ಜನನ:
ಕ್ರಿ.ಶ. 902, ದುಂದುಭಿ ಸಂವತ್ಸರ.
ತಂದೆ:
ಭೀಮಪ್ಪಯ್ಯ.
ತಾಯಿ:
ಅಬ್ಬಣಬ್ಬೆ (ಬೆಳ್ವೊಲದ ಅಣ್ಣಿಗೇರೆಯ ಜೋಯಿಸ ಸಿಂಘನ ಮೊಮ್ಮಗಳು).
ಜನ್ಮಸ್ಥಳ:
ವೆಂಗಿ ಪುಳುಪು, ವೆಂಗಿ ಮಂಡಳ (ಆಂಧ್ರ ಪ್ರದೇಶ), ವೇಮಲವಾಡ, ರಾಜಮಂಡ್ರಿ ಜಿಲ್ಲೆ (ಅಗ್ರಹಾರವೆನಿಸಿದ 'ವೆಂಗಿಪಳು').
ಗುರು:
ದೇವೇಂದ್ರಮುನಿ.
ವಿದ್ಯಾಭ್ಯಾಸ:
ಪಂಪನು ಗಣಿತ, ವ್ಯಾಕರಣ, ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯಶಾಸ್ತ್ರ, ವೇದ ಶాస్త್ರ ಇತ್ಯಾದಿಗಳನ್ನು ಗುರುಕುಲದಲ್ಲಿ ಅಭ್ಯಾಸ ಮಾಡಿದ್ದ. ಈತನ ಗುರು ದೇವೇಂದ್ರ ಮುನೀಂದ್ರರು.
ವೃತ್ತಿ:
ವೆಂಗಿ ಚಾಲುಕ್ಯವಂಶದ ಎರಡನೇ ಅರಿಕೇಸರಿಯ ಆಸ್ಥಾನ ಪಂಡಿತನಾಗಿ ಸೇವೆ ಸಲ್ಲಿಸಿದ್ದ.
ಸಾಹಿತ್ಯಕೃತಿಗಳು:
ಆದಿಪುರಾಣ:
ಮೊದಲನೆಯ ತೀರ್ಥಂಕರನಾದ ವೃಷಭದೇವನ ಬಗ್ಗೆ ಬರೆದ ಜೈನಕಾವ್ಯ. ಇದನ್ನು ಜಿನಸೇನಾಚಾರ್ಯರ ಪೂರ್ವಪುರಾಣದ ಆಧಾರದ ಮೇಲೆ ರಚಿಸಲಾಗಿದೆ. ಕೃತಿಯಲ್ಲಿಯು 16 ಆಶ್ವಾಸಗಳು ಮತ್ತು 1555 ಪದ್ಯಗಳಿವೆ, ಮತ್ತು ಜೈನ ಧರ್ಮದ ವರ್ಣನೆಯ ಜೊತೆಗೆ ಸರ್ವಧರ್ಮದ ಸಮನ್ವಯವನ್ನು ಗಮನಾರ್ಹವಾಗಿ ಮೆರೆದಿದ್ದಾರೆ.ವಿಕ್ರಮಾರ್ಜುನ ವಿಜಯ (ಪಂಪಭಾರತ):
ಮಹಾಭಾರತದ ಕನ್ನಡ ಅನುವಾದವಾಗಿರುವ ಈ ಕೃತಿಯಲ್ಲಿ, ಪಂಪನು ವ್ಯಾಸರಿಂದ ರಚಿತವಾದ ಮಹಾಭಾರತವನ್ನು ಕನ್ನಡ ಭಾಷೆಗೆ ತಂದ ಶ್ರೇಯಸ್ಸು ಪಡೆದಿದ್ದಾನೆ. ಕೃತಿಯಲ್ಲಿ ಅರ್ಜುನನ ಪ್ರಧಾನ ಪಾತ್ರವನ್ನು ಅರಿಕೇಸರಿಯೊಂದಿಗೆ ಹೋಲಿಸಿದ್ದಾನೆ. ಈ ಕಾವ್ಯದಲ್ಲಿ ಪಂಪ ತನ್ನ ಕಾಲದ ಸಮಾಜ, ಸಂಸ್ಕೃತಿ, ಆಟಗಳು, ವಿದ್ಯಾಭ್ಯಾಸ ಪದ್ಧತಿ, ಮತ್ತು ಜನರ ವಿಲಾಸಿ ಜೀವನವನ್ನು ಸಮಗ್ರವಾಗಿ ಚಿತ್ರಿಸಿದ್ದಾರೆ.
ಪ್ರಶಸ್ತಿ, ಪುರಸ್ಕಾರ ಮತ್ತು ಬಿರುದುಗಳು:
ಸಂಸಾರ ಸಾರೋದಯ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ, ಆದಿಕವಿ, ಕನ್ನಡ ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ ಮುಂತಾದ ಬಿರುದುಗಳನ್ನು ಪಂಪ ಪಡೆದಿದ್ದಾನೆ. ಪಂಪನ ಕಾವ್ಯ ಶ್ರೇಷ್ಠತೆಯನ್ನು ಹೊಗಳಿ, ಕವಿ ನಾಗರಾಜನು "ಪಸರಿಪ ಕನ್ನಡಕ್ಕೋರ್ವನೇ ಸತ್ಕವಿ ಪಂಪನಾವಗಂ" ಎಂದಿದ್ದಾರೆ.
ಕವಿ ಸಂದೇಶ:
'ಧರ್ಮಂ ಪ್ರಧಾನಂ ಅರ್ಥಂ ಧರ್ಮಾಂಘ್ರಿಪಫಳಂ ಅದರ್ಕ್ಕೆ ರಸಮದುಕಾಮಂ' ಎಂದು ಪಂಪನು ತನ್ನ ಜೀವನದ ದೃಷ್ಟಿಕೋನವನ್ನು ವಿವರಿಸಿದ್ದಾನೆ.
ಕನ್ನಡನಾಡಿನ ಮೇಲೆ ಹೆಮ್ಮೆ:
ಪಂಪನು ಕನ್ನಡನಾಡಿನ ಸೌಂದರ್ಯವನ್ನು ತನ್ನ ಕಾವ್ಯಗಳಲ್ಲಿ ಹೊಗಳುತ್ತಾ, ಬನವಾಸಿ ದೇಶದ ಸೊಬಗನ್ನು ಈ ರೀತಿ ವರ್ಣಿಸಿದ್ದಾರೆ:
"ಸೊಗಸಾಗಿ ಬಂದ ಮಾಮರನೆ ತಲ್ತೆಲೆವಳ್ಳಿಯೆ ಪೂತಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ
ಟ್ಟುಗಳೊಳಮಾವ ನಂದನನಂಗಳೊಳಂ ಬನವಾಸಿ ದೇಶದೊಳ್|| ೪-೨೮||"
"ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೪-೨೯||"
"ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||"
Post a Comment