![]() |
https://apple.co/3YiD56p |
ಪ್ರಮುಖ ವೈಶಿಷ್ಟ್ಯಗಳು:
2024ರಲ್ಲಿ ಬಿಡುಗಡೆಯಾದ ಐಫೋನ್ 16 ಪ್ರೊ, ಆಪಲ್‌ನ ಹೊಸ ಆವೃತ್ತಿ, ತನ್ನ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನೇಕ ವೈಶಿಷ್ಟ್ಯಗಳಿಂದ ದಿಟ್ಟ ಹೆಜ್ಜೆಯನ್ನಿಡುತ್ತಿದೆ. ಅತಿ ಹೆಚ್ಚು ನಿರೀಕ್ಷಿಸಲಾದ ಫ್ಲ್ಯಾಗ್‌ಶಿಪ್ ಮಾಡೆಲ್‌ನ ಪ್ರಮುಖ ಬದಲಾವಣೆಗಳೆಂದರೆ, 6.3 ಇಂಚಿನ ದೊಡ್ಡ OLED ಸ್ಕ್ರೀನ್, ಅತ್ಯಾಧುನಿಕ ಎ18 ಪ್ರೊ ಚಿಪ್‌ಸೆಟ್, ಹೊಸ ಸ್ಪರ್ಶ ಸಂವೇದಿ ಕ್ಯಾಮೆರಾ ಬಟನ್, ಮತ್ತು ಐಫೋನ್ 15 ಪ್ರೊಗೆ ಹೋಲಿಸಿದಂತೆ ಸ್ವಲ್ಪ ವಿಭಿನ್ನವಾದ ಆ್ಯಕ್ಷನ್ ಬಟನ್. ಇದು ಐಶಾರಾಮಿ ನೋಟ ಮತ್ತು ಶಕ್ತಿಯನ್ನೂ ಹೆಮ್ಮೆಯಿಂದ ತೋರಿಸುತ್ತದೆ.
ಪ್ರಮುಖ ತಾಂತ್ರಿಕ ವಿವರಗಳು:
- ಡಿಸ್‌ಪ್ಲೇ: 6.3 ಇಂಚು OLED
- ಪ್ರೊಸೆಸರ್: ಎ18 ಪ್ರೊ (ಸುಲಭಗೊಳಿಸಿದ ನ್ಯಾವಿಗೇಶನ್, ವೇಗದ ಗೇಮಿಂಗ್ ಅನುಭವ)
- ಕ್ಯಾಮೆರಾ: 48 MP (ಪ್ರಧಾನ), 12 MP (ಸೆಲ್ಫಿ)
- RAM: 8 GB
- ಮೆಮೊರಿ ಆಯ್ಕೆಗಳು: 128 GB, 256 GB, 512 GB, 1 TB
- ಆಪರೇಟಿಂಗ್ ಸಿಸ್ಟಮ್: iOS 18
- ತೂಕ: 194 ಗ್ರಾಂ
- ಆರಂಭಿಕ ಬೆಲೆ: ₹1,19,900
ವಿಶೇಷ ವೈಶಿಷ್ಟ್ಯಗಳು:
- ನವೀನ ಕ್ಯಾಮೆರಾ ಬಟನ್:
- ಈ ಬಾರಿ, ಆಪಲ್ ವಿಶೇಷವಾಗಿ ಐಫೋನ್ 16 ಪ್ರೊದಲ್ಲಿ ಕ್ಯಾಮೆರಾ ಬಟನ್ ಅನ್ನು ಪರಿಚಯಿಸಿದೆ. ಇದು ಕೀಬೋರ್ಡ್‌ನ ಟಚ್‌ಪ್ಯಾಡ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೆದುವಾಗಿ ಒತ್ತಿದರೆ ಝೂಮ್, ಎಕ್ಸ್‌ಪೋಶರ್, ಡೆಪ್ತ್ ಮುಂತಾದ ಕೆಲವು ಕ್ಯಾಮೆರಾ ಆಯ್ಕೆಗಳನ್ನು ಹೊಂದಿದ್ದು, ಕೇಂದ್ರೀಕೃತ ನಿಯಂತ್ರಣವನ್ನು ಒದಗಿಸುತ್ತದೆ. ಈ ಬಟನ್ ಬಳಸಿ, ಶೀಘ್ರವಾಗಿ ಫೋಟೊ ಅಥವಾ ವಿಡಿಯೊ ತೆಗೆದುಕೊಳ್ಳಬಹುದು. ಸಾಂಪ್ರದಾಯಿಕ ಶಟರ್ ಬಟನ್ ಅನುಭವವನ್ನು ಈ ಬಟನ್ ನೀಡುತ್ತದೆ.
