ಕವಿತೆಯ ಲಾಲಿತ್ಯದಲ್ಲಿ ಶಿಸ್ತುಗೊಳಿಸಿ, ಸ್ಪಷ್ಟತೆಯಿಂದ ಶಾಸ್ತ್ರವನ್ನು ನಿರೂಪಿಸುವ ವಿಶಿಷ್ಟ ಪ್ರತಿಭೆಯ ಶ್ರೀಧರಾಚಾರ್ಯನು ಕ್ರಿಸ್ತ ಶಕ 1049ರ ಕಾಲಕ್ಕುವಳಿದವನು. ಈತನು ಚಾಲುಕ್ಯ ರಾಜರಾದ ಆಹವಮಲ್ಲ (ಮೊದಲನೇ ಸೋಮೇಶ್ವರ)ನ ರಾಜಸಭೆಯಲ್ಲಿ ಸ್ಥಾನ ಹೊಂದಿದ್ದ.
ಶ್ರೀಧರಾಚಾರ್ಯನು ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥವಾಗಿರುವ ಜಾತಕ ತಿಲಕವನ್ನು ಬರೆದಿದ್ದಾನೆ. ಇದಲ್ಲದೆ, ಈತನು ಚಂದ್ರಪ್ರಭ ಪುರಾಣ ಎಂಬ ಮತ್ತೊಂದು ಕೃತಿಯನ್ನು ರಚಿಸಿದ್ದಾನೆ, ಆದರೆ ಆ ಕೃತಿ ಈಗ ಲಭ್ಯವಿಲ್ಲ.
ಜಾತಕ ತಿಲಕದಲ್ಲಿ, ಶ್ರೀಧರಾಚಾರ್ಯನು ಶಾಸ್ತ್ರವನ್ನು ಕಾವ್ಯ ರೂಪದಲ್ಲಿ ಶಬ್ದಸೌಂದರ್ಯ ಮತ್ತು ಪ್ರಸಾದ ಗುಣಗಳಿಂದ ಹೆಣೆದು, ಕಂದ ಮತ್ತು ವೃತ್ತಗಳ ಮೂಲಕ ವ್ಯಾಖ್ಯಾನಿಸಿದ್ದಾನೆ.
Post a Comment