ಸಮಾಜದ ವಿವಿಧ ಪ್ರಕಾರಗಳು

 

ಸಮಾಜ ಅರ್ಥ




ಪಶುಪಾಲನಾ ಸಮಾಜ,

ಗ್ರಾಮೀಣ ಸಮಾಜ

ಕೈಗಾರಿಕಾ ಸಮಾಜ.


ಸಮಾಜಶಾಸ್ತ್ರದ ಅಧ್ಯಯನದಲ್ಲಿ ಸಮಾಜವು ಪ್ರಧಾನ ಅಧ್ಯಯನ ವಸ್ತು ಮಾನವ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ರೂಪಿಸಲ್ಪಟ್ಟ ಶಾಸ್ತ್ರವೇ ಸಮಾಜಶಾಸ್ತ್ರ, ವ್ಯಕ್ತಿ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮಾನವ ಒಂಟಿಯಾಗಿ ಏಕಾಂಗಿಯಾಗಿ ಜೀವಿಸಲಾರ, ಮಾನವರು ಯಾವಾಗಲೂ ಸಾಂಘಿಕವಾಗಿ ಸಮಾಜದಲ್ಲಿ ಜೀವಿಸುತ್ತಾರೆ, ಸಮಾಜವು ಮಾನವ ಬೆಳೆದು ಸರ್ವತೋಮುಖ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುವುದು.


ಸಮಾಜದಲ್ಲಿ ಜನಜೀವನ, ಸಂಸ್ಕೃತಿ, ಆಚಾರ, ವಿಚಾರ, ಉದ್ಯೋಗ ಮುಂತಾದ ಅಂಶಗಳು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿರುತ್ತವೆ. ಹಾಗೆಯೇ ಗ್ರಾಮಾಂತರ ಪ್ರದೇಶಗಳಿಗೆ ಹೋದಾಗ ನೂರಾರು ಸಂಖ್ಯೆಯ ಕುರಿಗಳು, ದನಗಳು, ಮತ್ತಿತರ ಪ್ರಾಣಿಗಳು, ಕಣ್ಣಿಗೆ ಕಾಣುತ್ತವೆ. ಅಂತೆಯೇ ಹೊಲ-ಗದ್ದೆಗಳು, ಗುಂಪು-ಗುಂಪಾಗಿರುವ ಮನೆಗಳು ಮತ್ತು ಹೊಲ ಗದ್ದೆಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರನ್ನು ಕಾಣಬಹುದು. ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳಲ್ಲಿ ರಸ್ತೆಯ ತುಂಬ ವಾಹನಗಳು, ದಟ್ಟ ಜನಸಂದಣಿ, ವಿಶಾಲವಾದ ಬಡಾವಣೆಗಳು ಹಾಗೂ ಕೊಳಚೆ ಪ್ರದೇಶಗಳು, ಕಾರ್ಖಾನೆಗಳು, ಎತ್ತರವಾದ ಕಟ್ಟಡಗಳು, ದೊಡ್ಡ ದೊಡ್ಡ ಸಂಸ್ಥೆಗಳು, ಸರ್ಕಾರಿ ಕಛೇರಿಗಳು, ಆಸ್ಪತ್ರೆಗಳು ಇನ್ನೂ ಮುಂತಾದ ಆಧುನಿಕ ಸಂಸ್ಥೆಗಳನ್ನು ನಾವು ಕಾಣಬಹುದು.


ಸಮಾಜದ ಅರ್ಥ: 'ಸಮಾಜ' ಎಂಬ ಕನ್ನಡ ಪದವು ಇಂಗ್ಲಿಷ್ ಭಾಷೆಯ 'ಸೊಸೈಟಿ' ಎಂಬ ಪದದ ಅನುವಾದವಾಗಿದೆ. ಸೊಸೈಟಿ ಎಂಬ ಪದವು ಲ್ಯಾಟಿನ್ ಭಾಷೆಯ 'ಸೋಷಿಯಸ್'ನಿಂದ ಬಂದಿದೆ. ಹೀಗೆ ೦ದರೆ ಒಡನಾಡಿತನ, ಗೆಳೆತನ, ಎಂದರ್ಥ, ಅಂದರೆ ಒಡನಾಡಿಗಳ ಒಡನಾಟದಿಂದ ಒಟ್ಟುಗೂಡಿರುವ ವ್ಯವಸ್ಥೆಯೇ 'ಸಮಾಜ' ಎನ್ನಬಹುದು.


