BRO: Project Dantak ವಜ್ರಮಹೋತ್ಸವ ಆಚರಣೆ
(Border Roads Organisation) ಅತ್ಯಂತ ಹಳೆಯ ಯೋಜನೆ ದಂತಕ್ Project Dantak 2021ರ ಏಪ್ರಿಲ್ 24ರಂದು 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಜ್ರಮಹೋತ್ಸವವನ್ನು (Diamond Jubilee in Bhutan) ಭೂತಾನ್‌ನಲ್ಲಿ ಆಚರಿಸಲಾಯಿತು. ಈ ಯೋಜನೆಗೆ 1961ರ ಏಪ್ರಿಲ್ 24ರಂದು ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಭೂತಾನ್ ರಾಜತ್ವದ 3ನೇ ದೊರೆ ವಾಂಗ್‌ಚುಕೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಈ ಯೋಜನೆಯ ಪ್ರಮುಖ ಉದ್ದೇಶ ಭೂತಾನ್ ಸಾಮ್ರಾಜ್ಯದಲ್ಲಿ ವಾಹನಗಳು ಚಲಿಸಬಲ್ಲ ರಸ್ತೆಯನ್ನು ನಿರ್ಮಿಸುವುದಾಗಿತ್ತು. ಈ ರಸ್ತೆ ನಿರ್ಮಾಣ ಯೋಜನೆಯು ಭಾರತ ಮತ್ತು ಭೂತಾನ್
ನಡುವೆ ಸಂಬಂಧ ಸುಧಾರಿಸಲು ಸಹಕಾರಿಯಾಯಿತು. ಬಿಆರ್‌ಓ ಬಗ್ಗೆ ಮಾಹಿತಿ:
ang dina: BRO-Border Roads Organisation ಗಡಿ ರಸ್ತೆಗಳ ಸಂಘಟನೆ
ಸ್ಥಾಪನೆ: 1960ರ ಮೇ 7 ಕೇಂದ್ರ ಕಚೇರಿ: ನವದೆಹಲಿ ಕಾರ್ಯನಿರ್ವಹಣೆ: ಕೇಂದ್ರ ರಕ್ಷಣಾ ಸಚಿವಾಲಯ
ಧೈಯ ವಾಕ್ಯ: ಶ್ರಮೇನ ಸರ್ವ೦ ಸಾಧ್ಯಂ ಜಲರ್, ಕಾರ್ಯಗಳು: ಭಾರತೀಯ ಸಶಸ್ತ್ರ ಪಡೆಯ ಭಾಗವಾಗಿದ್ದು, ಭಾರತದ ಗಡಿ ಪ್ರದೇಶಗಳಲ್ಲಿ ಮತ್ತು ನೆರೆಯ ಸ್ನೇಹ ರಾಷ್ಟ್ರಗಳಿಗೆ (ಭೂತಾನ್, ಮಯನ್ಮಾರ್, ನೇಪಾಳ, ತಜಕಿಸ್ಥಾನ, ಅಫ್ಘಾನಿಸ್ಥಾನ) ಅನುಕೂಲವಾಗುವಂತಹ ರಸ್ತೆ ಜಾಲವನ್ನು ಅಭಿವೃದ್ಧಿ ಪಡಿಸುವ ಮತ್ತು ನಿರ್ವಹಣೆ ಮಾಡುವ ಮೂಲಕ ಭಾರತೀಯ ಸೇನೆಗೆ ಸಹಕಾರ ನೀಡುತ್ತಿದೆ. ಬಿಆರ್‌ಒನವರು ಅನೇಕ ಸುರಂಗ ಮಾರ್ಗಗಳನ್ನು ಮತ್ತು ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಿದ್ದಾರೆ. ಜಆರ್ ಅಭಿವೃದ್ಧಿಪಡಿಸಿರುವ ಪ್ರಮುಖ ರಸ್ತೆಗಳು:
ಲೇಜ್-ಮನಾಆ ಹೆದ್ದಾರಿ: ಜಗತ್ತಿನ ಅತಿ ಎತ್ತರದ ರಸ್ತೆ ಮಾರ್ಗ ಲೇಹ್(ಲಡಾಕ್) ಮತ್ತು ಮನಾಲಿ(ಹಿಮಾಚಲ ಪ್ರದೇಶ) ಹೆದ್ದಾರಿ
(Leh-Manali-Highway) ನಗರಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯು ಹಿಮಾಲಯ ಪರ್ವತದಲ್ಲಿ ಹಾದು ಹೋಗುತ್ತಿದ್ದು, ಸುಮಾರು 5,325 ಮೀಟರ್ ಎತ್ತರದಲ್ಲಿದೆ. ಈ ರಸ್ತೆಯನ್ನು ಬಿಆರ್‌ಒನವರು ನಿರ್ವಹಿಸುತ್ತಿದ್ದಾರೆ. ಈ ಹೆದ್ದಾರಿಯು ವರ್ಷದಲ್ಲಿ ನಾಲ್ಕೂವರೆ ತಿಂಗಳು ಮಾತ್ರ ಪ್ರಯಾಣಕ್ಕೆ ಮುಕ್ತವಾಗಿರುತ್ತದೆ. 490 ಕಿ.ಮೀ. ದೂರದ ಹೆದ್ದಾರಿಯು ಜಗತ್ತಿನಲ್ಲೇ ಅತಿ ಎತ್ತರದ ಹೆದ್ದಾರಿಯಾಗಿದೆ. ಕೆಲವೊಮ್ಮೆ ರಸ್ತೆಯಲ್ಲಿ ಸಾಗುವಾಗ ಉಸಿರಾಟಕ್ಕೆ ಆಮ್ಲಜನಕದ ಕೊರತೆಯೂ ಕೂಡ ಕಂಡುಬರುತ್ತದೆ.
ರೋಹ್ವಾಂಗ್ ಸುರಂಗ (ಅಟಲ್ ಸುರಂಗ): 8.8 ಕಿ.ಮೀ. ಉದ್ದದ ಈ ಸುರಂಗಕ್ಕೆ ಅಟಲ್ ಸುರಂಗ ಎಂದು ನಾಮಕರಣ ಮಾಡಲಾಗಿದೆ. ಈ ಸುರಂಗವು ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದ್ದು, ಪ್ರಪಂಚದ ಅತಿ ಎತ್ತರವಾದ ರಸ್ತೆ ಸುರಂಗ ಎನಿಸಿದೆ. ಈ ಸುರಂಗವು ಹಿಮಾಚಲ ಪ್ರದೇಶದಲ್ಲಿದ್ದು, ಲೇಹ್ ಮನಾಲಿ ಹೆದ್ದಾರಿಯಲ್ಲಿದೆ. (ಪ್ರೊಜೆಕ್ಟ್ ಹಿಮಾಂಕ್-ಬಿಆರ್‌ಒನಿಂದ 1985ರಲ್ಲಿ ಲಡಾಕ್ ಪ್ರಾಂತ್ಯದಲ್ಲಿ ಪ್ರಾರಂಭಿಸಿದ ಮೂಲಸೌಕರ್ಯ ಸಂಬಂಧಿತ ಯೋಜನೆ.)
Post a Comment