ಕರ್ನಾಟಕದ ಮೊದಲ ಕಿಸಾನ್ ರೈಲು (Kisan Rail) ಸೇವೆ


2021ರ ಜೂನ್ 19ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ದೊಡ್ಡನತ್ತ ರೈಲು ನಿಲ್ದಾಣದಿಂದ ನವದೆಹಲಿಯ ಆದರ್ಶ ನಗರಕ್ಕೆ 250 ಟನ್ ಮಾವಿನ ಹಣ್ಣನ್ನು ಹೊತ್ತ ನೈಋತ್ಯ ರೈಲು ವಲಯದ ಹಾಗೂ ಕರ್ನಾಟಕದ ಮೊದಲ ಕಿಸಾನ್ ರೈಲು ಸಂಚಾರ ಆರಂಭಿಸಿತು. ಈ ರೈಲ್ವೆ ಸೇವೆಗೆ ಸಂಸದ ಎಸ್.ಮುನಿಸ್ವಾಮಿ ಚಾಲನೆ ನೀಡಿದರು. 2021ರ ಜೂನ್ 29 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಲಹಂಕ ರೈಲ್ವೆ ನಿಲ್ದಾಣದಲ್ಲಿ ಕಿಸಾನ್ ರೈಲಿಗೆ ಚಾಲನೆ ನೀಡಿದರು. ಈ ರೈಲಿಗೆ ಸರಕು ಶುಲ್ಕದಲ್ಲಿ ಶೇ. 50 ರಷ್ಟು ಮುಂಗಡ ಸಹಾಯಧನವನ್ನು ಒದಗಿಸಲಾಗಿದ್ದು, ರೈತರು ತಮ್ಮ ಉತ್ಪನ್ನಗಳನ್ನು, ದೂರದ ಮಾರುಕಟ್ಟೆಗಳಿಗೆ ಸಾಗಿಸಲು ನೆರವಾಗಲಿದೆ. ಈ ಮೂಲಕ ರೈತರು ಬೆಳೆದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಬೇಕೆಂಬುದು ಇದರ ಉದ್ದೇಶವಾಗಿದೆ.

ಇದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಾವಿನ ಹಣ್ಣು ಬೆಳೆಯುವ ರೈತರ ಹಲವು ವರ್ಷಗಳ ಬೇಡಿಕೆ ನನಸಾಗುವಂತೆ ಮಾಡಿದೆ. ಈ ಎರಡು ಜಿಲ್ಲೆಗಳಲ್ಲಿ ರೈತರು ಟೊಮ್ಯಾಟೊ, ಮಾವು ಮತ್ತು ತರಕಾರಿಯನ್ನು ಅಧಿಕವಾಗಿ ಬೆಳೆಯುತ್ತಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಈ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದ್ದರೂ, ರೈತರು ತಾವು ಬೆಳೆದ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲು ತೊಂದರೆಯಾಗಿತ್ತು. ನೆನಪಿರಅ: ಭಾರತದ ಮೊದಲ ಕಿಸಾನ್ ರೈಲು: 2020 ಆಗಸ್ಟ್ 7ರಂದು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರದ ನಡುವೆ ದೇಶದ

ಮೊದಲ ಕಿಸಾನ್ ರೈಲು ಸೇವೆ ಆರಂಭವಾಗಿತ್ತು. ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚು ಬೇಡಿಕೆ ದೂರದ ಮಾರುಕಟ್ಟೆಗಳಿಗೆ ಸಾಗಿಸಬಹುದು. ದಕ್ಷಿಣ ಭಾರತದ ಮೊದಲ ಕಿಸಾನ್ ರೈಲು: 2020 ಸೆಪ್ಟೆಂಬರ್ 9ರಂದು ಆಂಧ್ರಪ್ರದೇಶದ ಅನಂತಪುರಂನಿಂದ ನವದೆಹಲಿಯ ಆದರ್ಶ ನಗರದವರೆಗೆ

ದಕ್ಷಿಣ ಭಾರತದ ಮೊದಲ ಕಿಸಾನ್ ರೈಲು ಸಂಚಾರ ಆರಂಭವಾಯಿತು.