ಸಮಾಜದ ವ್ಯಾಖ್ಯೆಗಳು


ಮೆಕ್ಕವರ್ ಮತ್ತು ಪೇಜ್‌ರವರ ಪ್ರಕಾರ : 'ಸಾಮಾಜಿಕ ಸಂಬಂಧಗಳ ಬಲೆಯೇ ಸಮಾಜ ಒಂದು ಸಮುದಾಯದೊಳಗಿನ ಸಂಸ್ಥೆಗಳ, ಸಂಘಗಳ, ಸಂಕೀರ್ಣವಾದ ವ್ಯವಸ್ಥೆಯೇ ಸಮಾಜ

ಸ್ವರೂಪ :


1) ಸಮಾಜವು ಸಮೂಹಗಳ ಸಮೂಹವಾಗಿದೆ: ಹಲವು ಜನರು ಒಟ್ಟುಗೂಡಿ ಸಮೂಹವಾಗುತ್ತದೆ. ಆಂತಹ ಹಲವಾರು ಸಮೂಹಗಳು ಒಟ್ಟುಗೂಡಿ ಸಮಾಜವಾಗುತ್ತದೆ. ಪ್ರತಿಯೊಂದು ಸಮಾಜವು ಕುಟುಂಬ, ನೆರೆಹೊರ, ಗ್ರಾಮ, ನಗರ, ಕಾರ್ಮಿಕ ಸಂಘ, ಧಾರ್ಮಿಕ ಸಮೂಹ, ರಾಜಕೀಯ ಪಕ್ಷಗಳು, ಮುಂತಾದ ಸಮೂಹಗಳನ್ನು ಹೊಂದಿರುವುದು. ಅದಕ್ಕಾಗಿ ಎಚ್.ಎಂ, ಜಾನ್ಸನ್ ಅವರು 'ಸಮೂಹಗಳ ಸಮೂಹವೇ ಸಮಾಜ' ಎಂದಿದ್ದಾರೆ.


2) ಸಮಾಜವು ಸಾಮಾಜಿಕ ಸಂಬಂಧಗಳ ಬಲೆಯಾಗಿದೆ : ಸಮಾಜವೆಂದರೆ ಅದು ಕೇವಲ ಜನರ


ಸಂಗ್ರಹವಲ್ಲ; ಅದು ಜನರ ನಿರಂತರ ಅಂತರ್ ಕ್ರಿಯೆಯಲ್ಲಿ ತೊಡಗಿರುವ ಜನರ ಸಮೂಹ, ಇದರ


ಸಾಮಾಜಿಕ ಸಂಬಂಧಗಳ ವ್ಯಾಪ್ತಿ ವಿಶಾಲವಾಗಿದೆ. ಉದಾಹರಣೆಗೆ: ಗುರು-ಶಿಷ್ಯರು, ಪಾಲಕರು ಮಕ್ಕಳು, ರೋಗಿಗಳು-ವೈದ್ಯರು, ಗಂಡ-ಹೆಂಡತಿ, ಮುಂತಾದವುಗಳಲ್ಲಿ ಇಂತಹ ಸಂಬಂಧಗಳನ್ನು ಕಾಣುತ್ತೇವೆ. ಹೀಗಾಗಿಯೇ ಮೆಕೈವರ್ ಮತ್ತು ಪೇಜ್ ಅವರು 'ಸಾಮಾಜಿಕ ಸಂಬಂಧಗಳ ಬಲೆಯೇ ಸಮಾಜ' ಎಂದಿದ್ದಾರೆ. 3) ಹೋಲಿಕೆ ಮತ್ತು ಸಾಮ್ಯತೆ: ಸಮಾಜದ ರಚನೆಯಲ್ಲಿ ಹೋಲಿಕೆ ಪ್ರಮುಖ ಪಾತ್ರ ವಹಿಸುತ್ತದೆ. ನ ವ್ಯಕ್ತಿಗಳಲ್ಲಿರುವ ದೈಹಿಕ, ಮಾನಸಿಕ ಹೋಲಿಕೆಯ ಅಂಶಗಳೇ ಸಮಾಜಕ್ಕೆ ಆಧಾರವಾಗಿರುತ್ತವೆ. ಜನರ ಆಕಾಂಕ್ಷೆಗಳು, ಕೆಲಸಗಳು, ಗುರಿಗಳು, ಆದರ್ಶಗಳು, ಮೌಲ್ಯಗಳಲ್ಲಿ ಹೋಲಿಕೆಗಳನ್ನು ಹೊಂದಿರುವರು. ಇದರಿಂದ ಜನರಲ್ಲಿ ಪರಸ್ಪರ ಒಡನಾಡಿತನ, ಸಹಕಾರ, ಪ್ರೀತಿ, ವಿಶ್ವಾಸ, ಅನುಕಂಪ, ತ್ಯಾಗ, ನಾವೆಲ್ಲರೂ


