Android 15: ಈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಹೊಸ OS ಅಪ್‌ಡೇಟ್‌ ಲಭ್ಯ

 


ಬೆಂಗಳೂರು: ಗೂಗಲ್ ತನ್ನ ಹೊಸ ಆಂಡ್ರಾಯ್ಡ್‌ 15 ಆಪರೇಟಿಂಗ್ ಸಿಸ್ಟಂ ಅನ್ನು ಬಿಡುಗಡೆ ಮಾಡಿದ್ದು, ನಿರ್ದಿಷ್ಟ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ. ಮುಖ್ಯವಾಗಿ, ಗೂಗಲ್‌ನ ಪಿಕ್ಸೆಲ್‌ ಫೋನ್‌ಗಳು ಈ ಹೊಸ ಆಪರೇಟಿಂಗ್ ಸಿಸ್ಟಂ ಹೊಂದಿದ್ದು, ಬಳಕೆದಾರರ ಅನುಭವವನ್ನು ಮತ್ತಷ್ಟು ಸುಧಾರಿಸಲು ವಿವಿಧ ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಆಪರೇಟಿಂಗ್ ಸಿಸ್ಟಂನ ಪ್ರಮುಖ ವಿಶೇಷತೆಯೆಂದರೆ ಖಾಸಗಿತನದ ಭದ್ರತೆ, ಬ್ಯಾಟರಿಯ ದೀರ್ಘಾವಧಿ, ಮತ್ತು ಫೋನ್‌ ಪ್ರೊಸೆಸಿಂಗ್ ಸಾಮರ್ಥ್ಯದ ಸುಧಾರಣೆ. ಜೊತೆಗೆ ಕ್ಯಾಮೆರಾ ಮೂಲಕ ಸೆರೆಹಿಡಿದ ಚಿತ್ರಗಳ ಗುಣಮಟ್ಟ ಹೆಚ್ಚುವಂತೆ ತಯಾರಿಸಲಾಗಿದೆ.

ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ಫೋನ್‌ ತಯಾರಕರಾದ ಸ್ಯಾಮ್ಸಂಗ್‌, ಒನ್‌ಪ್ಲಸ್‌, ವಿವೊ, ಷವೊಮಿ, ಒಪ್ಪೊ, ನಥಿಂಗ್ ಮತ್ತು ಮೊಟೊರೊಲಾ ಹೊಸ ಆವೃತ್ತಿಯ ಆಪರೇಟಿಂಗ್‌ ಸಿಸ್ಟಂ ಹೊಂದುವ ಫೋನ್‌ಗಳು ಈ ಪಟ್ಟಿ ಸೇರಿವೆ.

ಒನ್‌ಪ್ಲಸ್ ಕಂಪನಿಯು ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಆಕ್ಸಿಜನ್‌ಒಎಸ್ 15 ಆಧಾರಿತ ಆಪರೇಟಿಂಗ್‌ ಸಿಸ್ಟಂ ಅನ್ನು ಪರಿಚಯಿಸಲಿದೆ ಎಂದು ಘೋಷಿಸಿದೆ. ಇದರಿಂದ, ಗೂಗಲ್ ಪಿಕ್ಸೆಲ್‌, ಸ್ಯಾಮ್ಸಂಗ್‌, ಹಾಗೂ ಮತ್ತಿತರ ಫೋನ್‌ಗಳು ಆಂಡ್ರಾಯ್ಡ್‌ 15 ಹೊಸ ಆಪರೇಟಿಂಗ್‌ ಸಿಸ್ಟಂ ಅನ್ನು ಪಡೆಯಲಿವೆ.

ಸ್ಯಾಮ್ಸಂಗ್ ಫೋನ್‌ಗಳು

  • ಗ್ಯಾಲಕ್ಸಿ ಎಸ್‌ ಸರಣಿ: S21 FE 5G, S21 5G, S21+ 5G, S21 ಅಲ್ಟ್ರಾ 5G, S22, S22+, S22 ಅಲ್ಟ್ರಾ, S23, S23+, S24 ಮತ್ತು S24 ಪ್ಲಸ್.
  • ಫೋಲ್ಡಬಲ್‌ ಸರಣಿ: Z ಫ್ಲಿಪ್ 3 5G, Z ಫ್ಲಿಪ್ 4, Z ಫೋಲ್ಡ್ 3, Z ಫೋಲ್ಡ್ 4 5G ಮತ್ತು Z ಫೋಲ್ಡ್ 5.
  • ಎ ಸರಣಿ: Galaxy A23, A24, A25, A32, A33, A34, A35 5G ಮತ್ತು A73 5G.
  • ಎಂ ಸರಣಿ: Galaxy M33 ಮತ್ತು M55.
  • ಎಫ್‌ ಸರಣಿ: Galaxy F55, F54, ಮತ್ತು F34.
  • ಟ್ಯಾಬ್ಲೆಟ್‌ಗಳು: Galaxy Tab S8 ಮತ್ತು ನಂತರದ ಸಾಧನಗಳು.

