ವಿಜ್ಞಾನದ ಅರ್ಥ- ಗುಣಲಕ್ಷಣಗಳು

Meaning -Nature and Characteristics of Science

'ವಿಜ್ಞಾನ' ಜ್ಞಾನವನ್ನು ಕುರಿತಾದುದು. “ವಿಜ್ಞಾನ” ಎಂಬ ಕನ್ನಡ ಪದಕ್ಕೆ ತತ್ಸಮಾನವಾದ ಇಂಗ್ಲೀಷ್ ಪದ “ಸೈನ್ಸ್” (Science”), “ಸೈನ್ಸ್” ಎಂಬ ಪದವು ಲ್ಯಾಟಿನ್ ಭಾಷೆಯ “ಸೈನ್ಯಾ"(Scientis) ಎಂಬ ಪದದಿಂದ ವ್ಯುತ್ಪತ್ತಿ ಹೊಂದಿದೆ. ಸೈನ್ಯವೆಂದರೆ ಜ್ಞಾನ. ಆದರೆ ಎಲ್ಲಾ ಬಗೆಯ ಜ್ಞಾನವನ್ನು “ವಿಜ್ಞಾನ” ಎನ್ನಲಾಗುವುದಿಲ್ಲ. ವೈಜ್ಞಾನಿಕ ವಿಧಾನಗಳ ಬಳಕೆಯ ಮುಖಾಂತರ ಪ್ರಾಪ್ತವಾಗುವ ಜ್ಞಾನವನ್ನು ಮಾತ್ರ “ವಿಜ್ಞಾನ" ಎನ್ನುವುದು ಹೆಚ್ಚು ಸೂಕ್ತ. ಹಾಗಿದ್ದರೆ, “ವಿಜ್ಞಾನ" ಎಂದರೇನು?

ವಿಜ್ಞಾನದ ವ್ಯಾಖ್ಯೆ: (Definition of Science): 1. ವಿಶಾಲವಾದ ಅರ್ಥದಲ್ಲಿ ಹೇಳುವುದಾದರೆ, “ಭೌತಿಕ ಅಥವಾ ಸಾಮಾಜಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಯಾವುದೇ ಕ್ರಮಬದ್ಧವಾದ ಅಧ್ಯಯವನ್ನು ವಿಜ್ಞಾನ ಎನ್ನಬಹುದು".

2. ಆರ್.ಟಿ. ಶಾಫರ್: “ಕ್ರಮಬದ್ಧವಾದ ಅವಲೋಕನ ವಿಧಾನಗಳ ಮೂಲಕ ಪ್ರಾಪ್ತವಾದ ಜ್ಞಾನದ ಸಮಷ್ಠಿಯನ್ನು ವಿಜ್ಞಾನ ಎಂದೆನ್ನಬಹುದು" 3. ಅತ್ಯಂತ ಸರಳ ಪದಗಳಲ್ಲಿ ಹೇಳುವುದಾದರೆ, "ವಿಜ್ಞಾನವೆಂಬುದು ಕ್ರಮಬದ್ಧವಾದ ಅಥವಾ ಸಂಘಟಿತವಾದ

ponts". ("Science is a systematic body of knowledge")

Dua for veranie (Characteristics of Science): ಈ ಮೇಲಿನ ವ್ಯಾಖ್ಯೆಗಳು ಸ್ಪಷ್ಟಗೊಳಿಸುವಂತೆ ವಿಜ್ಞಾನದ ಮುಖ್ಯ ಉದ್ದೇಶ ಜ್ಞಾನ ಸಂಪಾದನೆಯೇ ಆಗಿದೆ.

