ದ್ವಿರುಕ್ತಿ, ಜೋಡುನುಡಿ, ಅನುಕರಣಾವ್ಯಯ ಮತ್ತು ನುಡಿಗಟ್ಟುಗಳು

 


ದ್ವಿರುಕ್ತಿ

ದ್ವಿರುಕ್ತಿಯ ಅರ್ಥ:
'ದ್ವಿರುಕ್ತಿ' ಪದವು 'ದ್ವಿ' (ಎರಡು) ಮತ್ತು 'ಉಕ್ತಿ' (ಮಾತು) ಎಂಬ ಶಬ್ದಗಳಿಂದ ಬಂದಿದೆ. ಇದು ಒಂದು ಪದ ಅಥವಾ ವಾಕ್ಯವನ್ನು ವಿಶೇಷ ಅರ್ಥವನ್ನು ವ್ಯಕ್ತಪಡಿಸಲು ಎರಡು ಸಲ ಬಳಸುವ ಪದಪ್ರಕ್ರಿಯೆ.

ಉದಾಹರಣೆಗಳು:

  • ಓಡಿಓಡಿ
  • ಬಿದ್ದುಬಿದ್ದು
  • ಮನೆಮನೆ

ಬಳಕೆ:
ದ್ವಿರುಕ್ತಿಯನ್ನು ಸಂತೋಷ, ಅವಸರ, ಸಂಭ್ರಮ, ಕೋಪ, ಅಥವಾ ಹತಾಶೆ ವ್ಯಕ್ತಪಡಿಸಲು ಬಳಸಲಾಗುತ್ತದೆ. ಉದಾಹರಣೆಗೆ:

  • ಬೇಗ ಬೇಗ ಬಾ!
  • ಹೊತ್ತಾಯಿಿತು!
  • ಬನ್ನಿ ಬನ್ನಿ! ನಿಮಗೆ ಸ್ವಾಗತ.
  • ಅಬ್ಬಬ್ಬಾ! ಎಷ್ಟು ರಮಣೀಯ ದೃಶ್ಯ!

ಅತೀ ಹೆಚ್ಚು ಅಥವಾ ಅತೀ ಕಡಿಮೆ ವ್ಯಾಖ್ಯಾನಕ್ಕೆ:
ಉದಾಹರಣೆಗೆ:

  • ಪುಟ್ಟಪುಟ್ಟ ಮಕ್ಕಳು ಆಟವಾಡುತಿದ್ದವು.
  • ಊರೂರು ಅಲೆದರೂ ಅವನಿಗೆ ಕೆಲಸ ಸಿಗಲಿಲ್ಲ.

ಕೆಲವು ವಿಶೇಷ ರೂಪಗಳು:
'ಮೊದಲು ಮೊದಲು' ಎಂದು ಹೇಳುವ ಬದಲು 'ಮೊಟ್ಟಮೊದಲು' ಎಂದು ಬಳಸುತ್ತಾರೆ.

ಇನ್ನಷ್ಟು ಉದಾಹರಣೆಗಳು:

  • ಮತ್ತೆ ಮತ್ತೆ
  • ಈಗೀಗ
  • ದೊಡ್ಡ ದೊಡ್ಡ
  • ಹಿಂದೆ ಹಿಂದೆ
  • ಮುಂದೆ ಮುಂದೆ
  • ಒಳಒಳಗೆ
  • ಬೇಡ ಬೇಡ
  • ಸಣ್ಣ ಸಣ್ಣ
  • ಮನೆ ಮನೆ
  • ಬಟ್ಟಬಯಲು
  • ನಟ್ಟನಡುವೆ
  • ನಿಲ್ಲು ನಿಲ್ಲು
  • ದೂರ ದೂರ
  • ಇರಲಿ ಇರಲಿ
  • ತುತ್ತತುದಿ
  • ಬಿಸಿ ಬಿಸಿ
  • ಅಬ್ಬಬ್ಬಾ
  • ಅದಗೋ ಅದಗೋ
  • ನಡೆಯೆ ನಡೆಯೆ
  • ಬೇರೆ ಬೇರೆ
  • ಬಣ್ಣಬಣ್ಣದ
  • ಹೆಚ್ಹು ಹೆಚ್ಹು
  • ಹೌದು ಹೌದು
  • ಕಟ್ಟಕಡೆ