- ಡೈನಮಿಕ್ ಐಲೆಂಡ್ ಡಿಸೈನ್:
- ಐಫೋನ್ 16 ಪ್ರೊದಲ್ಲಿ, 6.3 ಇಂಚು ಸ್ಕ್ರೀನ್‌ನಲ್ಲಿ ಡೈನಮಿಕ್ ಐಲೆಂಡ್ ಹೆಸರಿನ ಖಾಲಿ ಸ್ಥಳವಿದೆ, ಇದು ಸಾಧನದ ಉತ್ಕೃಷ್ಟತೆಗೆ ತಕ್ಕ ರೀತಿಯಲ್ಲಿ ಸಂಪೂರ್ಣ ವಿನ್ಯಾಸವನ್ನು ಸೇರಿಸಿ, ಪ್ರೀಮಿಯಂ ಲುಕ್ ನೀಡುತ್ತದೆ. ಐಫೋನ್ 15 ಪ್ರೊನಲ್ಲಿ ಇದ್ದ 6.1 ಇಂಚು ಡಿಸ್ಪ್ಲೇಯನ್ನು ಹೋಲಿಸಿದರೆ, ಐಫೋನ್ 16 ಪ್ರೊ ಸ್ಕ್ರೀನ್ ದೊಡ್ಡದಾಗಿ ಹೆಚ್ಚಿದೆ.
- ಎ18 ಪ್ರೊ ಚಿಪ್‌ಸೆಟ್:
- ಐಫೋನ್ 16 ಪ್ರೊ ಅತ್ಯಾಧುನಿಕ ಎ18 ಪ್ರೊ ಚಿಪ್‌ಸೆಟ್ ಅನ್ನು ಹೊಂದಿದ್ದು, ವೇಗದ ನಿರ್ವಹಣೆ, ಸುಲಲಿತ ನ್ಯಾವಿಗೇಶನ್, ಮತ್ತು ಹೆಚ್ಚಿನ ಗೇಮಿಂಗ್ ತಜ್ಞರಿಗೆ ಅನುಕೂಲಕರವಾಗಿದೆ. ಫೋನ್‌ನಲ್ಲಿ ಡೇಟಾ ಕ್ರಿಯಾಕಲಾಪಗಳು ವೇಗವಾಗಿ ನಿರ್ವಹಿಸಲ್ಪಡುತ್ತವೆ, ಮತ್ತು ಇದು ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುವುದಲ್ಲದೆ, ತೀವ್ರತೆಯಲ್ಲೂ ಪರಿಪೂರ್ಣತೆಯನ್ನು ತಂದುಕೊಡುತ್ತದೆ.
- ಕ್ಯಾಮೆರಾ ಸಾಮರ್ಥ್ಯ:
- 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, 5x ಟೆಟ್ರಾ-ಪ್ರಿಸಮ್ ಝೂಮ್ ತಂತ್ರಜ್ಞಾನದಿಂದ ಸ್ಪಷ್ಟವಾದ ಚಿತ್ರಗಳು ಮತ್ತು ಫೋಟೊಗ್ರಫಿ ಪ್ರಿಯರಿಗೆ ಗಮನಾರ್ಹವಾದ ಚಿತ್ರರಚನೆಗಳನ್ನೂ ನೀಡುತ್ತದೆ. ಈ ಝೂಮ್ ಕಾರ್ಯಪದ್ಧತಿ ಇಷ್ಟು ದಿನ ಪ್ರೊ-ಮ್ಯಾಕ್ಸ್ ಮಾದರಿಗಳಿಗಷ್ಟೇ ಲಭ್ಯವಿದ್ದಾಗ, ಈಗ ಪ್ರೊ ಫೋನ್‌ಗೂ ಸೇರಿಸಲಾಗಿದೆ. ಇದು ಉತ್ತಮ ಕ್ಯಾಮೆರಾ ಕಾರ್ಯಕ್ಷಮತೆಗಾಗಿ ಪರಿಪೂರ್ಣವಾಗಿದ್ದು, ದೂರದ ಚಿತ್ರಗಳನ್ನು ಹತ್ತಿರದಲ್ಲಿರುವಂತೆ ತೆಗೆಯಲು ಅನುಕೂಲಕರವಾಗಿದೆ.
