ಪರಿಸರ ಮತ್ತು ಸಮಾಜ

ನಮ್ಮ ಸುತ್ತಮುತ್ತಲಿನ ಬಾಹ್ಯ ಜಗತ್ತನ್ನು ಪರಿಸರವೆಂದು ಕರೆಯುತ್ತೇವೆ. ಇದರಲ್ಲಿ ಗಾಳಿ-ಬೆಳಕು, ಬೆಟ್ಟ ಗುಡ್ಡ, ಕಲ್ಲು-ಮಣ್ಣು, ಗಿಡ-ಮರ, ಕ್ರಿಮಿ-ಕೀಟ, ಪಾಣಿ-ಪಕ್ಷಿ, ನೆಲ-ಜಲ ಇತ್ಯಾದಿಗಳಿವೆ. ಸಹಜವಾಗಿಯೇ ಇವುಗಳು ಜೀವ ಸಂಕುಲದ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಿವೆ. ವಿಶೇಷವಾಗಿ ಜೀವ ಜಗತ್ತಿನಲ್ಲಿ ಮಹತ್ವದ ಸ್ಥಾನ ಪಡೆದಿರುವ ಮಾನವ ವಿಕಾಸದ ಹಿಂದೆ ಪರಿಸರ ನಿರ್ವಹಿಸಿರುವ ಪಾತ್ರ ಅತ್ಯಂತ ಮಹತ್ವದ್ದು. ತನ್ನೆಲ್ಲಾ ಅಗತ್ಯತೆಗಳಿಗೆ ಪರಿಸರ ಅವಕಾಶ ನೀಡಿದ್ದರಿಂದಲೇ ಮಾನವ ಇಷ್ಟೆಲ್ಲಾ ಸಾಧಿಸಲಿಕ್ಕೆ ಸಾಧ್ಯವಾಗಿರುವುದು.ನಮ್ಮ ಸಮುದಾಯದ ಹಾಗೂ ಸಂಘಟಿತ ಬದುಕುಗಳ ದಾರಿಯ ಹಿಂದೆ ಪರಿಸರದ ನೇರ ಪಾತ್ರವಿದೆ. ಅದಕ್ಕಾಗಿಯೇ ಪರಿಸರ ಮತ್ತು ಸಮಾಜವನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ಕರೆಯುತ್ತೇವೆ. ಇವು ಒಂದಕ್ಕೊಂದು ಪೂರಕವಾಗುತ್ತಾ ಸಮಾಜದ ಪ್ರಗತಿಗೆ ಕಾರಣವಾಗಿವೆ. ಮುಖ್ಯವಾಗಿ ನಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ಸಹ ಪರಿಸರವನ್ನೇ ಅವಲಂಬಿಸಿರುವುದು ಗಮನಾರ್ಹ.

ಈ ವ್ಯವಸ್ಥೆಯು ನಾಗರಿಕ ಸಮಾಜದ ಸೂಚಕವಾಗಿದೆ. ನಾಗರಿಕತೆ ಬೆಳೆದಂತೆಲ್ಲಾ ಮಾನವನು ತನ್ನ ಸುತ್ತಮುತ್ತಲ ಪಕೃತಿಯಿಂದ ಕೆಲವೊಂದು ಪಾಠಗಳನ್ನು ಕಲಿತು, ತನ್ನ ಬುದ್ಧಿಯನ್ನು ಜೀವನ ವಿಧಾನಕ್ಕೆ ತಕ್ಕಂತೆ ಬೆಳೆಸಿಕೊಂಡಿದ್ದಾನೆ. ಒಂದರ್ಥದಲ್ಲಿ ಈ ಜೀವಸಂಕುಲಕ್ಕೆ ಪರಿಸರವೇ ಗುರುವಾಗಿದೆ ಎನ್ನಬಹುದು. ಅದಕ್ಕಾಗಿಯೇ ಪರಿಸರವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲಾರದ ಜೀವಿಗಳು ಬದುಕುಳಿಯುವುದು ಅಸಾಧ್ಯ. ಇತ್ತೀಚೆಗೆ ಪರಿಸರ ಮತ್ತು ಸಮಾಜಗಳ ನಡುವಿನ ಬಾಂಧವ್ಯಗಳನ್ನು ಆಧುನಿಕ ಸಮಾಜಶಾಸ್ತ್ರವು ಒಂದು ಅನ್ವಯಿಕ ವಿಷಯವನ್ನಾಗಿಸಿಕೊಂಡು ಅಧ್ಯಯನ ಮಾಡುತ್ತಿದೆ. ಇದರ ಪ್ರತಿಫಲವಾಗಿ ಮೂಡಿಬಂದ ಸಿದ್ಧಾಂತವೇ “ಸಾಮಾಜಿಕ ಜೀವನದ ಗುಣಮಟ್ಟವು ನೈಸರ್ಗಿಕ ಪರಿಸರದ ಗುಣಮಟ್ಟವನ್ನು ಅವಲಂಬಿಸಿದೆ" ಎಂಬುವುದು. ದುರಾದೃಷ್ಟವಶಾತ್ ಇಂದಿನ ಮಾನವನ ಮಿತಿಮೀರಿದ ಬಾಹ್ಯ ವರ್ತನೆಗಳು, ಪರಿಸರ ವ್ಯವಸ್ಥೆಯ ಮೇಲೆ ಕೆಟ್ಟಪರಿಣಾಮವನ್ನುಂಟು ಮಾಡುತ್ತಾ ತನ್ನ ಹಾಗೂ ತನ್ನ ಸುತ್ತಮುತ್ತಲಿನ ಜೀವಸಂಕುಲಗಳಿಗೆ ಅಪಾಯವನ್ನು ತಂದೊಡ್ಡಿದ್ದಾನೆ. ಇದಕ್ಕೆ ವ್ಯತಿರಿಕ್ತವಾಗಿ ಪರಿಸರವು ಕೂಡ ಮಾನವನ ಈ ವರ್ತನೆಗಳಿಗೆ ಸವಾಲೊಡ್ಡುತ್ತಿದೆ. ಒಟ್ಟಾರೆ ಭೂಮಿಯ ಮೇಲಿನ ಎಲ್ಲಾ ಜೀವ ಸಮುದಾಯಗಳು ಪರಿಸರದೊಂದಿಗೆ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಪರಸ್ಪರ ಸಂಬಂಧಗಳನ್ನು ಹೊಂದಿವೆ. ಆದ್ದರಿಂದಲೇ ಪ್ರತಿಯೊಂದು ಜೀವ ಸಂಕುಲಗಳು ಸಹ ತಮ್ಮ ಸುತ್ತ ಮುತ್ತಲಿನ ಪರಿಸರಕ್ಕೆ ಅನುಗುಣವಾಗಿಯೇ ತಮ್ಮನ್ನು ಹೊಂದಿಸಿಕೊಂಡು ಬೆಳೆಯುತ್ತವೆ. ಈ ಸಂಬಂಧಗಳ ಅಧ್ಯಯನವನ್ನು ಜೀವ ಪರಿಸರ ವ್ಯವಸ್ಥೆ (Eco-sysetm) ಎಂದು ಕರೆಯಲಾಗುತ್ತದೆ. ಇಂಗ್ಲೆಂಡಿನ ಖ್ಯಾತ ಪರಿಸರ ತಜ್ಞರಾದ "ಸರ್ ಅರ್ಥರ್ ಜಾರ್ಜ್ ಟಾನ್‌ಸ್ಪೆಲ್ಲಿ (SIR ARTHUR GEORGE TANSLEY)" ಎಂಬುವರು ಈ ಪರಿಕಲ್ಪನೆಯನ್ನು ಮೊದಲ ಬಾರಿಗೆ ಕ್ರಿ ಶ 1935 ರಲ್ಲಿ ಪರಿಚಯಿಸಿದರು.


