್ಞರು”, “ಸುಧಾರಣಾವಾದಿಗಳು ಎಂದು ಮುಂತಾಗಿ ಕರೆಯಬಹುದೇ ವಿನಃ “ಸಮಾಜಶಾಸ್ತ್ರಜ” ರಲ್ಲ, ಅವರ ಆಲೋಚನೆ ಮತ್ತು ಅಧ್ಯಯನಗಳಿಗೆ ವೈಜ್ಞಾನಿಕ ನೆಲೆಯಿರಲಿಲ್ಲ. ಆದಾಗ್ಯೂ ಸಮಾಜದ ಸ್ಥಿತಿ-ಗತಿಗಳ ಬಗ್ಗೆ ಚರ್ಚಿಸಲು ಇವರು ಒಂದು ನೈತಿಕ ನೆಲೆಗಟ್ಟನ್ನು ನೀಡಿದರು.
ಪ್ರಾಚೀನ ಕಾಲದಲ್ಲಿಯೇ ಆರಂಭಗೊಂಡ ಸಾಮಾಜಿಕ ಚಿಂತನೆಯ ಪರಂಪರೆಯು ಮಧ್ಯಕಾಲೀನ ಯುಗದಿಂದ ಆಧುನಿಕ ಕಾಲದ ಆರಂಭದವರೆಗೂ ಮುಂದುವರೆದುಕೊಂಡು ಬಂದಿತು. ಆದರೆ 19ನೇ ಶತಮಾನದ ನಂತರದಲ್ಲಿ ಮಾತ್ರ ಆಗಸ್ಟ್ ಕೋಮ್ಸ್, ಹರ್ಬಟ್ ಸ್ಪೆನ್ಸರ್, ಇಮೈಲ್ ಡರ್ಖೀಮ್, ಮ್ಯಾಕ್ಸ್ ವೇಬರ್, ಮುಂತಾದ ವಿದ್ವಾಂಸರ ಚಿಂತನೆಯ ಫಲವಾಗಿ ಮಾನವ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಪ್ರಯತ್ನಗಳಾದವು. ಈ ಅಧ್ಯಯನಗಳ ಹಿನ್ನೆಲೆಯಲ್ಲಿಯೇ ಸಮಾಜಶಾಸ್ತ್ರವು ಒಂದು ಸ್ವತಂತ್ರ ಸಮಾಜ ವಿಜ್ಞಾನವಾಗಿ ಮೂಡಿ ಬಂದಿತು.
Zabrisangja eruriabę admmd worries (Factors that Contributed Emergence of Sociology) ಸಮಾಜ ವಿಜ್ಞಾನಗಳ ಪರಂಪರೆಯ ಆರಂಭವು 19ನೇ ಶತಮಾನದ ಮಹತ್ವದ ಬೌದ್ಧಿಕ ಬೆಳವಣಿಗೆ ಎಂದೆನ್ನಬಹುದು. ಸಮಾಜ ವಿಜ್ಞಾನಗಳಾದ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮನಃಶಾಸ್ತ್ರ ಇತ್ಯಾದಿಗಳು ತಮ್ಮದೇ ಆದ ಧೀರ್ಘ ಹಿನ್ನೆಲೆಯನ್ನು ಹೊಂದಿರಬಹುದಾದರೂ “ಸಮಾಜ ವಿಜ್ಞಾನಗಳು” ಎಂಬ ಮಾನ್ಯತೆ ಅವುಗಳಿಗೆ ಲಭ್ಯವಾದುದು 18-19 ನೇ ಶತಮಾನಗಳಲ್ಲಿ ಕ್ರಿ.ಶ. 16 ರಿಂದ 18ನೇ ಶತಮಾನಗಳಲ್ಲಿ ಸಂಭವಿಸಿದ “ಮನರುಜೀವನ", ಧಾರ್ಮಿಕ ಸುಧಾರಣೆ ಮುಂತಾದ ಬೌದ್ಧಿಕ ಪ್ರಕ್ರಿಯೆಗಳು ಆಗ ತಾನೇ ಸ್ಥಾಪನೆಗೊಳ್ಳ ತೊಡಗಿದ್ದ ವೈಜ್ಞಾನಿಕ ಚಿಂತನೆಯ ಪರಂಪರೆಗೆ ಬಲವಾದ ಪ್ರೇರಣೆ ನೀಡಿದವು. ಈ ಪ್ರೇರಣೆ ಸಮಾಜಶಾಸ್ತ್ರದ ಗಮಕ್ಕೂ ಸಹಕಾರಿಯಾಗಿತ್ತು.
ಸಮಾಜಶಾಸ್ತ್ರದ ಉಗಮಕ್ಕೆ ಸಹಾಯಕವಾದ ಅಂಶಗಳಲ್ಲಿ ಈ ಮುಂದಿನವು ಬಹಳ ಮಹತ್ವವಾದವುಗಳಾಗಿವೆ. ಅವುಗಳೆಂದರೆ
1. ಅವಳಿ ಕ್ರಾಂತಿಗಳ ಪರಿಣಾಮ, (ಫ್ರಾನ್ಸಿನ ಮಹಾಕ್ರಾಂತಿ ಮತ್ತು ಕೈಗಾರಿಕಾ ಕ್ರಾಂತಿ).
Post a Comment