ವಿಜ್ಞಾನಗಳ ವರ್ಗೀಕರಣ (Classification of Science):


ಜ್ಞಾನದ ಕ್ಷೇತ್ರವು ಬಹಳ ವಿಶಾಲವಾದುದು. ಅದಕ್ಕೆ ಇತಿಮಿತಿಗಳಿಲ್ಲ. ಆದ್ದರಿಂದಲೇ ಜ್ಞಾನವನ್ನು ಸಾಗರಕ್ಕೆ ಹೋಲಿಸುವುದುಂಟು. “ಜ್ಞಾನ ಸಾಗರ” (Ocean of knowledge) ಎಂಬ ಪದವೂ ಬಳಕೆಯಲ್ಲಿದೆ, ಜ್ಞಾನದ ಸಮಗ್ರ ದರ್ಶನ ಪಡೆಯುವುದು ಯಾವುದೇ ವ್ಯಕ್ತಿಯ ಸಾಮರ್ಥ್ಯವನ್ನು ಮೀರಿದ ಮಾತು, ಜ್ಞಾನದ ಒಂದೊಂದು ಕ್ಷೇತ್ರವನ್ನು ಅಧ್ಯಯನ ಮಾಡಲು ಒಂದೊಂದು ವಿಜ್ಞಾನವೇ ಹುಟ್ಟಿಕೊಂಡಿದೆ. ಈ ವಿಜ್ಞಾನಗಳನ್ನು ಸಾಂಪ್ರಾದಾಯಿಕವಾಗಿ ಎರಡು ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ, ಅವುಗಳೆಂದರೆ

(i) ನೈಸರ್ಗಿಕ ವಿಜ್ಞಾನಗಳು (ಅಥವಾ ಭೌತ ವಿಜ್ಞಾನಗಳು)

(ii) ಸಮಾಜ ವಿಜ್ಞಾನಗಳು,

ನೈಸರ್ಗಿಕ ವಿಜ್ಞಾನಗಳು ನಿಸರ್ಗದ ಸೃಷ್ಟಿಯನ್ನು ಅಧ್ಯಯನ ಮಾಡುತ್ತವೆ. ಸಮಾಜ ವಿಜ್ಞಾನಗಳು ಮಾನವ ಕೇಂದ್ರೀತವಾದ ಸಾಮಾಜಿಕ ಜಗತ್ತನ್ನು ಅಧ್ಯಯನ ಮಾಡುತ್ತವೆ. ಇವೆರಡೂ ಪರಸ್ಪರ ಸಂಬಂಧಪಟ್ಟಿವೆ.

ನೈಸರ್ಗಿಕ ವಿಜ್ಞಾನಗಳು ಅಥವಾ ಭೌತ ವಿಜ್ಞಾನಿಗಳು (Natural Sciences or Physical Sciences):
ನೈಸರ್ಗಿಕ ವಿಜ್ಞಾನಗಳು ಭೌತಿಕ ಜಗತ್ತನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತವೆ. ಅವು ನೈಸರ್ಗಿಕ ವಸ್ತುಗಳ ಭೌತಿಕ ಲಕ್ಷಣಗಳನ್ನು ಅಧ್ಯಯನ ಮಾಡುವುದು, ರಿಚಾ‌ಟಿ ಶಾಫರ್ ರವರು ಹೇಳುವಂತೆ “ನೈಸರ್ಗಿಕ ವಿಜ್ಞಾನವೆಂಬುದು ನಿಸರ್ಗದ ಭೌತಿಕ ಲಕ್ಷಣಗಳು ಮತ್ತು ಅವುಗಳ ಅಂತಃಕ್ರಿಯೆ ಹಾಗೂ ಪರಿವರ್ತನೆಗಳ ಅಧ್ಯಯನವಾಗಿದೆ".

ನೈಸರ್ಗಿಕ ಅಥವಾ ಭೌತ ವಿಜ್ಞಾನಗಳೂ ಕೂಡ ಬಹಳ ವಿಸ್ತಾರವಾದ ಅಧ್ಯಯನ ವ್ಯಾಪ್ತಿಯನ್ನು ಹೊಂದಿವೆ. ಇಲ್ಲಿಯೂ ಕೂಡ ನಿಸರ್ಗ ಸೃಷ್ಟಿಯ ಒಂದೊಂದು ಕ್ಷೇತ್ರದಲ್ಲಿಯೂ ಒಂದೊಂದು ವಿಶಿಷ್ಟ ವಿಜ್ಞಾನ ಶಾಖೆಯ ಉದಯವಾಗಿದೆ, ಉದಾ: ಭೂಗರ್ಭಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಖಗೋಳಶಾಸ್ತ್ರ, ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ,

