ಭಾರತಕ್ಕೆ 105ನೇ ರ‍್ಯಾಂಕ್‌ | ಜಾಗತಿಕ ಹಸಿವು ಸೂಚ್ಯಂಕ Global Hunger Index 2024

 


ಜಾಗತಿಕ ಹಸಿವು ಸೂಚ್ಯಂಕವನ್ನು ಶನಿವಾರ ಬಿಡುಗಡೆಗೊಳಿಸಲಾಯಿತು, 127 ರಾಷ್ಟ್ರಗಳ ಪೈಕಿ ಭಾರತವು 105ನೇ ಸ್ಥಾನ ಪಡೆದಿದೆ. ಹಸಿವು ಸಮಸ್ಯೆ ಗಂಭೀರವಾಗಿರುವ 42 ರಾಷ್ಟ್ರಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಜೊತೆಗೆ ಭಾರತವೂ ಸೇರಿದೆ. 2024ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 27.3 ಅಂಕಗಳನ್ನು ಹೊಂದಿರುವ ಭಾರತದಲ್ಲಿ ಹಸಿವಿನ ಮಟ್ಟ ಗಂಭೀರವಾಗಿದ್ದು, ವರದಿ ಈ ಸಂಗತಿಯನ್ನು ದೃಢಪಡಿಸಿದೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ.35.5 ಕ್ಕೂ ಹೆಚ್ಚು ಮಕ್ಕಳು ದೇಹ ಬೆಳವಣಿಗೆ ಕುಂಠಿತವಾಗಿದ್ದು, ಶೇ.18.7 ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ. ದೇಶದ ಶೇ.13.7ರಷ್ಟು ಜನರು ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದಾರೆ ಎಂಬ ವರದಿ ಕೂಡಾ ಇದರಲ್ಲಿ ಪ್ರಸ್ತಾಪಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ ದಕ್ಷಿಣ ಏಶ್ಯಾದ ಬಾಂಗ್ಲಾದೇಶ, ನೇಪಾಳ, ಮತ್ತು ಶ್ರೀಲಂಕಾ ಉತ್ತಮ ಅಂಕಗಳನ್ನು ಗಳಿಸಿ "ಸಾಧಾರಣ" ಶ್ರೇಣಿಯಲ್ಲಿ ಸ್ಥಾನ ಪಡೆದಿವೆ. 2023ರಲ್ಲಿ ಭಾರತವು 125 ರಾಷ್ಟ್ರಗಳ ಪೈಕಿ 111ನೇ ಸ್ಥಾನದಲ್ಲಿತ್ತು. ಶಿಶು ಮರಣ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಪೌಷ್ಟಿಕತೆಯ ಕೊರತೆಯಲ್ಲೂ ತುಸು ಸುಧಾರಣೆ ಕಂಡುಬಂದಿದ್ದು, ಈ ಬಾರಿ ಭಾರತದ ರ‍್ಯಾಂಕಿಂಗ್‌ನಲ್ಲಿ ಸ್ವಲ್ಪ ಮೆಚ್ಚುವಂತಹ ಬದಲಾವಣೆಂಟಾಗಿದೆ.



ಅದರಲ್ಲಿಯೂ ಜಿಡಿಪಿಯಲ್ಲಿ ಏರಿಕೆ ಕಂಡಿದ್ದರೂ, ಹಸಿವು ಮತ್ತು ಪೌಷ್ಟಿಕತೆಯ ಕೊರತೆಯನ್ನು ತಡೆಯಲು ಮಾತ್ರ ಸರಿಯಾದ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ವರದಿಯ ಅಭಿಪ್ರಾಯ.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now