ನೀವು ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಬಳಕೆದಾರರಾಗಿದ್ದರೆ, ಡಾಟಾ ಮತ್ತು ಬ್ಯಾಂಕ್ ಖಾತೆಗಳ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಗೂಗಲ್ ನೀಡಿದ ಎಚ್ಚರಿಕೆ ಮತ್ತು ಕೆಲವೊಂದು ಎಫೆಕ್ಟಿವ್ ಟಿಪ್ಸ್‌ಗಳೊಂದಿಗೆ ನಿಮ್ಮ ಡಿವೈಸುಗಳನ್ನು ಮಾಲ್‌ವೇರ್‌ನಿಂದ ರಕ್ಷಿಸಬಹುದು.
ಮಾಲ್‌ವೇರ್ ಎಂದರೇನು?
- ಮಾಲ್‌ವೇರ್ ಒಂದು ದುರುದ್ದೇಶಪೂರಿತ ಸಾಫ್ಟ್‌ವೇರ್ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಸಮಸ್ಯೆ ಉಂಟುಮಾಡುತ್ತದೆ.
- ಇದು ಡಾಟಾ ಕದಿಯಲು, ಕಂಪ್ಯೂಟರ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸಲು, ಹಾಗೂ ಫೇಕ್ ಇಮೇಲ್ ಕಳುಹಿಸಲು ಬಳಸಬಹುದು.
ಪ್ರಮುಖ ಮಾಲ್‌ವೇರ್‌ಗಳ ಪ್ರಕಾರಗಳು:
- ವೈರಸ್: ಹಾನಿಕಾರಕ ಪ್ರೋಗ್ರಾಂ, ಡಾಟಾ ಕದಿಯಲು ಮತ್ತು ಕಂಪ್ಯೂಟರ್‌ಗೆ ಹಾನಿ ಮಾಡಲು ಬಳಸುತ್ತದೆ.
- Worm: ಇತರ ಕಂಪ್ಯೂಟರ್‌ಗಳಿಗೆ ಕಾಪಿ ಕಳುಹಿಸಲು ಹಾನಿಗೊಳಗಾದ ಪ್ರೋಗ್ರಾಂ.
- ಸ್ಪೈವೇರ್: ಸ್ಕೃತವಾಗಿ ಡಾಟಾ ಸಂಗ್ರಹಿಸಬಲ್ಲದು.
- Adware: ಜಾಹೀರಾತುಗಳನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡಬಲ್ಲದು.
- ಟ್ರೋಜನ್ ಹಾರ್ಸ್: ಮಾಹಿತಿಗಳನ್ನು ಕದಿಯಲು ಹಾಗೂ ಪಿಸಿಗೆ ಹಾನಿ ಮಾಡಲು ಬಳಕೆಯಾಗುವ ಪ್ರೋಗ್ರಾಂ.
ಮಾಲ್‌ವೇರ್‌ಗಳು ಹೇಗೆ ಹರಡುತ್ತವೆ?
- ಉಚಿತ ಸಾಫ್ಟ್‌ವೇರ್‌ಗಳ ಮೂಲಕ.
- ಹಾನಿಗೊಳಗಾದ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದರಿಂದ.
- ಫೇಕ್ ಪಾಪಪ್ ವಿಂಡೋ ಅಥವಾ ಎರ್‌ರರ್ ಮೆಸೇಜ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ.
- ಇಮೇಲ್ ಅಟ್ಯಾಚ್‌ಮೆಂಟ್‌ಗಳನ್ನು ಓಪನ್ ಮಾಡುವ ಮೂಲಕ.
ಮಾಲ್‌ವೇರ್ ತಡೆಗಟ್ಟುವ ಉಪಾಯಗಳು:
- ಸಾಫ್ಟ್‌ವೇರ್ ಅಪ್‌ಡೇಟ್: ನಿಮ್ಮ ಡಿವೈಸುಗಳನ್ನು ಮತ್ತು ಸಾಫ್ಟ್‌ವೇರ್‌ಗಳನ್ನು ನಿರಂತರವಾಗಿ ಅಪ್‌ಡೇಟ್ ಮಾಡಿರಿ.
- ಸುರಕ್ಷಿತ ಲಿಂಕ್ ಕ್ಲಿಕ್: ಯಾವುದೇ ಲಿಂಕ್ ಅಥವಾ ಫೈಲ್ ಡೌನ್‌ಲೋಡ್ ಮಾಡುವ ಮುನ್ನ ಪರಿಶೀಲಿಸಿ.
- ಆಂಟಿವೈರಸ್ ಬಳಕೆ: ಉತ್ತಮ ಗುಣಮಟ್ಟದ ಆಂಟಿವೈರಸ್ ಸಾಫ್ಟ್‌ವೇರ್ ಬಳಸಿ.
- ಇಮೇಲ್ ಎಚ್ಚರಿಕೆ: ಇಮೇಲ್ ಅಟ್ಯಾಚ್‌ಮೆಂಟ್‌ಗಳನ್ನು ಓಪನ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ.
Post a Comment