ಒಂದು ಎಂಬ ಭಾವನೆ ವ್ಯಾಪಕವಾಗಿ ಬೆಳೆದು ಕೂಡಿ ಬಾಳುವಂತೆ ಪ್ರೇರೇಪಿಸುತ್ತದೆ.


4) ಸಹಕಾರ ಮತ್ತು ಶ್ರಮ ವಿಭಜನೆ: ಸಹಕಾರವೆಂದರೆ ಜನರು ಸಮಾನ ಉದ್ದೇಶಗಳ ಈಡೇರಿಕೆಗೆ ಕೂಡಿ ದುಡಿಯುವುದಾಗಿದೆ. ಸಹಕಾರ ಮನೋಭಾವ ಇರುವುದರಿಂದಲೇ ಸಮಾಜದಲ್ಲಿ ಒಬ್ಬರಿಗೊಬ್ಬರು ಸುಖ-ದುಃಖಗಳಲ್ಲಿ ಭಾಗಿಯಾಗಿರುವರು. ಇದರ ಆಧಾರದಲ್ಲಿಯೇ ಶ್ರಮ ವಿಭಜನೆಯು 'ಸಾಮಾನ್ಯ ಕಾರ್ಯವೊಂದನ್ನು ತಮ್ಮೊಳಗೆ ಹಂಚಿಕೊಂಡು ದುಡಿಯುವುದಾಗಿದೆ. ಶ್ರಮವಿಭಜನೆಯು ಜನರ ಆಸಕ್ತಿ ಅಭಿರುಚಿ, ಸಾಮರ್ಥ್ಯ, ಲಿಂಗ ಮತ್ತು ವಯಸ್ಸು ಮುಂತಾದವುಳ ಆಧಾರದಲ್ಲಿ ಹಂಚಿಕೆಯಾಗುವುದು. ಆದುದರಿಂದ ಸಹಕಾರ ಮತ್ತು ಶ್ರಮ ವಿಭಜನೆ ಎರಡು ಪರಸ್ಪರ ಪೂರಕವಾಗಿವೆ.


5) ಸಾಮಾಜಿಕ ನಿಯಂತ್ರಣ: ಸಮಾಜವು ತನ್ನದೇ ಆದ ರೀತಿ-ನೀತಿಗಳನ್ನು ಬೆಳೆಸಿಕೊಂಡಿರುತ್ತೆ. ಆಧುನಿಕ ಸಂಕೀರ್ಣ ಸಮಾಜವು ಕಾನೂನು, ಶಾಸನ, ಸಂವಿಧಾನಗಳನ್ನು ಹೊಂದಿ ಜನರ ವರ್ತನೆಗಳನ್ನು, ಔಪಚಾರಿಕ ಮಾಧ್ಯಮಗಳ ಮೂಲಕ ಅಥವಾ ಅನೌಪಚಾರಿಕ ಮಾಧ್ಯಮಗಳಾದ ಪದ್ಧತಿ, ನೈತಿಕ ನಿಯಮ, ಲೋಕಾಚಾರಗಳ ಮೂಲಕ ನಿಯಂತ್ರಿಸುವುದು.