ಭಾರತದ ಮೊದಲ ಸ್ಕೂಟ್ ಟೈನ್: 2020 ಜನವರಿ 31ರಂದು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ತಡಿಪಾತ್ರಿ ರೈಲ್ವೆ ನಿಲ್ದಾಣದಿಂದ ಮಹಾರಾಷ್ಟ್ರದ ಜವಾಹರಲಾಲ್ ನೆಹರೂ ಬಂದರುವರೆಗೆ ಹ್ಯಾಪಿ ಬನಾನಾ ಬ್ಯಾಂಡ್ ಹೆಸರಿನ ಫೂಟ್ ಟೈನ್ ಸೇವೆ ಆರಂಭಿಸಿತು. ಭಾರತದ 100ನೇ ಕಿಸಾನ್ ರೈಲು: 2020 ಡಿಸೆಂಬರ್ 28ರಂದು ಮಹಾರಾಷ್ಟ್ರದ ಸಂಗೋಲಾದಿಂದ ಪಶ್ಚಿಮ ಬಂಗಾಳದ ಶಾಲಿಮಾರ್‌ವರೆಗೆ ಭಾರತದ 100ನೇ ಕಿಸಾನ್ ರೈಲು ಸೇವೆ ಆರಂಭಿಸಿದೆ. (ಅಗ್ರಿ ಉಡಾನ್' ಎಂಬುದು ಕೃಷಿಯಲ್ಲಿ ನಾವೀನ್ಯತೆ ಮತ್ತು ಉದ್ಯಮದಾರತ್ವದ ಉತ್ತೇಜನ)

ಭಾರತ-ಇಸ್ರೇಲ್ ಕೃಷಿ ಯೋಜನೆಯಲ್ಲಿ ಕರ್ನಾಟಕದಲ್ಲಿ 3 ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ

2021ರ ಜೂನ್‌ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಜಂಟಿಯಾಗಿ ಭಾರತ-ಇಸ್ರೇಲ್ ಕೃಷಿ ಯೋಜನೆ (IAP- Indo-Israel Agricultre Project) ಅಡಿಯಲ್ಲಿ ರಾಜ್ಯದಲ್ಲಿ ಸ್ಥಾಪಿಸಲಾದ 3 ಉತ್ಕೃಷ್ಟತಾ ಕೇಂದ್ರಗಳ (COE- Centre of Excellence) ಆರಂಭಕ್ಕೆ ಚಾಲನೆ ನೀಡಿದ್ದಾರೆ.

ಮಾವು ಬೆಳೆಗೆ ಸಂಬಂಧಿಸಿದಂತೆ ಕೋಲಾರದಲ್ಲಿ(Mango in Kolar), ದಾಳಿಂಬೆಗಾಗಿ ಬಾಗಲಕೋಟೆ(Pomegranate in Bagalkot)ಯಲ್ಲಿ ಮತ್ತು ತರಕಾರಿಗಳಿಗೆ ಧಾರವಾಡ (Vegetables in Dharwad)ದಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಏನಿದು ಉತ್ಕೃಷ್ಟತಾ ಕೇಂದ್ರ?: ರೈತರಿಗೆ ಕೃಷಿ ಬೆಳೆಗಳ ಬಗ್ಗೆ ಜ್ಞಾನವನ್ನು ಮೂಡಿಸುವುದು, ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸುವುದು ಮತ್ತು ಅಧಿಕಾರಿಗಳು, ರೈತರಿಗೆ ತರಬೇತಿಯನ್ನು ನೀಡುವುದು, ನವೀನ ತಂತ್ರಜ್ಞಾನಗಳನ್ನು ವರ್ಗಾಯಿಸಲು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವುದು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ, ಉತ್ಪಾದಕತೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಹಾಗೂ ಸುಸ್ಥಿರ ಕೃಷಿ ಬೆಳವಣಿಗೆ ಸಾಧಿಸಲು ಈ ಕೇಂದ್ರಗಳು ನೆರವಾಗಲಿದೆ.

ತೋಟಗಾರಿಕಾ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ದೇಶದಾದ್ಯಂತ 12 ರಾಜ್ಯಗಳಲ್ಲಿ 29 ಉತ್ಕೃಷ್ಟತಾ ಕೇಂದ್ರಗಳೊಂದಿಗೆ ಸುಧಾರಿತ ಇಸ್ರೇಲ್ ಕೃಷಿ ತಂತ್ರಜ್ಞಾನವನ್ನು ಸ್ಥಳೀಯ ಪರಿಸ್ಥಿತಿಗಳಿಗನುಣವಾಗಿ ಅಳವಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಭಾರತದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಐಎಂಡಿಹೆಚ್ ವಿಭಾಗ ಮತ್ತು ಇಸ್ರೇಲ್‌ನ ಅಂತರರಾಷ್ಟ್ರೀಯ ಅಭಿವೃದ್ಧಿ ಸಹಕಾರ ಸಂಸ್ಥೆ (MASHAV) ಸಹಭಾಗಿತ್ವದಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಒಪ್ಪಂದವು ಇಸ್ರೇಲ್ ದೇಶದ ಅತ್ಯಂತ ದೊಡ್ಡ ಜಿ2ಜಿ ಸಹಕಾರ ಒಪ್ಪಂದವಾಗಿದೆ. ಭಾರತದಲ್ಲಿನ ಇಸ್ರೇಲ್ ರಾಯಭಾರಿ ಡಾ. ರಾನ್ ಮಲ್ಕಾ ಅವರು ಇಂಡೋ-ಇಸ್ರೇಲಿ ಸಹಭಾಗಿತ್ವದ ಮಹತ್ವದ ಭಾಗವಾಗಿರುವ ಕೃಷಿಯಲ್ಲಿ ಕರ್ನಾಟಕ ಸರ್ಕಾರ ಸಹಯೋಗ ಹೊಂದಿರುವುದು ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಒಂದು ಮೈಲುಗಲ್ಲಾಗಲಿದೆ ಎಂದು ಹೇಳಿದರು.