- 25x ಡಿಜಿಟಲ್ ಝೂಮ್ ಕೂಡ ನೀಡಲಾಗಿದ್ದು, ಆದರೆ ಹೆಚ್ಚು ಡಿಜಿಟಲ್ ಝೂಮ್ ಮಾಡಿದಾಗ ಚಿತ್ರದಲ್ಲಿ ಪಿಕ್ಸಲೇಷನ್ ಆಗುತ್ತದೆ. ದಿನದ ಬೆಳಕಿನಲ್ಲಿಯೂ ಸಹಜ ಬಣ್ಣಗಳೊಂದಿಗೆ ಚಿತ್ರಗಳು ಬಹಳ ಚೆನ್ನಾಗಿ ಬರುತ್ತವೆ, ಮತ್ತು ರಾತ್ರಿ ಸಮಯದ ಫೋಟೋಗಳಲ್ಲಿ ವಿಶೇಷವಾದ ನೆರಳು-ಬೆಳಕುಗಳ ಸಂಯೋಜನೆಗಳನ್ನು ಗಮನಿಸಬಹುದು.
ವಿನ್ಯಾಸ ಮತ್ತು ಬಳಕೆ ಅನುಭವ:
- ಐಫೋನ್ 16 ಪ್ರೊ ಫೋನ್ ಬಳಕೆಗೆ ಬಹಳ ತೊಡಕು ಇಲ್ಲದ ಅನುಭವವನ್ನು ನೀಡುತ್ತದೆ. 6.3 ಇಂಚು ಪರದೆಯು ಸಾಮಾನ್ಯ ಬಳಕೆದಾರರಿಗೆ ಸೂಕ್ತವಾಗಿದ್ದು, ಜೇಬಿನಲ್ಲಿ ಸುಲಭವಾಗಿ ಕೂರುತ್ತದೆ. ಕಂಟೆಂಟ್ ಕ್ರಿಯೇಟರ್‌ಗಳು ಅಥವಾ ಗೇಮಿಂಗ್ ಪ್ರಿಯರಿಗೆ ಇದಕ್ಕಿಂತ ದೊಡ್ಡ ಪರದೆಯ ಪ್ರೊ ಮ್ಯಾಕ್ಸ್ ಆವೃತ್ತಿಯೂ ಲಭ್ಯವಿದೆ. ಈ ಬಾರಿ, ಆಪಲ್‌ನ ನವೀನ ಟೈಟಾನಿಯಂ ಚೌಕಟ್ಟಿನ ಬಳಕೆ, ಗಟ್ಟಿ ಗಾಜಿನ ಹಿಂಭಾಗದ ಕವಚ, ಮತ್ತು ಸ್ಕ್ರೀನ್ ಮೇಲೆ ಡೈನಮಿಕ್ ಐಲೆಂಡ್ ಆಕರ್ಷಕತೆಗಳು ಫೋನ್‌ಗೆ ಪ್ರೀಮಿಯಂ ನೋಟ ನೀಡುತ್ತವೆ.
ಬ್ಯಾಟರಿ ಬಾಳಿಕೆ:
- ಎ18 ಪ್ರೊ ಚಿಪ್‌ಸೆಟ್‌ನ ಸಹಾಯದಿಂದ ಬ್ಯಾಟರಿ ಬಾಳಿಕೆ ಹೆಚ್ಚಿದ್ದು, ಸಾಮಾನ್ಯ ಬಳಕೆಗೆ (ಇಮೇಲ್, ವಾಟ್ಸ್ಆಪ್, ಒಂದು-ಎರಡು ಗಂಟೆ ವಿಡಿಯೊ, ಒಂದು ಗಂಟೆ ಸೋಷಿಯಲ್ ಮೀಡಿಯಾ) ದಿನ ಪೂರ್ತಿ ಬ್ಯಾಟರಿ ಟಿಕಿಸುತ್ತದೆ. ಐಫೋನ್ 15 ಪ್ರೊ ಮಾದರಿಯ ಹೋಲಿಸುವಲ್ಲಿ ಸ್ವಲ್ಪ ಹೆಚ್ಚು ಬ್ಯಾಟರಿ ಲೈಫ್ ಇದೆ. ಜೊತೆಗೆ, ವೇಗದ ವೈರ್‌ಲೆಸ್ ಚಾರ್ಜಿಂಗ್ ಕೂಡ ಲಭ್ಯವಿದೆ.