6) ಸಮಾಜವು ಗತಿಶೀಲವಾದುದು; ಸಮಾಜವು ಯಾವಾಗಲೂ ಪರಿವರ್ತನಶೀಲವಾದುದು. ಪರಿವರ್ತನೆಯಿಲ್ಲದೆ ಯಾವುದೇ ಸಮಾಜವು ದೀರ್ಘಕಾಲ ಉಳಿಯಲಾರದು, ಉದಾಹರಣೆಗೆ: ಗ್ರಾಮೀಣ ಸಮಾಜ ನಿಧಾನವಾಗಿ ಬದಲಾದರೆ, ನಗರ ಸಮಾಜವು ತ್ವರಿತಗತಿಯಲ್ಲಿ ಬದಲಾವಣೆ ಹೊಂದುತ್ತದೆ...


ಸಮಾಜದ ಮಹತ್ವ / ಪ್ರಾಮುಖ್ಯತೆ


1) ಸರ್ವವ್ಯಾಪಕವಾದುದು: ಮಾನವರ ಜೀವನ ಹಾಗೂ ಸಮಾಜ ಇವು ಯಾವಾಗಲೂ ಒಟ್ಟಿಗೆ ಸಾಗುತ್ತವೆ. ನಮ್ಮ ಜೀವನವನ್ನು ಸುಗಮವಾಗಿ ಸಾಗುವಂತೆ ಮಾಡುವುದೇ ಸಮಾಜ. ಯಾವುದೇ ಒಬ್ಬ ವ್ಯಕ್ತಿಯ ದೃಷ್ಟಿಯಲ್ಲಿ ಹೇಳುವುದಾದರೆ, ಸಮಾಜವು ಹುಟ್ಟುವಿಕೆಗಿಂತ ಮೊದಲಿನಿಂದಲೂ ಸಾವಿನ ಅನಂತರವು ಬದುಕಿರುವುದು. ಆದ್ದರಿಂದ ಸಮಾಜವು ನಿರಂತರ ಮತ್ತು ಸರ್ವವ್ಯಾಪಕ,

2) ರಕ್ಷಣೆ ಹಾಗೂ ಸಂಶೋಷಣೆಗೆ ಅಗತ್ಯವಾದುದು: ಜನ ಸಮೂಹದ ಹೋಲಿಕೆ-ವ್ಯತ್ಯಾಸ, ಪರಸ್ಪರ ಸಹಾಯ, ಸಹಕಾರ, ಶ್ರಮವಿಭಜನೆ, ಪರಸ್ಪರಾವಲಂಬನೆ, ಸಾಮಾಜಿಕ ನಿಯಂತ್ರಣ, ಸಾಮಾಜಿಕ ಪರಿವತ ಅಧಿಕಾರ ಸ್ವಾತಂತ್ರ್ಯ, ಸಂಸ್ಕೃತಿ-ಸಾಮರಸ್ಯ. ಇವೆಲ್ಲವುಗಳ ಸಮ್ಮಿಶ್ರಣಗೊಂಡ ಸಂಕೀರ್ಣ ವ್ಯವಸ್ಥೆಯೇ


3) ವ್ಯಕ್ತಿತ್ವ ನಿರ್ಮಾಣದಲ್ಲಿ ಸಮಾಜದ ಪಾತ್ರ ಹಿರಿದಾದುದು: ಸಮಾಜವು ನಮ್ಮ ಜೀವನದ ದಿಕ್ಕು-ದೆಸೆಗಳನ್ನು, ಗೊತ್ತು-ಗುರಿಗಳನ್ನು ನಿರ್ಧಾರಪಡಿಸುವುದು. ಮಾನವ ಸಹಜ ಗುಣಗಳನ್ನು ಬೆಳೆಸಿಕೊಳ್ಳುವುದೂ ಸಮಾಜದಲ್ಲಿಯೇ, ಸಮಾಜವು ನಮ್ಮ ಪ್ರತಿಭೆಯ ಪ್ರಕಟಣೆಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವುದು, ಜೊತೆಗೆ ನಮ್ಮ ಮಾನವ ಸಹಜ ದೌರ್ಬಲ್ಯಗಳನ್ನು, ದೋಷಗಳನ್ನು ಅದಮ್ಯ ಬಯಕೆ ಆಕಾಂಕ್ಷೆಗಳನ್ನು ನಿಯಂತ್ರಣದಲ್ಲಿಡುವ ಸಾಧನವಾಗಿಯೂ ಕೆಲಸ ಮಾಡುತ್ತದೆ. ನಮ್ಮ ಭೌತಿಕ ಬೆಳವಣಿಗೆ, ಅವಶ್ಯಕತೆಗಳ ಈಡೇರಿಕೆ, ಭೌತಿಕ ಅಗತ್ಯಗಳ ಪೂರೈಕೆ, ಇವೆಲ್ಲವುಗಳನ್ನು ಸಮಾಜದ ಹೊರತಾಗಿ


ಕಲ್ಪಿಸಿಕೊಳ್ಳುವುದು ಕಷ್ಟಸಾಧ್ಯ.


