ಭಾರತದಲ್ಲಿ ತಂಬಾಕು ನಿಯಂತ್ರಣ ಶಾಸನ (Tobacco Control Legislation) ವು ಅತ್ಯಂತ ಹಳೆಯ ಕಾಯ್ದೆಯಾಗಿದ್ದು, ಶಾಸನಬದ್ಧ ಆರೋಗ್ಯ ಎಚ್ಚರಿಕೆಗಳನ್ನು ಪ್ರದರ್ಶಿಸಲು ಆದೇಶಿಸುತ್ತದೆ. 2003ರಲ್ಲಿ ಸಮಗ್ರ ತಂಬಾಕು ನಿಯಂತ್ರಣ ಶಾಸನವು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳು ಮತ್ತು ತಂಬಾಕು ಜಾಹೀರಾತು ಹಾಗೂ ಪ್ರಚಾರಗಳಿಗೆ ಸ್ಥಳಗಳನ್ನು ಒದಗಿಸುವುದಕ್ಕೆ ನಿರ್ಬಂಧ ಹೇರುವ ಗುರಿಯನ್ನು ಹೊಂದಿದೆ. ಬ್ರೆಜಿಲ್ ರಿಯೋಡಿ ಜಾನಿರೋದಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ ಶಾಸಕಾಂಗ ಸಭೆಯ ಸದಸ್ಯರಾಗಿದ್ದ ಡಾ. ಹರ್ಷವರ್ಧನ್ ಅವರು 1998ರಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕರ ಮೆಚ್ಚುಗೆಯ ಪೊಲಿಯೋ ನಿರ್ಮೂಲನಾ ಚಾಂಪಿಯನ್ ಪ್ರಮಾಣ ಪತ್ರವನ್ನು ಪಡೆದಿದ್ದರು. 2019ರಲ್ಲಿ ಭಾರತ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಮಸೂದೆಯನ್ನು ರೂಪಿಸಿದ್ದರು. ಇ-ಸಿಗರೇಟ್ಗಳ ಉತ್ಪಾದನೆ, ಆಮದು, ರಫ್ತು, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತುಗಳನ್ನು ಮಸೂದೆ ನಿಷೇಧ ಮಾಡಿದೆ. ಅಸಮರ್ಪಕವಾಗಿ ಹದಿಹರೆಯದವರ ಮೇಲೆ ಪರಿಣಾಮ ಬೀರುವ ಇ-ಸಿಗರೇಟ್ಗಳ ಅಪಾಯದಿಂದ ದೇಶವನ್ನು ರಕ್ಷಿಸಲು ಸರ್ಕಾರದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಭಾರತ ಸರ್ಕಾರವು 2025ರ ವೇಳೆಗೆ ತಂಬಾಕು ಬಳಕೆಯನ್ನು ಶೇ. 30 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
Toll Free Quit Line Service: ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಬಳಕೆಯನ್ನು ತ್ಯಜಿಸಲು 2016 ರಿಂದ ಈ ಸೇವೆಯು ಆರಂಭವಾಗಿದ್ದು ನಾಲ್ಕು ಕೇಂದ್ರಗಳಿಂದ 16 ಮುಖ್ಯ ಭಾಷೆಗಳು ಮತ್ತು ಇತರ ಸ್ಥಳೀಯ ಉಪಭಾಷೆಗಳಲ್ಲೂ ಲಭ್ಯವಿದೆ.