ಜ್ಞಾನವು ಸಾಗರದಷ್ಟು ವಿಶಾಲವಾದುದು, ಅದರ ಆಳವನ್ನು ಶೋಧಿಸುವುದು ಆಗದ ಕೆಲಸ, ವಿಜ್ಞಾನಿಯಾದವನು ಎಷ್ಟು ಹೆಚ್ಚು ಶ್ರಮ ಹಾಕಿ ಜ್ಞಾನವನ್ನು ಸಂಗ್ರಹಿಸುವ ಯತ್ನ ನಡೆಸುತ್ತಾನೆಯೋ ಆಗ ತನಗೆ ತಿಳಿಯದೇ ಇರುವ ಇನ್ನು ಎಷ್ಟೋ ವಸ್ತು, ವಿಷಯ, ವಿಚಾರಗಳಿವೆ ಎಂಬುದು ತಿಳಿದುಬರುವುದು, ಜ್ಞಾನವನ್ನು ಸಂಪಾದಿಸುವ ಉದ್ದೇಶ ಹೊಂದಿದ ವಿಜ್ಞಾನಿಯಾದವನು ಹಾಗೂ ವಿಜ್ಞಾನದ ಪ್ರಾಥಮಿಕ ಪರಿಚಯ ಮಾಡಿಕೊಳ್ಳ ಹೊರಟವರು ವಿಜ್ಞಾನದ ಸ್ವರೂಪ ಲಕ್ಷಣಗಳ ಪರಿಚಯ ಹೊಂದಿರುವುದು ಅವಶ್ಯ. ಅಂತಹ ಲಕ್ಷಣಗಳ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

1. ವಾಸ್ತವತೆ ಅಥವಾ ಸತ್ಯಸಂಗತಿ (Faetuality):- ವಿಜ್ಞಾನವು ಮಾನಸಿಕ ಕಲ್ಪನೆಗಳನ್ನು ಆಧಾರಿಸಿರುವುದಲ್ಲ, ಆದರೆ ಸತ್ಯಸಂಗತಿಗಳನ್ನು ಅವಲಂಬಿಸಿರುತ್ತದೆ. "ಅವಲೋಕಿತ ವಿದ್ಯಮಾನವನ್ನೇ ಇಲ್ಲಿ ವಾಸ್ತವಾಂಶ ಅಥವಾ ಸತ್ಯಸಂಗತಿ ಎನ್ನಲಾಗುವುದು, ಯಾವ ಹೇಳಿಕೆ ಸತ್ಯಪೂರ್ಣವಾಗಿದೆಯೋ ಅದನ್ನ ವಾಸ್ತವಾಂಶ ಎನ್ನಬಹುದು, ಉದಾಹರಣೆ: ಕಲ್ಲು ಒಂದು ಘನ ವಸ್ತವಾಗಿದೆ. 2. ಭಾರತದಲ್ಲಿ ಸರ್ವಧರ್ಮೀಯರು ನೆಲೆಸಿದ್ದಾರೆ. ಇತ್ಯಾದಿ.

2

ಕಾರಣೀಯತೆ: (Causality) :- ವಿಜ್ಞಾನವು ವಸ್ತುಗಳ ಅಥವಾ ಘಟನೆಗಳ ನಡುವಿನ ಕಾರಣೀಯ

ಸಂಬಂಧವನ್ನು ಕಂಡುಕೊಳ್ಳಲು ಪ್ರಯತ್ನಿಸುವುದು, ಅಂದರೆ, ಅದು ಕಾರಣಿಯತೆಯನ್ನು ಅರ್ಥ ಮಾಡಿಕೊಳ್ಳಲು

ಯತ್ನಿಸುವುದು, ಕಾರಣಿಯತೆಯು “ಘಟನೆಗಳ ಜರುಗುವಿಕೆ ಎಂಬುದು ಕಾರಣ ಮತ್ತು ಪರಿಣಾಮ

ಸಂಬಂಧಗಳಿಂದ ನಿರ್ಧರಿತವಾಗುತ್ತದೆ" ಎಂಬಂಶವನ್ನು ಸ್ಪಷ್ಟಪಡಿಸುತ್ತದೆ.

ಉದಾಹರಣೆ:

1. ಹಾನಿಕಾರಕ ಬ್ಯಾಕ್ಟಿರಿಯಗಳು ರೋಗಗಳನ್ನು ತರುತ್ತವೆ. 

2 ಬಡತನವೆಂಬುದು ಆರ್ಥಿಕ ಹಿಂದುಳಿದಿರುವಿಕೆಯ ಕಾರಣಗಳಲ್ಲೊಂದು. ಈ ಕಾರಣೀಯ ಸಂಬಂಧಗಳ ಮರ್ಮವನ್ನು ಅರಿತುಕೊಳ್ಳುವುದೇ ವಿಜ್ಞಾನದ ಕಾರ್ಯ.