1) ಬದುಕನ್ನು ಗಟ್ಟಿಗೊಳಿಸುತ್ತದೆ: ಸಮಾಜವೆಂಬ ವಿಶಾಲವಾದ ವ್ಯವಸ್ಥೆಯು ನಮ್ಮ ಜೀವನವನ್ನು ಸಂಪೂರ್ಣವಾಗಿ ಆವರಿಸಿದೆ. ಅದು ನಮ್ಮನ್ನು ಕೇವಲ ಹೊರಗಿನಿಂದ ಆವರಿಸುವುದು ಮಾತ್ರವಲ್ಲ, ಅದು ನಮ್ಮ ಮನಸ್ಸಿನ ಆಳವನ್ನು ಭೇದಿಸುವುದು. ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧವು ಸರಳವಾದುದಲ್ಲ. ವ್ಯಕ್ತಿಯ ಅನನ್ಯತೆಯನ್ನು, ಚಿಂತನೆ ಮತ್ತು ಭಾವನೆಗಳನ್ನು ರೂಪಿಸುವುದು. ಆ ಮೂಲಕ ನಮ್ಮ ಸಾಮಾಜಿಕ ಬದುಕನ್ನು ಗಟ್ಟಿಗೊಳಿಸುವುದೇ ಸಮಾಜ,


ಸಮಾಜದ ವಿವಿಧ ಪ್ರಕಾರಗಳು


ಸಮಾಜವು ಒಂದೇ ತೆರನಾಗಿಲ್ಲ. ವಿಭಿನ್ನ ಬಗೆಯಲ್ಲಿ ಸಮಾಜಗಳಿವೆ. ಆದುದರಿಂದ ನಾವು ಸಮಾಜವನ್ನು ಉದ್ಯೋಗ ಮತ್ತು ದುಡಿಮೆಯ ಚಟುವಟಿಕೆಗಳ ಆಧಾರದಲ್ಲಿ ವಿವಿಧ ಬಗೆಯಲ್ಲಿ ವರ್ಗಿಕರಿಸುತ್ತೇವೆ. ಅವು ಯಾವುವೆಂದರೆ: 1) ಬೇಟೆ ಮತ್ತು ಆಹಾರ ಸಂಗ್ರಹಣಾ ಸಮಾಜ 2) ಪಶುಪಾಲನ ಸಮಾಜ. 3) ಕೃಷಿ ಸಮಾಜ 4) ಗ್ರಾಮೀಣ ಸಮಾಜ 5) ನಗರ ಸಮಾಜ 6) ಕೈಗಾರಿಕಾ ಸಮಾಜ 1) ಮಾಹಿತಿ ಸಮಾಜ,