ನೆನಪಿರಲ: ಭಾರತಕ್ಕೆ ಮೊದಲ ಬಾರಿ ಪೋರ್ಚುಗೀಸರು ತಂಬಾಕು ಬೆಳೆಯನ್ನು ಪರಿಚಯಿಸಿದ್ದರು. ಹೊಗೆಸೊಪ್ಪಿನ ಮೂಲ ದಕ್ಷಿಣ ಆಫ್ರಿಕಾದ ಆಂಡಿಸ್ ಪರ್ವತ, ಪ್ರಪಂಚದಲ್ಲಿ ಅತಿಹೆಚ್ಚು ತಂಬಾಕನ್ನು ಚೀನಾ ದೇಶವು ಉತ್ಪಾದಿಸುತ್ತದೆ. ಭಾರತವು ಜಗತ್ತಿನಲ್ಲಿ 3ನೇ ಸ್ಥಾನದಲ್ಲಿದ್ದು ದೇಶದಲ್ಲಿ ಆಂಧ್ರಪ್ರದೇಶ ರಾಜ್ಯವು ಮೊದಲ ಸ್ಥಾನದಲ್ಲಿದೆ. ತಂಬಾಕು ಬೆಳೆಗಳಲ್ಲಿ 70 ಬಗೆಯ ಪ್ರಭೇದಗಳಿದ್ದು ವರ್ಜೀನಿಯಾ ಟೊಬ್ಯಾಕೋ ತಳಿ. ಅತ್ಯಂತ ಅಪಾಯಕಾರಿ, ತಂಬಾಕು ಬೆಳೆದ ಪ್ರದೇಶಗಳಲ್ಲಿ ಫಲವತ್ತತೆ ನಾಶವಾಗುತ್ತದೆ. 2008ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕನ್ನು ಉತ್ತೇಜಿಸುವ ಯಾವುದೇ ವಿವಿಧ ಜಾಹೀರಾತನ್ನು ನೀಡುವುದನ್ನು ನಿಷೇಧಿಸಿದೆ. (ತಂಬಾಕು ಸಂಶೋಧನಾ ಕೇಂದ್ರ - ಆಂಧ್ರಪ್ರದೇಶದ ರಾಜಮುಂಡಿ)
ಇ-ಸಿಗರೇಟ್: ತಂಬಾಕು ಆಧಾರಿತ ಸಾಮಾನ್ಯ ಸಿಗರೇಟ್ ಪರ್ಯಾಯವಾಗಿ ಬಳಸುವ ವಿದ್ಯುನ್ಮಾನ ಸಾಧನವಾಗಿದ್ದು ಇದರಲ್ಲಿ ತಂಬಾಕು ಇರುವುದಿಲ್ಲ. ಲೈಟರ್ ಮಾದರಿಯಲ್ಲಿರುವ ಇದರ ಒಳಗೆ ದ್ರವರೂಪದ ನಿಕೋಟಿನ್ ಜತೆಗೆ ಕೆಲವು ಹಾನಿಕಾರಕ ರಾಸಾಯನಿಕ ವಸ್ತುಗಳನ್ನು ಸೇರಿಸಲಾಗುತ್ತದೆ. ಬ್ಯಾಟರಿಯಿಂದ ಉಂಟಾದ ಶಾಖದ ನೆರವಿನಿಂದ ದ್ರವರೂಪದ ನಿಕೋಟಿನ್ ಪರಿವರ್ತನೆಗೊಂಡು ಅಬೆಯಾಗಿ ಸಿಗರೇಟ್ನಂತೆ ಎಳೆದುಕೊಳ್ಳಲಾಗುತ್ತದೆ. ಆದ್ದರಿಂದ 2019ರಲ್ಲಿ ಕೇಂದ್ರ ಸರ್ಕಾರವು ತಂಬಾಕು ಆಧಾರಿತ ಸಿಗಿರೇಟ್ಗಳಿಗೆ ಪರ್ಯಾಯವಾಗಿ ಬಳಕೆಯಲ್ಲಿದ್ದ ಇ-ಸಿಗರೇಟ್ನ ಉತ್ಪಾದನೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮಸೂದೆಯನ್ನು ಹೊರಡಿಸಿತ್ತು.
ಕ್ಯೂಬಾ ಕ್ರಾಂತಿ (Cuba Revolution): ಕ್ಯೂಬಾದ ನಿರಂಕುಶ ಅಧಿಕಾರಿ ಅಧ್ಯಕ್ಷ ಪುಲೆನ್ಸಿಯೋ ಬಟಿಷ್ಟಾ ಸರ್ಕಾರವನ್ನು 1959 ರಲ್ಲಿ ಫಿಡೆಲ್ ಕ್ಯಾಸ್ಟ್ ನೇತೃತ್ವದ ಕ್ರಾಂತಿಕಾರಿಗಳು ಸಶಸ್ತ್ರ ಕ್ರಾಂತಿಯ ಮೂಲಕ ಉರುಳಿಸಿದ್ದರು. ಈ ಹೋರಾಟದ ನೇತೃತ್ವವನ್ನು ಫಿಡೆಲ್ ಕ್ಯಾಸ್ಟೋ ವಹಿಸಿದ್ದರು ಹಾಗೂ ಈ ಹೋರಾಟದಲ್ಲಿ ಫಿಡೆಲ್ ಕ್ಯಾಸ್ಟೋ ಸೋದರ ರೌಲ್ ಕ್ಯಾಸ್ಟೋ ಕೂಡ ಮುಂಚೂಣಿಯಲ್ಲಿದ್ದರು.