ಪ್ರಾಣಿ ಸವಾಲು ಅಧ್ಯಯನ ವೇದಿಕೆ: (Animal Challenge Study Platform)ಡಿಜಿಟಿ ಐಎಲ್‌ಎಸ್

ಜಾಗತಿಕವಾಗಿ ಸಾಂಕ್ರಾಮಿಕ ರೋಗವಾಗಿರುವ ಕೋವಿಡ್-19 ರಿಂದ ಮಾನವರನ್ನು ರಕ್ಷಿಸಲು ಸಮರ್ಪಕ ಪರಿಣಾಮಕಾರಿಯಾದ ಲಸಿಕೆ ಮತ್ತು ಚಿಕಿತ್ಸಾ ವಿಧಾನಗಳ ಅಭಿವೃದ್ಧಿ ಅಗತ್ಯವಾಗಿದೆ. ಪ್ರಸ್ತುತ ಅನೇಕ ಕ್ಲಿನಿಕಲ್ ಪ್ರಯೋಗಗಳು ಜರುಗುತ್ತಿದ್ದು ಅದಕ್ಕೆ ಸಮನಾಂತರವಾಗಿ ಕೊರೋನಾ ವೈರಸ್ ಅನ್ನು ಅರಿತುಕೊಳ್ಳಲು ಮತ್ತು ಮಾನವರಲ್ಲಿ ಸಾರ್ಸ್ ಕೋವ್-1 ಪ್ರೇರಿತ ರೋಗಗಳನ್ನು ಉಂಟು ಮಾಡುವ ರೋಗಕಾರಕಗಳನ್ನು ನಿಕಟವಾಗಿ ಹೋಲುವ ಪ್ರಾಣಿ ಮಾದರಿಗಳು ರೋಗ ವ್ಯವಸ್ಥೆ ಸಂಶೋಧನೆಗೆ ಸಮರ್ಪಕ ಲಸಿಕೆ ಮತ್ತು ವೈರಸ್ ವಿರೋಧಿ ಔಷಧಿಗಳ ಮೌಲ್ಯಮಾಪನಕ್ಕೆ ಅವಶ್ಯಕ. ಸಣ್ಣ ಪ್ರಾಣಿಗಳಾದ ಇಲಿ, ಸಿರಿಯನ್ ಹ್ಯಾಂಸ್ಟರ್ (ಒಂದು ಜಾತಿ ಹೆಗ್ಗಣ), ಧ್ವಂಸಕಗಳು ಸಾರ್ಸ್ ಅಧ್ಯಯನಕ್ಕೆ ಬಹು ಉಪಯೋಗಿಗಳಾಗಿರುತ್ತವೆ. ಕಾರಣ ಅವುಗಳು ತ್ವರಿತವಾಗಿ ವಂಶಾಭಿವೃದ್ಧಿ ಮಾಡುತ್ತವೆ ಮತ್ತು ಕೋವಿಡ್-19ರ ರೋಗಲಕ್ಷಣಗಳನ್ನು ಪುನರುತ್ಪಾದನೆ ಮಾಡುತ್ತವೆ. ಈ ಪ್ರಾಣಿಗಳ ಮೇಲೆ ನಡೆಯುವ ಪ್ರಯೋಗ ಪರೀಕ್ಷೆಗಳಿಗೆ ಒಡಿಶಾದ ಭುವನೇಶ್ವರದಲ್ಲಿರುವ ಜೀವ ವಿಜ್ಞಾನ ಸಂಸ್ಥೆ (ಡಿಬಿಟಿಯ ಸ್ವಾಯತ್ತ ಸಂಸ್ಥೆಯು ಪ್ರಾಣಿ

ಮಾದರಿಗಳನ್ನು ಮತ್ತು ಎಬಿಎಸ್‌ಎಲ್-3 (Animal Bio Safety Level-3) ಪ್ರಯೋಗಾಲಯವನ್ನು ಸ್ಥಾಪಿಸಿದೆ. ಕೋವಿಡ್ ಸುರಕ್ಷಾ ಆಂದೋಲನದಡಿಯಲ್ಲಿ ಜೈವಿಕ ತಂತ್ರಜ್ಞಾನ, ಕೈಗಾರಿಕಾ ಸಂಶೋಧನಾ ಸಹಾಯ ಮಂಡಳಿ (BIRAC-Biotechnology Industry Research Assistance Council) ನೆರವಿನಿಂದ ಸ್ಥಾಪಿಸಲಾಗಿದೆ.


0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now