3. ಸಾರ್ವತ್ರಿಕತೆ (Universality:- ವೈಜ್ಞಾನಿಕ ಶೋಧನೆಗಳು ಸಾರ್ವತ್ರಿಕ ಸ್ವರೂಪದವುಗಳಾಗಿರುತ್ತದೆ. ಯಾವುದೇ ಜನಾಂಗ, ರಾಷ್ಟ್ರೀಯತೆ, ಭಾಷೆ, ಧರ್ಮ / ಪ್ರದೇಶ, ಸಾಮಾಜಿಕ ವರ್ಗ ಅಥವಾ ರಾಜಕೀಯ ತತ್ವಾದರ್ಶಕ್ಕೆ ಮಾತ್ರ ವೈಜ್ಞಾನಿಕ ಸತ್ಯತೆಯು ಸೀಮಿತವಾಗಿರಲು ಸಾಧ್ಯವಿಲ್ಲ. ವೈಜ್ಞಾನಿಕ ಶೋಧನೆಗಳನ್ನು ಅವುಗಳ ವೈಜ್ಞಾನಿಕತೆಯ ನೆಲೆಯಲ್ಲಿ ಮಾತ್ರ ಮೌಲ್ಯಮಾಪನ ಮಾಡುವಂತಿರಬೇಕು.ಉದಾಹರಣೆಗಳು: ಬೆಂಕಿ ಸುಡುವುದು, ನೀರು ಹರಿಯುತ್ತದೆ. ಗಾಳಿ ಬೀಸುತ್ತದೆ ಇತ್ಯಾದಿ.

4.ಭವಿಷ್ಯ ಸೂಚಕತೆ (Predictability):- “ಮುಂದಾಗುವ ಘಟನೆಯನ್ನು ಅಥವಾ ಘಟನೆಗಳ ಸರಣಿಯನ್ನು ಮೊದಲೇ ಸೂಚಿಸುವುದಕ್ಕೆ ಭವಿಷ್ಯ ಸೂಚಕತೆ ಎನ್ನಬಹುದು". ಅದು ಭವಿಷ್ಯದಲ್ಲಿ ಏನಾಗುವುದೆಂಬುದರ ಕುರಿತಾಗಿ ನೀಡುವ ಹೇಳಿಕೆಯಾಗಿರುತ್ತದೆ. ಅದು ಆ ಕುರಿತಾದ ನಮ್ಮ ಲೆಕ್ಕಚಾರವೂ ಆಗಿರಬಹುದು. ಖಚಿತವಾಗಿ ಭವಿಷ್ಯ ಸೂಚಿಸುವುದು ವಿಜ್ಞಾನದ ಕಾರ್ಯಗಳಲ್ಲೊಂದು. ಉದಾಹರಣೆಗಳು:- 1. ಭೂಕಂಪಗಳು, ಗ್ರಹಣಗಳು, ಚಂಡಮಾರುತಗಳು, ಮಳೆ ಬೀಳುವಿಕೆ-ಮುಂತಾದ ಭೌತಿಕ ವಿದ್ಯಮಾನಗಳ ಕುರಿತು ವಿಜ್ಞಾನಿಗಳು ಭವಿಷ್ಯ ಸೂಚಕ ಮಾಹಿತಿ ನೀಡಬಲ್ಲರಾಗಿದ್ದಾರೆ. 2. ಸಮಾಜ ವಿಜ್ಞಾನಗಳ ಕ್ಷೇತ್ರದಲ್ಲಿ ಭವಿಷ್ಯ ಸೂಚಿಸುವುದು ಸ್ವಲ್ಪ ಕಷ್ಟಕರವಾದರೂ ಅದು ಅಸಾಧ್ಯವಲ್ಲ. ಅಂತೆಯೇ, ಜನಸಂಖ್ಯಾ ಏರಿಳಿತಗಳ ಆರ್ಥಿಕ ಬೆಳವಣಿಗೆ, ಸಾಕ್ಷರತೆ, ಕುಟುಂಬದ ವಿಘಟನೆಯ ಅಥವಾ ವಿವಾಹ ವಿಚ್ಚೇದನಗಳ ಗತಿಯ ಬಗ್ಗೆ ಸಮಾಜ ವಿಜ್ಞಾನಿಗಳು ನಂಬಲರ್ಹ ಭವಿಷ್ಯ ಸೂಚಿಸುವ ಯತ್ನ ನಡೆಸಿದ್ದಾರೆ.