ಆರು ದಶಕಗಆಂದ ಕ್ಯಾಸ್ಟೋ ಸಹೋದರರ ಆಡಆತ: 1959ರಲ್ಲಿ ನಡೆದ ಕ್ರಾಂತಿಯ ಬಳಿಕ ಕ್ಯೂಬಾದಲ್ಲಿ ಫಿಡೆಲ್ ಕ್ಯಾಸ್ಟ್ ಅಧಿಕಾರಕ್ಕೆ ಏರಿದರು. ಫಿಡೆಲ್ ಕ್ಯಾಸ್ಟೋ ಪ್ರಥಮ ಕಾರ್ಯದರ್ಶಿಯಾಗಿ ನೇಮಕ: 1961ರ ಜುಲೈನಲ್ಲಿ ಕ್ಯೂಬಾದ ಕ್ರಾಂತಿಕಾರಿ ಸಂಘಟನೆಯ ಕೇಂದ್ರ ಸಮಿತಿಯ ಪ್ರಥಮ ಕಾರ್ಯದರ್ಶಿಯಾಗಿ ಫಿಡೆಲ್ ಕ್ಯಾಸ್ಟ್ (Fidel Castro) ಅಧಿಕಾರ ವಹಿಸಿಕೊಂಡರು. ನಂತರ ಈ ಪಕ್ಷವು ಯುನೈಟೆಡ್ ಪಾರ್ಟಿ ಫಾರ್ ಸೋಷಿಯಲಿಸ್ಟ್ ರೆವಲ್ಯೂಷನರಿ ಕ್ಯೂಬಾ ಎಂದು 1962 ರಲ್ಲಿ ಹೆಸರು ಪಡೆದುಕೊಂಡಿತ್ತು. ನಂತರ 1965 ರಲ್ಲಿ ಕ್ಯೂಬಾ ಕಮ್ಯುನಿಸ್ಟ್ ಪಕ್ಷವಾಯಿತು. ಉದ್ದಕ್ಕೂ ಪಕ್ಷದ ಕೇಂದ್ರ ಸಮಿತಿಯ ಪ್ರಥಮ ಕಾರ್ಯದರ್ಶಿಯಾಗಿ ಫಿಡೆಲ್ ಕ್ಯಾಸ್ಟೋ ಕಾರ್ಯನಿರ್ವಹಿಸಿದ್ದರು. ಕಮ್ಯುನಿಸ್ಟ್ ಸರ್ಕಾರವನ್ನು ನಿಯಂತ್ರಿಸುತ್ತಿದ್ದ ಕ್ಯಾಸ್ಟ್ ಸಹೋದರರು: ಸರ್ಕಾರ ಮತ್ತು ಆಡಳಿತವು ಕ್ಯೂಬಾ ಕಮ್ಯುನಿಸ್ಟ್ ಪಕ್ಷಕ್ಕಿದ್ದರೂ ಅದನ್ನು ನಿಯಂತ್ರಿಸುವ ಮತ್ತು ಹಿಡಿತದಲ್ಲಿಟ್ಟುಕೊಂಡಿದ್ದವರು ಕ್ಯಾಸ್ಟೋ ಸೋದರರು. ಅವರು ಪಕ್ಷದ ಕೇಂದ್ರ ಸಮಿತಿಯ ಪ್ರಥಮ ಕಾರ್ಯದರ್ಶಿಯಾಗುವ ಮೂಲಕ ಪಕ್ಷದ ಮುಖ್ಯಸ್ಥರಾಗಿ
ಅಧಿಕಾರವನ್ನು ಚಲಾಯಿಸುತ್ತಿದ್ದರು. ಅಮೆರಿಕಾದ ಉದ್ಯಮಿಗಳ ರಾಷ್ಟ್ರೀಕರಣ: ಕ್ಯಾಸ್ಟ್ ರವರು 1961
ರಲ್ಲಿ ರಚಿತವಾದ ಒಕ್ಕೂಟ ಸರ್ಕಾರದಲ್ಲಿ ಪ್ರಧಾನಿಯಾಗಿದ್ದರು. 60ರ ದಶಕದಲ್ಲಿ ಕ್ಯೂಬಾದ ಎಲ್ಲಾ ಕೈಗಾರಿಕೆಗಳು, ಉದ್ಯಮಗಳನ್ನು ರಾಷ್ಟ್ರೀಕರಣ ಮಾಡಿ ಫಿಡೆಲ್ ಆದೇಶ ಹೊರಡಿಸಿದ್ದರು. ಕ್ಯೂಬಾದಲ್ಲಿದ್ದ ಅಮೆರಿಕದ ಉದ್ಯಮಿಗಳಿಗೆ ಯಾವುದೇ ಪರಿಹಾರ ನೀಡದೆ ರಾಷ್ಟ್ರೀಕರಣ ಮಾಡಲಾಯಿತು. ಇದರ ಪರಿಣಾಮವಾಗಿ ಅಮೆರಿಕವು ಕ್ಯೂಬಾದ ಮೇಲೆ ದಿಗಂಧನ ಹೇರಿತ್ತು. ಇದರಿಂದ ಕ್ಯೂಬಾದ ಆರ್ಥಿಕ ವ್ಯವಸ್ಥೆ ಕುಸಿದು ಬಿದ್ದಿತ್ತು. ಆಗ ಕ್ಯೂಬಾದ ನೆರವಿಗೆ ಬಂದದ್ದು ಯುಎಸ್ಎಸ್ಆ, ಇದರಿಂದ ಕಮ್ಯೂನಿಸ್ಟ್ ಚಿಂತನೆಗಳು ಕ್ಯೂಬಾದಲ್ಲಿ ಮುನ್ನೆಲೆಗೆ ಬರಲು ಆರಂಭಿಸಿದವು. 1965 ರಲ್ಲಿ ಕ್ಯಾಸ್ಟೋ ರವರು ಕಮ್ಯುನಿಸ್ಟ್ ಪಾರ್ಟಿ ಆಫ್ ಕ್ಯೂಬಾವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ತಾವು ಮಾರ್ಕ್ಸ್-ಲೆನಿನ್ ಅನುಯಾಯಿ ಎಂದು ಬಹಿರಂಗವಾಗಿ ಘೋಷಿಸಿದ್ದರು.
ಫಿಡೆಲ್ ಅನಾರೋಗ್ಯದಿಂದ ರೌಲ್ ತಾತ್ಕಾಲಕ ಅಧಿಕಾರ: 2006 ರಲ್ಲಿ ಫಿಡೆಲ್ ಅನಾರೋಗ್ಯಕ್ಕೆ ಒಳಗಾದಾಗ ತಾತ್ಕಾಲಿಕವಾಗಿ ದೇಶದ ಚುಕ್ಕಾಣಿಯನ್ನು ರೌಲ್ ಕ್ಯಾಸ್ಟ್ ಅವರು ವಹಿಸಿಕೊಂಡರು. 2008 ರಲ್ಲಿ ಫಿಡೆಲ್ರವರು ದೇಶದ ಅಧ್ಯಕ್ಷ ಸ್ಥಾನವನ್ನು ರೌಲ್ಗೆ ನೀಡಿದ್ದರು. ಹೀಗೆ 47 ವರ್ಷ ಸೇನೆಯ ಮುಖ್ಯಸ್ಥನಾಗಿದ್ದ ಅತ್ಯಂತ ಪ್ರಭಾವಿ ರೌಲ್ ಕ್ಯಾಸ್ಟೋವಿಗೆ ದೇಶದ ಚುಕ್ಕಾಣಿ ದೊರೆಯಿತು. ವಯೋ ಸಹಜ ಕಾರಣಗಳನ್ನು ನೀಡಿ 2011 ರಲ್ಲಿ ಫಿಡೆಲ್ ಕ್ಯಾಸ್ಟೋ ನಿವೃತ್ತಿಯಾದ ಬಳಿಕ ರೌಲ್ ಅಧಿಕಾರಕ್ಕೆ ಬಂದಿದ್ದರು.
2011ರಲ್ಲಿ ಪಕ್ಷದ ಪ್ರಥಮ ಕಾರ್ಯದರ್ಶಿಯಾಗಿ ರೌಲ್ ನೇಮಕ: 2011ರಲ್ಲಿ ಪಕ್ಷದ ಕೇಂದ್ರ ಸಮಿತಿಯ ಪ್ರಥಮ ಕಾರ್ಯದರ್ಶಿಯಾಗಿಯೂ ರೌಲ್ ಕ್ಯಾಸ್ಟೋ ನೇಮಕಗೊಂಡರು 2016 ರಲ್ಲಿ ಫಿಡೆಲ್ ಸಾವಿನೊಂದಿಗೆ ಪಕ್ಷ ಮತ್ತು ದೇಶದ ಪ್ರಶ್ನಾತೀತ ನಾಯಕನಾಗಿ ರೌಲ್ ಹೊರ ಹೊಮ್ಮಿದ್ದರು. ದೇಶದ ಅಧ್ಯಕ್ಷ ಸ್ಥಾನವನ್ನು ರೌಲ್ ರವರು ಮಿಗೆಲ್ ಡಿಯಾಝ್ ಕನೆಲ್ಗೆ 2018ರಲ್ಲಿ ವಹಿಸಿಕೊಟ್ಟರು.