ಕನ್ನಡ ಕೀಬೋರ್ಡ್ ವೈಶಿಷ್ಟ್ಯಗಳು:
- iOS 18 ಕನ್ನಡಿಗರಿಗೆ ಒಂದು ನವೀನ ಅಂಶವನ್ನು ಪರಿಚಯಿಸಿದೆ. ಇನ್‌ಸ್ಕ್ರಿಪ್ಟ್ ಲೇಔಟ್ ಹೊಂದಿದ ಕೀಬೋರ್ಡ್ ಮತ್ತು ಲಿಪ್ಯಂತರ ಕೀಬೋರ್ಡ್ ಕನ್ನಡಕ್ಕಾಗಿ ಬಳಸಲು ಸುಲಭವಾಗಿದೆ. ಇಂಗ್ಲಿಷ್ ಲಿಪಿಯಲ್ಲಿ ಬರೆದರೆ ಅದು ತಾನಾಗಿ ಕನ್ನಡ ಲಿಪಿಗೆ ಪರಿವರ್ತಿಸುವ ಸಾಮರ್ಥ್ಯವಿದೆ, ಇದು ಕನ್ನಡ ಕೀಬೋರ್ಡ್ ಆ್ಯಪ್ ಬಳಸಲು ಇಷ್ಟಪಡದವರಿಗೆ ಅತ್ಯಂತ ಪೂರಕವಾಗಿದೆ.
ಬೆಲೆ:
- ಐಫೋನ್ 16 ಪ್ರೊ ಸರಣಿಯ ವಿವಿಧ ಸ್ಟೋರೇಜ್ ಆಯ್ಕೆಗಳು (128 GB, 256 GB, 512 GB, 1 TB) ಲಭ್ಯವಿದ್ದು, ಅವುಗಳ ಬೆಲೆಗಳು ಕ್ರಮವಾಗಿ ₹1,19,900, ₹1,29,900, ₹1,49,900, ಮತ್ತು ₹1,69,900.
- ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ :- https://amzn.to/4fbrlt9
ಒಟ್ಟು ಮೌಲ್ಯಮಾಪನ:
- ಐಫೋನ್ 16 ಪ್ರೊ ದೊಡ್ಡದಾಗದ, ಆದರೆ ಉತ್ತಮ ಬ್ಯಾಟರಿ ಬಾಳಿಕೆ ಮತ್ತು ಅತ್ಯಾಧುನಿಕ ಕ್ಯಾಮೆರಾ ಸಾಮರ್ಥ್ಯ ಹೊಂದಿರುವ ಐಷಾರಾಮಿ ಫೋನ್. ಹೊಸ ಎ18 ಪ್ರೊ ಪ್ರೊಸೆಸರ್ ಮತ್ತು ನವೀನ ಕ್ಯಾಮೆರಾ ಬಟನ್ ಇದನ್ನು ಹೆಚ್ಚು ವೈಶಿಷ್ಟ್ಯಮಯ ಮಾಡಿವೆ. ಫೋಟೋಗ್ರಫಿ, ವಿಡಿಯೋ ರೆಕಾರ್ಡಿಂಗ್, ಮತ್ತು ಆಡಿಯೋ ರೆಕಾರ್ಡಿಂಗ್‌ಗಾಗಿ ಇದು ಕಂಟೆಂಟ್ ಕ್ರಿಯೇಟರ್‌ಗಳಿಗೆ ಮತ್ತು ವೃತ್ತಿಪರರಿಗೆ ಪ್ರತ್ಯೇಕ ಕ್ಯಾಮೆರಾ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ.
Post a Comment