5. ದೃಢೀಕರಣಿಯತೆ ಅಥವಾ ಪ್ರಮಾಣೀಕರಣೀಯತೆ (Verifiability):- ವಿಜ್ಞಾನವು ದೃಢೀಕರಣ ತತ್ವವನ್ನು ಆಧರಿಸಿ ನಿಂತಿದೆ. ಈ ತತ್ವದಂತೆ ಒಂದು ಹೇಳಿಕೆ, ಅಥವಾ ಪ್ರಾಕ್‌ ಕಲ್ಪನೆ (hypothesis) ಯನ್ನು ಅದು ದೃಢೀಕರಣ ಯೋಗ್ಯವಾಗಿದ್ದರೆ ಮಾತ್ರ “ವೈಜ್ಞಾನಿಕವಾದುದೆಂದು ಒಪ್ಪಿಕೊಳ್ಳಬಹುದು. “ಒಂದು ಹೇಳಿಕೆ ಅಥವಾ ಪ್ರಾಕ್' ಕಲ್ಪನೆಯ ಸತ್ಯತೆಯನ್ನು ಸ್ಥಾಪಿಸಲು ಅನುಸರಿಸುವ ಯಾವುದೇ ವಿಧಾನವನ್ನು ದೃಢೀಕರಣ ಅಥವಾ ಪ್ರಮಾಣೀಕರಣ" ಎನ್ನಬಹುದು. ಹೇಳಿಕೆಯೊಂದನ್ನು ದೃಢೀಕರಿಸುವುದೆಂದರೆ, ಅನುಭವವೈದ್ಯವಾದ ಸಾಕ್ಷ್ಯಾಧಾರಗಳನ್ನು ನೀಡಿ ಅದನ್ನು ನಂಬಲಾರ್ಹವನ್ನಾಗಿಸುವುದು ಎಂದರ್ಥ, ಉದಾಹರಣೆಗಳು:(1). ಭೂಮಿಯು ಸೂರ್ಯನ ಸುತ್ತ ತಿರುಗುವುದು, ಸೂರ್ಯ ಭೂಮಿಗಿಂತಲೂ ಗಾತ್ರದಲ್ಲಿ ದೊಡ್ಡದಾದ ಗ್ರಹ. (2). ಮಾನವರೆಲ್ಲರೂ ಮರ್ತ್ಯರು (ಸಾವಿಗೆ ಈಡಾಗುವವರು), (3). ಮಾನವರೆಲ್ಲರೂ ಸರಿಸಮಾನರಾಗಿರಲು ಸಾಧ್ಯವಿಲ್ಲ, ಇತ್ಯಾದಿ.

6, ವಸ್ತು ನಿಷ್ಟತೆ ಮತ್ತು ಮೌಲ್ಯ ನಿರಪೇಕ್ಷತೆ (Objectivity and Value Nutrality):- ವಿಜ್ಞಾನಿಗಳು ವಸ್ತುನಿಷ್ಟರಾಗಿರಬೇಕೆಂಬುದು ವಿಜ್ಞಾನದ ಆಪೇಕ್ಷೆ, “ವಸ್ತುನಿಷ್ಟತೆ ಎಂದರೆ ಅವಲೋಕನಗಳನ್ನು ಮಾಡುವಾಗ ಹಾಗೂ ವ್ಯಾಖ್ಯಾನಿಸುವಾಗ ಯಾವುದೇ ಬಗೆಯ ಪೂರ್ವಗ್ರಹಗಳಿಂದ ಮುಕ್ತವಾಗಹಿರುವುದು ಎಂದರ್ಥ", ನಾವು ಸತ್ಯಸಂಗತಿಗಳನ್ನು ಅಥವಾ ವಾಸ್ತವಾಂಶಗಳನ್ನು ವ್ಯಾಖ್ಯಾನಿಸುವಾಗ, ನಮ್ಮ ವೈಯಕ್ತಿಕ ತೀರಾನಗಳು ಅಥವಾ ಅನಿಸಿಕೆಗಳು ವ್ಯಕ್ತಪಡಿಸದಂತೆ ಎಚ್ಚರ ವಹಿಸಬೇಕು.