ಇತ್ಯಾದಿ. ಸಮಾಜ ವಿಜ್ಞಾನಗಳು: (Social Science):
ಸಮಾಜ ವಿಜ್ಞಾನಗಳು ಮಾನವನ ಸಾಮಾಜಿಕ ಜಗತ್ತನ್ನು ಕುರಿತು ಅಧ್ಯಯನ ಮಾಡುತ್ತವೆ. ಮಾನವನು ತನ್ನ ಸಾಮಾಜಿಕ ಅಸ್ತಿತ್ವಕ್ಕಾಗಿ ತಾನೇ ಸೃಷ್ಟಿಸಿಕೊಂಡ ಸಾಮಾಜಿಕ ಜಗತ್ತಿನಲ್ಲಿ ತನ್ನ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳು-ಮುಂತಾದವುಗಳನ್ನು ವೈಜ್ಞಾನಿಕವಾಗಿ ಅಭ್ಯಾಸಮಾಡುವ ಯತ್ನ ನಡೆಸಿದ್ದಾನೆ. “ಸಮಾಜ ವಿಜ್ಞಾನ" ಎಂಬ ಪರಿಕಲ್ಪನೆಯನ್ನು ಕೆಲವೊಮ್ಮೆ ಮಾನವ ಮತ್ತು ಆತನ ಸಮಾಜ ಇವುಗಳಿಗೆ ಸಂಬಂಧಿಸಿದ ಯಾವುದೇ ಅಧ್ಯಯನಶಾಸ್ತ್ರವನ್ನು ಸೂಚಿಸಲು ಬಳಸುವುದುಂಟು.
ಸಮಾಜ ವಿಜ್ಞಾನದ ವ್ಯಾಖ್ಯೆ:

1. ಐಯಾನ್ ರಾಬರ್ಟ್‌ಸನ್: “ಮಾನವ ವರ್ತನೆಯ ವಿಭಿನ್ನ ಅಂಶಗಳನ್ನು ಅಧ್ಯಯನ ಮಾಡುವಂತಹ ಪರಸ್ಪರ ಸಂಬಂಧಿತವಾದ ಅಧ್ಯಯನಶಾಸ್ತ್ರಗಳ ಸಮುಚ್ಚಯವನ್ನು ಸಮಾಜ ವಿಜ್ಞಾನಗಳೆನ್ನಬಹುದು.”

2. ಸರಳ ಪದಗಳಲ್ಲಿ ಹೇಳುವುದಾದರೆ, ಸಂಕೀರ್ಣ ಸ್ವರೂಪದ ಮಾನವ ಸಂಬಂಧಗಳನ್ನು ಅರ್ಥವಿಸಿಕೊಳ್ಳಲು ವೈಜ್ಞಾನಿಕ ವಿಧಾನಗಳನ್ನು ಬಳಸುವ ಅಧ್ಯಯನಶಾಸ್ತ್ರವನ್ನು ಸಮಾಜ ವಿಜ್ಞಾನಗಳು ಎಂದೆನ್ನಬಹುದು. ಸಮಾಜ ವಿಜ್ಞಾನಗಳಿಗೆ ಉದಾಹರಣೆಗಳು:- ಇತಿಹಾಸ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ,

ಸಮಾಜಶಾಸ್ತ್ರ ಇತ್ಯಾದಿ ಇವು ಸಮಾಜ ವಿಜ್ಞಾನಗಳ ವರ್ಗಕ್ಕೆ ಸೇರಿವೆ.

ಭೌತ ಹಾಗೂ ಸಮಾಜ ವಿಜ್ಞಾನಗಳ ನಡುವಿನ ವ್ಯತ್ಯಾಸಗಳು (Differences between Physical and Social

Sciences)

ಭೌತ ಹಾಗೂ ಸಮಾಜ ವಿಜ್ಞಾನಗಳು ಅನುಕ್ರಮವಾಗಿ ಭೌತ ಹಾಗೂ ಸಾಮಾಜಿಕ ಪ್ರಪಂಚಗಳ ಕುರಿತಾದ ಅಧ್ಯಯನ ಮಾಡುವ ಜ್ಞಾನ ಶಾಖೆಗಳು, ಅವುಗಳ ನಡುವೆ ಮೂಲಭೂತ ವ್ಯತ್ಯಾಸವಿದೆ. ಅವುಗಳ ಅಧ್ಯಯನ ವಸ್ತು ಹಾಗೂ ಅಧ್ಯಯನ ವಿಧಾನಗಳು ಬೇರೆ ಬೇರೆಯಾಗಿವೆ. ಇವುಗಳ ನಡುವಿನ ಇಂತಹ ಮುಖ್ಯ ವ್ಯತ್ಯಾಸಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಿ ಹೇಳಬಹುದಾಗಿದೆ.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now