- ಕಾಲ: ಕ್ರಿ.ಶ.ಸು. 1145
- ಆಶ್ರಯದಾತ: ಚಾಲುಕ್ಯ ಜಗದೇಕಮಲ್ಲ
ಪ್ರಮುಖ ಕೃತಿಗಳು:
- ವರ್ಧಮಾನಪುರಾಣ
- ಛಂದೋವಿಚಿತಿ (ಉಪಲಬ್ಧವಾಗಿಲ್ಲ)
- ಅಭಿದಾನ ವಸ್ತುಕೋಶ
- ಕಾವ್ಯಾವಲೋಕನ
- ಕರ್ಣಾಟಕ ಭಾಷಾಭೂಷಣ
- ಅಭಿದಾನ ರತ್ನಮಾಲಾ
ಅಭಿದಾನ ವಸ್ತುಕೋಶ: ಕಂದ ಮತ್ತು ವೃತ್ತಗಳಲ್ಲಿ ರಚಿಸಿದ ನಿಘಂಟು. ಕನ್ನಡ ಕಾವ್ಯಗಳಲ್ಲಿ ಸಂಸ್ಕೃತ ಶಬ್ದಗಳ ಅರ್ಥಗಳ ನಿರೂಪಣೆ.
ಅಭಿದಾನ ರತ್ನಮಾಲಾ: ಭಟ್ಟಹಲಾಯುಧನ ಸಂಸ್ಕೃತ ನಿಘಂಟಿಗೆ ಕನ್ನಡ ಟೀಕೆ. ಇಲ್ಲಿ ಸಂಸ್ಕೃತ ಮತ್ತು ಸಮಸಂಸ್ಕೃತ ಶಬ್ದಗಳಿಗೆ ಅರ್ಥ ನೀಡಲಾಗಿದೆ.
ಶಬ್ದಸ್ಮೃತಿ: ಕನ್ನಡ ವ್ಯಾಕರಣ ಗ್ರಂಥಗಳಲ್ಲಿ ಮೊದಲ ಲಭ್ಯವಿರುವ ಕೃತಿ. ಇದು ಕಾವ್ಯಾವಲೋಕನದ ಮೊದಲ ಅಧ್ಯಾಯ. ಈ ಗ್ರಂಥ ವ್ಯಾಕರಣದ ಸಂಪೂರ್ಣ ನಿರೂಪಣೆಯಾಗಿ, ಕನ್ನಡದಲ್ಲಿ ಮೊಟ್ಟಮೊದಲ ವ್ಯಾಕರಣ ಗ್ರಂಥವೆಂದು ಹೆಗ್ಗಳಿಕೆಗೆ ಅರ್ಹವಾಗಿದೆ.
Post a Comment