ಮೌಲ್ಯ ನಿರಪೇಕ್ಷತೆಯು (Value Neutrality) :- ಈ ಪರಿಕಲ್ಪನೆಯನ್ನು ಮೊದಲು ಪ್ರಸ್ತಾಪಿಸಿದವರು ಮ್ಯಾಕ್ಸ್ ವೇಬರ್, ಇವರ ಪ್ರಕಾರ ಯಾವುದೇ ಸಂಶೋಧಕನಾಗಲೀ ಅಥವಾ ವಿಜ್ಞಾನಿಯಾಗಲೀ, ತನ್ನ ವ್ಯಕ್ತಿಗತ ಮೌಲ್ಯಗಳು ಅಥವಾ ತಾತ್ವಿಕ ನಿಲುವುಗಳಿಗೆ ಪೂರಕವಾದ ವಿಧಾನಗಳನ್ನು ಆಯ್ಕೆ ಮಾಡಿಕೊಂಡು ವಾಸ್ತವಾಂಶಗಳನ್ನು ವ್ಯಾಖ್ಯಾನಿಸುವ ಯತ್ನ ಮಾಡಬಾರದು. ಮೌಲ್ಯ ನಿರಪೇಕತೆಯ ತತ್ವದಂತೆ ಯಾವುದೇ ಕಾರಣಕ್ಕೂ ತನ್ನ ವ್ಯಕ್ತಗತ ಮೌಲ್ಯಗಳು, ನಂಬಿಕೆಗಳು ಹಾಗೂ ವಿಚಾರಗಳು ತನ್ನ ಸಂಶೋಧನಾ ಅಧ್ಯಯನದ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುವ ಹೊಣೆ ಸಂಶೋಧಕನದು,

7. ವೈಜ್ಞಾನಿಕ ವಿಧಾನಗಳು ಹಾಗೂ ತಂತ್ರಗಳ ಮೇಲೆ ವಿಶೇಷವಾದ ಗಮನ (Special Insistence on Scientific Method and Techniques):- ಜ್ಞಾನದ ಯಾವುದೇ ಶಾಖೆಯು ತನ್ನನ್ನು “ವಿಜ್ಞಾನ ಎಂದು ಕರೆಸಿಕೊಳ್ಳಬೇಕಾದರೆ ಅದು ವೈಜ್ಞಾನಿಕ ವಿಧಾನವನ್ನು ಅವಲಂಬಿಸುವುದು ಅನಿವಾರ್ಯ. ವೈಜ್ಞಾನಿಕ ವಿಧಾನಕ್ಕೆ ತಳಹದಿ  ಹಾಕಿದ ಫ್ರಾನ್ಸಿಸ್ ಬೇಕನ್ ವಿಜ್ಞಾನವೆಂಬುದು ತನ್ನ ಅಧ್ಯಯನ ಹಾಗೂ ಸಂಶೋಧನೆಗಳಲ್ಲಿ ವೈಜ್ಞಾನಿಕ ವಿಧಾನವನ್ನೇ ಅಳವಡಿಸಬೇಕೆಂದು ತಿಳಿಸಿದ್ದಾರೆ. “ವಿಜ್ಞಾನದ ಏಕತೆಯನ್ನು ಅದರ ವಿಧಾನದಲ್ಲಿ ಕಾಣಬಹುದೇ ವಿನಃ ಅದರ ವಸ್ತು ವಿಷಯಗಳಲ್ಲಲ್ಲ.” ಎಂದು ಕಾರ್ಲ್ ಪಿಯರ್‌ಸನ್ (Karl Pearson) ಹೇಳಿದ ಮಾತು ಉಲ್ಲೇಖನೀಯ.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now