ಕನ್ನಡ ಸಂಧಿಗಳು

ಕನ್ನಡ ಸಂಧಿಗಳು

ಅಕ್ಷರಗಳ ಮಾಯಾಲೋಕ

ಕನ್ನಡ ಸಂಧಿಗಳನ್ನು ಅಕ್ಷರಗಳ ಆಧಾರದ ಮೇಲೆ ಪುನಃ ಎರಡು ಭಾಗಗಳಾಗಿ ವಿಂಗಡಿಸಬಹುದು.

🔡

ಸ್ವರ ಸಂಧಿಗಳು

  1. ಲೋಪಸಂಧಿ
  2. ಆಗಮಸಂಧಿ
✍️

ವ್ಯಂಜನ ಸಂಧಿಗಳು

  1. ಆದೇಶ ಸಂಧಿ

📚ಉದಾಹರಣೆಗಳು

ಊರಲ್ಲಿ, ಮೊಟ್ಟೆಯಿಡು, ಬೆಟ್ಟದಾವರೆ ಮೊದಲಾದ ಪದಗಳನ್ನು ಊರು + ಅಲ್ಲಿ, ಮೊಟ್ಟೆ + ಇಡು, ಬೆಟ್ಟ + ತಾವರೆ ಎಂದು ಓದಬಹುದಾದರೂ ನಾವು ಮಾತನಾಡುವಾಗ ಸುಲಭವಾಗಲು ಈ ಪದಗಳನ್ನು ಕೂಡಿಸಿ ಓದುತ್ತೇವೆ.

ಹೀಗೆ ಪದಗಳನ್ನು ಎಡೆಬಿಡದೆ ಒಟ್ಟಿಗೆ ಕೂಡಿಸಿ ಓದುವುದಕ್ಕೆ ಅಥವಾ ಹೇಳುವುದಕ್ಕೆ 'ಸಂಧಿ' ಎಂದು ಹೆಸರು.

ಸಂಧಿಕಾರ್ಯ

ಈ ಪದಗಳನ್ನು ಸೇರಿಸಿ ಹೇಳುವಾಗ ಆ ಪದಗಳಲ್ಲಿ ಇರುವ ಅಕ್ಷರಗಳಲ್ಲಿ ಒಂದು ಅಕ್ಷರ ಬಿಟ್ಟುಹೋಗಬಹುದು (ಉದಾಹರಣೆ ಗಮನಿಸಿ), ಇಲ್ಲವೇ ಇರುವ ಅಕ್ಷರಗಳ ಜೊತೆಗೆ ಒಂದು ಅಕ್ಷರ ಹೊಸದಾಗಿ ಸೇರಿಕೊಳ್ಳಬಹುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬರಬಹುದು. ಹೀಗೆ ಸಂಧಿಯಾಗುವಾಗ ಅಕ್ಷರಗಳು ಲೋಪವಾಗುವುದು, ಅಕ್ಷರ ಬಂದು ಸೇರುವುದು ಅಥವಾ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬಂದು ಸೇರುವುದಕ್ಕೆ 'ಸಂಧಿಕಾರ್ಯ' ಎನ್ನುವರು.

🔍ಸಂಧಿ ಪ್ರಕ್ರಿಯೆ

ಪದ 1
+
ಪದ 2
ಸಂಧಿ ಪದ

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now