ಫಿಡೆಲ್ ಕ್ಯಾಸ್ಟೋ (Fidel Castro) ನಿಧನ: 1959ರಿಂದಲೂ ಆಳ್ವಿಕೆ ನಡೆಸಿದ್ದ ಫಿಡೆಲ್ ಕ್ಯಾಸ್ಟೋ ಅವರು 2016ರಲ್ಲಿ ನಿಧನರಾಗಿದ್ದರು. ಫಿಡೆಲ್ರವರ ಅನಾರೋಗ್ಯದ ಹಿನ್ನಲೆಯಲ್ಲಿ 2011 ರಿಂದಲೇ ಅಧಿಕಾರ ನಡೆಸುತ್ತಿದ್ದ ಫೆಡೆಲ್ ಸಹೋದರ ರೌಲ್ ಕ್ಯಾಸ್ಟೋ ರವರು ದೇಶದ ಅಧಿಕಾರದ ಕೇಂದ್ರ ಬಿಂದುವಾದರು.
ರಾಜೀನಾಮೆ ಘೋಷಿಸಿದ ರೌಲ್ ಕ್ಯಾಸ್ಟೋ (Raul Castro): 89 ವರ್ಷ ವಯಸ್ಸಿನ ರೌಲ್ ಕ್ಯಾಸ್ಟೋ ರವರು ಪಕ್ಷದ ಮುಖ್ಯಸ್ಥನ ಹುದ್ದೆಗೆ 2021ರ ಏಪ್ರಿಲ್ 19 ರಂದು ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಕ್ಕೆ
ಕಮ್ಯುನಿಸ್ಟ್ ಪಾರ್ಟಿಯ ಪ್ರಥಮ ಕಾರ್ಯದರ್ಶಿಯನ್ನು ಘೋಷಿಸಿದೆ. ಹೊಸ ಪ್ರಥಮ ಕಾರ್ಯದರ್ಶಿ ಘೋಷಣೆ: ಕಮ್ಯುನಿಸ್ಟ್ ಪಾರ್ಟಿ ಆಫ್
ಕ್ಯೂಬಾದ ಪ್ರಥಮ ಕಾರ್ಯದರ್ಶಿಯನ್ನಾಗಿ 2021ರ ಏಪ್ರಿಲ್ 19 ರಂದು ಮಿಗೆಲ್ ಡಿಯಾಝ್ ಕನೆಲ್ ರವರನ್ನು ಆಯ್ಕೆ ಮಾಡಲಾಗಿದೆ. ಇವರು 2018 ಏಪ್ರಿಲ್ 19 ರಿಂದ ಕೌನ್ಸಿಲ್ ಆಫ್ ಸ್ಟೇಟ್ನ ಅಧ್ಯಕ್ಷರಾಗಿ ಮತ್ತು 2019 ಅಕ್ಟೋಬರ್ 10 ರಿಂದ ಕ್ಯೂಬಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಕ್ಯಾಸ್ಟ್ ಕುಟುಂಬದ ಹೊರಗಿನವರೊಬ್ಬರು ಕ್ಯೂಬಾದ ಚುಕ್ಕಾಣಿಯನ್ನು ಹಿಡಿದಂತಾಗಿದೆ. ಹೊಸ ತಲೆಮಾರು ಕ್ಯೂಬಾದಲ್ಲಿ ಆಳ್ವಿಕೆಯನ್ನು ಆರಂಭಿಸಿದಂತಾಗಿದೆ.
ಕ್ಯೂಬಾ ದೇಶ: ರಾಜಧಾನಿ-ಹವಾನಾ ಕರೆನ್ಸಿ-ಕ್ಯೂಬನ್ ಪೆಸೋ ಶಾಸನಸಭೆ: ನ್ಯಾಷನಲ್ ಅಸೆಂಬ್ಲಿ ಆಫ್ ಪೀಪಲ್ಸ್ ಪ್ರಸ್ತುತ ಕಾರ್ಯದರ್ಶಿ & ಅಧ್ಯಕ್ಷ: ಮಿಗೆಲ್ ಡಿಯಾಝ್ ಕನಲ್