ಜೋಡು ನುಡಿಗಳು

ಜೋಡು ನುಡಿಗಳ ಅರ್ಥ:
ಜೋಡುನುಡಿಗಳು ದ್ವಿರುಕ್ತಿಯಂತೆ ಕಾಣಿಸುತ್ತವೆ, ಆದರೆ ಇವುಗಳಲ್ಲಿ ಎರಡು ಪದಗಳಿದ್ದು, ಅವುಗಳನ್ನು ಒಟ್ಟಾಗಿ ಉಚ್ಚಾರಿಸುತ್ತಾರೆ. ಆದರೆ, ಈ ಪದಗಳ ಮೊದಲ ಪದಕ್ಕೆ ಮಾತ್ರ ಅರ್ಥವಿರುತ್ತದೆ, ಎರಡನೆಯದು ಅರ್ಥವಿಲ್ಲ.

ಉದಾಹರಣೆಗಳು:

  • ಬಟ್ಟೆಬರೆ
  • ದೇವರು ದಿಂಡರು
  • ಸಾಲಸೋಲ
  • ಸುತ್ತಮುತ್ತ
  • ಕೋಟೆಕೊತ್ತಲು
  • ಕೂಲಿನಾಲಿ
  • ಹುಳಹುಪ್ಪಡಿ
  • ಶಾಲೆಮೂಲೇ
  • ಹಾಳುಮೂಳು
  • ಸಂದಿಗೊಂದಿ
  • ಸೊಪ್ಪುಸದೆ
  • ಹಣ್ಣು ಹಂಪಲು

ಅನುಕರಣಾವ್ಯಯಗಳು

ಅನುಕರಣಾವ್ಯಯಗಳ ಅರ್ಥ:
ನಾವು ಕೆಲವೆಂದಿಗೂ ಅರ್ಥವಿಲ್ಲದ ಧ್ವನಿವಿಶೇಷಗಳನ್ನು ಪುನ: ಉಚ್ಚರಿಸುವಾಗ, ಅವುಗಳನ್ನು ಅನುಕರಣಾವ್ಯಯ ಎಂದು ಕರೆಯುತ್ತೇವೆ.

ಉದಾಹರಣೆಗಳು:

  • ಪಟಪಟ
  • ಸರಸರ
  • ಜುಳುಜುಳು
  • ದಬದಬ
  • ಚುರುಚುರು
  • ಧಗಧಗ
  • ಗುಳುಗುಳು
  • ಥರಥರ
  • ಘಮಘಮ
  • ಚಟಚಟ
  • ಗುಡುಗುಡು
  • ಮಿಣಿಮಿಣಿ

ನುದಿಗಟ್ಟುಗಳು

ನುಡಿಗಟ್ಟುವ ಅರ್ಥ:
ನಮ್ಮ ದಿನನಿತ್ಯದ ಮಾತಿನಲ್ಲಿ ನಾವು ಕೆಲವು ಪದಪುಂಜಗಳನ್ನು ಬಳಸುತ್ತೇವೆ, ಮತ್ತು ಅವುಗಳಿಗೆ ಸಮರ್ಥನೆಯ ಮೇಲೆ ಹೊಸ ಅರ್ಥ ಬರುತ್ತದೆ. ಇವುಗಳನ್ನು ನುಡಿಗಟ್ಟುಗಳು ಎಂದು ಕರೆಯುತ್ತಾರೆ.

ಉದಾಹರಣೆಗಳು:

  • ಕೈಕೊಡು - ಕೈಯನ್ನು ಕೊಡುವುದು ಅಲ್ಲ, ಮೋಸಮಾಡು ಎಂದು ಅರ್ಥ.
  • ಹೊಟ್ಟೆಗೆ ಹಾಕಿಕೋ - ಕ್ಷಮಿಸು.
  • ಗಾಳಿಸುದ್ದಿ - ಸುಳ್ಳು ಸುದ್ದಿ.
  • ತಲೆಗೆ ಕಟ್ಟು - ಜವಾಬ್ದಾರಿ ಹೊರಿಸು.
  • ಕತ್ತಿ ಮಸೆ - ದ್ವೇಷ ಸಾಧಿಸು.
  • ಅಟ್ಟಕ್ಕೇರಿಸು - ಹೊಗಳು.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now