ಗೂಗಲ್ ಪಿಕ್ಸೆಲ್

ಗೂಗಲ್‌ ಪಿಕ್ಸೆಲ್‌ 6, 6 ಪ್ರೊ, 6A, ಪಿಕ್ಸೆಲ್‌ 7, 7 ಪ್ರೊ, 7A, ಪಿಕ್ಸೆಲ್‌ ಟ್ಯಾಬ್ಲೆಟ್‌, ಪಿಕ್ಸೆಲ್ ಫೋಲ್ಡ್‌, ಪಿಕ್ಸೆಲ್‌ 8, 8 ಪ್ರೊ, 8A, ಪಿಕ್ಸೆಲ್‌ 9 ಸರಣಿಯ ಫೋನ್‌ಗಳು ಆಂಡ್ರಾಯ್ಡ್ 15 ಅಪ್‌ಡೇಟ್‌ ಪಡೆಯಲಿವೆ.

ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು

ಒನ್‌ಪ್ಲಸ್‌ 12, 12R, ಒನ್‌ಪ್ಲಸ್‌ ಒಪನ್‌, 11, 11R, 10 ಪ್ರೊ, 10T, 10R, ನಾರ್ಡ್‌ 4, CE4, CE4 ಲೈಟ್ ಮತ್ತು ನಾರ್ಡ್‌ 3.

ನಥಿಂಗ್ ಫೋನ್‌ಗಳು

ನಥಿಂಗ್‌ ಫೋನ್‌ 2, 2A ಮತ್ತು 2A ಪ್ಲಸ್‌ ಗಳು ಆಂಡ್ರಾಯ್ಡ್‌ 15 ಆಧಾರಿತ NothingOS 3.0 ಅಪ್‌ಡೇಟ್‌ ಪಡೆಯಲಿವೆ.

ಶೋಮೀ ಫೋನ್‌ಗಳು

Xiaomi 13 ಮತ್ತು 14 ಸರಣಿಯ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 15 ಆಧಾರಿತ HyperOS ಅಪ್‌ಡೇಟ್‌ ಪಡೆಯಲಿವೆ.

ರೆಡ್‌ಮಿ

ರೆಡ್‌ಮಿ ನೋಟ್‌ 12 ಮತ್ತು ನೋಟ್‌ 13 ಸರಣಿಯ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ನ ಹೊಸ ಆವೃತ್ತಿಯ ಆಪರೇಟಿಂಗ್‌ ಸಿಸ್ಟಂ ಪಡೆಯಲಿವೆ.

ವಿವೊ

Vivo X100 ಸರಣಿ, X Fold 3 ಪ್ರೊ ಮತ್ತು V40 ಸರಣಿ.

ಒಪ್ಪೊ

Oppo Find N3 Flip, F27, Reno 12 ಸರಣಿ, K12 ಸರಣಿಯ ಫೋನ್‌ಗಳು.

iQOO ಫೋನ್‌ಗಳು

iQOO 12 ಮತ್ತು Z9 ಸರಣಿಯ ಫೋನ್‌ಗಳಿಗೆ ಆಂಡ್ರಾಯ್ಡ್ 15 ಆಧಾರಿತ FunTouch 15 OS ಲಭ್ಯ.

ಮೊಟೊರೊಲಾ

Motorola RAZR 40, RAZR 50 ಸರಣಿ, Motorola Edge 50 ಸರಣಿಗೆ ಆಂಡ್ರಾಯ್ಡ್‌ 15 ಲಭ್ಯ.

ಇನ್ನುಳಿದ ಅನೇಕ ಕಂಪನಿಗಳು ಆಪರೇಟಿಂಗ್‌ ಸಿಸ್ಟಂ ಅನ್ನು ಬಿಡುಗಡೆ ಮಾಡುವ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now