1. ಬೇಟೆ ಮತ್ತು ಆಹಾರ ಸಂಗ್ರಹಣಾ ಸಮಾಜ : ಮಾನವ ಸಮಾಜದ ವಿಕಾಸದಲ್ಲಿ ಮೊದಲನೇ ಹಂತ ಬೇಟೆ ಮತ್ತು ಆಹಾರ ಸಂಗ್ರಹಣೆ, ಸಮಾಜದ ಅತ್ಯಂತ ಪ್ರಾಚೀನ ಮತ್ತು ಸರಳವಾದ ಹಂತವಾಗಿದೆ. ಈ ಸಮಾಜವು ಚಿಕ್ಕ ಸಮುದಾಯವಾಗಿದ್ದು, ಬೇಟೆಯಾಡುವುದು, ಮೀನುಗಾರಿಕೆ ಮಾಡುವುದು, ಜೇನು ಮತ್ತು ಗೆಡ್ಡೆ-ಗೆಣಸುಗಳನ್ನು ಸಂಗ್ರಹಿಸುವುದು ಪ್ರಮುಖ ಕಾರ್ಯವಾಗಿತ್ತು. ಇಲ್ಲಿ ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಸ್ಥಾನಮಾನ ನಿಗದಿಯಾಗಿರುತ್ತದೆ. ಸಂಪತ್ತನ್ನು ಸಂಪಾದಿಸುವ ಆಸೆ ಇಲ್ಲಿ ಇರಲಿಲ್ಲ. ಹಂಚಿಕೊಂಡು ಬದುಕುವುದು ಈ ಸಮಾಜದ ಲಕ್ಷಣವಾಗಿತ್ತು. ಬೇಟೆ ಸಮಾಜದಲ್ಲಿ ಜನರು ತಮ್ಮ ಆಹಾರಕ್ಕೆ ಪ್ರಾಣಿಗಳನ್ನು ಕಲ್ಲಿನ ಆಯುಧಗಳಿಂದ ಬೇಟೆಯಾಡುತ್ತಿದ್ದರು. 2. ಪಶುಪಾಲನ ಸಮಾಜ: ಮಾನವ ಸಮಾಜದ ವಿಕಾಸದಲ್ಲಿ ಪಶುಪಾಲನೆ ಎರಡನೆಯ ಹಂತ


ಎಂದು ಹೇಳಲಾಗುತ್ತದೆ. ಜನರು ತಮ್ಮ ಜೀವನಾಧಾರಕ್ಕೆ ಪಶುಗಳನ್ನು (ದನ, ಎಮ್ಮೆ, ಹಸು, ಕುರಿ, ಆಡು, ಇತ್ಯಾದಿ) ಹಿಂಡು-ಹಿಂಡಾಗಿ ಸಾಕುವ ಸಮಾಜವನ್ನು ಪಶುಪಾಲನ ಸಮಾಜ ಎಂದು ಕರೆಯಲಾಗುತ್ತದೆ. ಈ ಸಮಾಜದಲ್ಲಿ ಸುಮಾರು ನೂರರಿಂದ ಸಾವಿರದಷ್ಟು ಜನರಿರುತ್ತಾರೆ. ಪಶುಪಾಲನೆಯು ಈ ಸಮಾಜದ ಪ್ರಮುಖ ಕೆಲಸವಾಗಿತ್ತು. ಈ ಸಮಾಜವು ಒಬ್ಬ ನಾಯಕನ ನಿಯಂತ್ರಣಕ್ಕೆ ಒಳಪಟ್ಟಿರುತ್ತಿತ್ತು. ಈ ಜನರು ಜೀವನೋಪಾಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪಶುಪಾಲನೆ, ಬೇಟೆಯಾಡುವಿಕೆ, ಆಹಾರ ಸಂಗ್ರಹಿಸುವಿಕೆ ಕೆಲಸಗಳಲ್ಲಿ ತೊಡಗಿರುತ್ತಾರೆ.

ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮಾಜ: ಮಾನವಶಾಸ್ತ್ರಜ್ಞರು ಆರಂಭದಲ್ಲಿ ಪಶುಪಾಲನೆಯ ಹಿನ್ನೆಲೆಯವರನ್ನು ಮಾತ್ರ ಅಲೆಮಾರಿ ಸಮುದಾಯದವರೆಂದು ಗುರುತಿಸಿದ್ದಾರೆ. ಎನ್ನೈಕ್ಲೋಪಿಡಿಯ ಬ್ರಿಟಾನಿಕಾದ ಪ್ರಕಾರ ಅಲೆಮಾರಿತನವು ಒಂದು ಜೀವನ ವಿಧಾನ, ಬೇಟೆ ಮತ್ತು ಆಹಾರ ಸಂಗ್ರಹಣೆ, ಪಶುಪಾಲನೆ ಅಥವಾ ವ್ಯಾಪಾರಕ್ಕಾಗಿ ಮಾನವ ಒಂದೆಡೆ ನೆಲೆಯೂರದೇ, ದಿಕ್ಕುದೆಸೆಯಿಲ್ಲದೆ ಕಾಲಾನುಕ್ರಮವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಲೆಯುವಿಕೆಯನ್ನು ಅಲೆಮಾರಿತನ ಎನ್ನಲಾಗುತ್ತದೆ. ಇದು ವಲಸೆ ಪ್ರಕ್ರಿಯೆಗೂ ಭಿನ್ನ. ಪಶುಪಾಲನೆ ಅಥವಾ ಇತರೆ ಕಸುಬುಗಳ ಹಿನ್ನೆಲೆಯ ಸಮುದಾಯಗಳು ಅಲ್ಲಲ್ಲಿ ಸ್ಥಾಯಿಯಾಗಿ ನೆಲೆನಿಂತರೂ ಪಶುಸಂಗೋಪನೆಗಾಗಿ ಅಥವಾ ಇತರೆ ಕಸುಬುಗಳ ನಿರ್ವಹಣೆಗಾಗಿ ಅಲೆಮಾರಿತನ ಅನಿವಾರ್ಯವಾಗಿ ಮುಂದುವರಿಸುವರು. ಇಂತಹ ಸಮುದಾಯಗಳನ್ನು ಅರೆ ಅಲೆಮಾರಿ ಸಮುದಾಯ (Semi-nomadic Tribes)ಗಳೆಂದು ಕರೆಯಲಾಗುವುದು. ಸಮುದಾಯಗಳಿಗೆ ಇರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಭದ್ರತೆಯ ಆಧಾರದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸ್ಥಿತಿಯನ್ನು ನಿರ್ಧರಿಸಲಾಗುತ್ತದೆ.


3. ಕೃಷಿ ಸಮಾಜ : ಸಮಾಜ ವಿಕಾಸದ ಈ ಹಂತದಲ್ಲಿ ಮಾನವ ಅಲೆಮಾರಿ ಬದುಕನ್ನು ಬಿಟ್ಟು ಒಂದೇ ಸ್ಥಳದಲ್ಲಿ ನೆಲೆನಿಂತು ವಾಸಿಸುವುದು. ಈ ಸಮಾಜವು ಕೃಷಿಯನ್ನು ಅವಲಂಬಿಸಿದ ಗ್ರಾಮ ವಾಸಿಗಳ ಸಮೂಹವಾಗಿದೆ. ಹೆಚ್ಚಿನ ಜನರು ವ್ಯವಸಾಯವನ್ನು ಅವಲಂಬಿಸಿ ಬದುಕುವ ಸಮಾಜವನ್ನೇ ಕೃಷಿ ಸಮಾಜ ಎಂದು ಕರೆಯುತ್ತಾರೆ. ವ್ಯವಸಾಯದ ಮೂಲಕ ಆಹಾರ ಉತ್ಪಾದನೆ ಕೃಷಿ ಸಮಾಜದ ಮತ್ತೊಂದು ಲಕ್ಷಣವಾಗಿದೆ. ಕೃಷಿಗೆ 'ಬೇಸಾಯ' ಎಂದೂ ಕೃಷಿಕಾರರನ್ನು ಬೇಸಾಯಗಾರರು, ರೈತರು ಎಂದೂ ಕರೆ ಯುತ್ತಾರೆ. ಕೃಷಿಗೆ ಹೆಚ್ಚಾಗಿ ಪ್ರಾಣಿ ಮತ್ತು ನೇಗಿಲನ್ನು ಬಳಸುತ್ತಾರೆ.


ಭಾರತ ಎಂದರೆ ಗ್ರಾಮಗಳ ನಾಡು ಕೃಷಿಕರ ಬೀಡು' ಎಂದು ಹೇಳಲಾಗುತ್ತದೆ. ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಗ್ರಾಮಗಳ ಸಂಘಟನೆ ಹಾಗೂ ಅವುಗಳ ಆಡಳಿತದ ವಿಷಯವಾಗಿ ಹಲವು ವಿವರಣೆಗಳಿರುವುದನ್ನು ಕಾಣಬಹುದು. ಋಗೈದದಲ್ಲಿ ಗ್ರಾಮದ ಮುಖ್ಯಸ್ಥನಿಗೆ 'ಗ್ರಾಮಸ್ಥ'ನೆಂದು ವರ್ಣಿಸಲಾಗಿದೆ. ಹಲವು ಗ್ರಾಮಗಳ ಒಕ್ಕೂಟಕ್ಕೆ ವಿಶ, ಜನ, ದೇಶ ಎಂಬ ಆಡಳಿತ ವಿಂಗಡನೆ ಇತ್ತು. ಮಹಾಭಾರತದಲ್ಲಿ ಗ್ರಾಮದ ಮುಖ್ಯಸ್ಥನಿಗೆ 'ಗ್ರಾಮಿಣಿ' ಎಂದು ಕರೆಯಲಾಗಿದೆ. ದಶಮುಖಿ, ಶತಮುಖಿ ಹಾಗೂ ಅಧಿಪತಿ ಎಂದು ಗ್ರಾಮ ಒಕ್ಕೂಟಗಳ ಮುಖ್ಯಸ್ಥರನ್ನು ಕರೆಯಲಾಗುತ್ತಿತ್ತು.


ಮಾನವ ಸಮಾಜವು ಗ್ರಾಮ ಎಂಬ ತೊಟ್ಟಿಲಲ್ಲಿಯೇ ವಿಕಾಸವಾಗಿದೆ ಎಂದು ಬೋಗಾರ್ಡಸ್ ಎಂಬುವರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಮ ಎಂಬುದು ಅತ್ಯಂತ ಪ್ರಾಚೀನ ನೆಲೆಯಾಗಿದ್ದರೂ ಕೂಡಾ ಇದನ್ನು ಅರ್ಥಪೂರ್ಣವಾಗಿ ವ್ಯಾಖ್ಯಾನಿಸುವುದು ಸಾಧ್ಯವಾಗಿಲ್ಲ. ಬೋಗಾರ್ಡಸ್ ಎಂಬ ಶಾಸ್ತ್ರಜ್ಞರ ಪ್ರಕಾರ 'ಕಡಿಮೆ ಜನಸಾಂದ್ರತೆಯುಳ್ಳ, ಸರಳ ಹಾಗೂ ಮಿತವ್ಯಯವಾದ ಜೀವನ ಸಾಗಿಸುವ, ಪ್ರಾಥಮಿಕ ಸಂಬಂಧಗಳನ್ನೊಳಗೊಂಡ ಕುಟುಂಬಗಳ ಒಕ್ಕೂಟವೇ ಗ್ರಾಮ ಸಮುದಾಯವಾಗಿದೆ, ಎಸ್.ಸಿ. ದುಬೆಯವರ ಪ್ರಕಾರ 'ಒಂದೇ ಸ್ಥಳದಲ್ಲಿ ವಾಸವಾಗಿರುವ ಕುಟುಂಬಗಳ ಸಮೂಹವೇ ಗ್ರಾಮ'. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮಾಜೀಕರಣ ಹಾಗೂ ಸಾಮಾಜಿಕ ನಿಯಂತ್ರಣಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ.


ಸಾ.ಶ.ಪೂ. 3000 ರ ಸುಮಾರಿಗೆ ನೇಗಿಲ ಸಂಶೋಧನೆಯೊಂದಿಗೆ 'ಕೃಷಿಕ್ರಾಂತಿ' ಆರಂಭಗೊಂಡಿತು ಎಂದು ಹೇಳಬಹುದು. ಗ್ರಾಮಗಳು ಈ ದೇಶದ ಜೀವನಾಡಿಗಳಿದ್ದಂತೆ. ಭಾರತದಲ್ಲಿ ಸುಮಾರು ಆರು ಲಕ್ಷದಷ್ಟು ಇರುವ ಕೃಷಿ ಗ್ರಾಮಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿವೆ. ದೇಶದ ಬಹುಸಂಖ್ಯಾತ ಜನಗಳು ಇಂದಿಗೂ ಗ್ರಾಮಗಳಲ್ಲಿಯೇ ವಾಸಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ತಮ್ಮ ಜೀವನೋಪಾಯವನ್ನು ಕಂಡುಕೊಂಡಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಶೇಕಡ 59ರಷ್ಟು ಪುರುಷರು ಮತ್ತು ಶೇಕಡ 75ರಷ್ಟು ಮಹಿಳೆಯರು ಜೀವನೋಪಾಯಕ್ಕೆ ಕೃಷಿಯನ್ನು ನೇರವಾಗಿ ಅವಲಂಬಿಸಿದ್ದಾರೆ.


Post a Comment (0)
Previous Post Next Post