ಪರಿಸರದ ಅರ್ಥ ಮತ್ತು ವ್ಯಾಖ್ಯಾನಗಳು :

ಪರಿಸರ ಎಂಬ ಪದವು ಆಂಗ್ಲ ಭಾಷೆಯಲ್ಲಿ Environment ಎಂದು ಕರೆಯುತ್ತಾರೆ. Environmentಎಂಬ ಪದವು ಫ್ರೆಂಚ್ ಭಾಷೆಯ 'environ' ಎಂಬ ಪದದಿಂದ ಬಂದಿದೆ. 'environ' ಎಂದರೆ ಆಂಗ್ಲ ಭಾಷೆಯಲ್ಲಿ 'Surround' ಎಂಬುದಾಗಿ ಅರ್ಥೈಸಲಾಗಿದೆ. ಅಂದರೆ ನಮ್ಮ ಸುತ್ತಮುತ್ತ, ಸುತ್ತುವರೆದ, ಆವರಿಸಿರುವ ಇತ್ಯಾಧಿ ಅರ್ಥಗಳಿವೆ. ಒಟ್ಟಾರೆ ಪರಿಸರ ಎಂದರೆ ನಮ್ಮ ಸುತ್ತ ಮುತ್ತಲಿನ ಜೈವಿಕ ಮತ್ತು ಅಜೈವಿಕ ವಸ್ತುಗಳು ಸೇರಿದಂತೆ, ಇಲ್ಲಿ ನಡೆದ ಘಟನೆಗಳು ಮತ್ತು ಅವುಗಳ ಪ್ರಭಾವಗಳನ್ನು ಒಳಗೊಂಡಿರುವುದೇ ಪರಿಸರವೆನ್ನಬಹುದು.

ಪರಿಸರ ಕುರಿತು ಅನೇಕ ವಿದ್ವಾಂಸರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ನೀಡಿದ್ದಾರೆ. 1) ಅಮೇರಿಕಾ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾಗಿದ್ದ ಕಿಂಬಾಲ್ ಯಂಗ್‌ರವರು “ಜೀವಿಯೊಂದರ ಮೇಲೆ ಬಾಹ್ಯವಾಗಿ ಪ್ರಭಾವ ಬೀರುವ ಎಲ್ಲಾ ಬಗೆಯ ಶಕ್ತಿಗಳು, ಪ್ರಚೋದಕಗಳು ಹಾಗೂ ಪರಿಸ್ಥಿತಿಗಳನ್ನು ಪರಿಸರ" ಎಂದು ಅಭಿಪ್ರಾಯ ಪಟ್ಟಿದ್ದಾರೆ".

ಸಾಹು ರವರ ಪ್ರಕಾರ "ವಾಯು, ಜಲ, ಭೂಮಿ, ಅರಣ್ಯ, ವನ್ಯಜೀವಿಗಳು, ಮನುಷ್ಯ, ಸಮಾಜ, ಕೈಗಾರಿಕೆ ಇತ್ಯಾದಿಗಳನ್ನು ಒಳಗೊಂಡಿರುವ ಸಮಗ್ರ ಕ್ರಿಯಾತ್ಮಕ ವ್ಯವಸ್ಥೆಯೇ ಪರಿಸರ" 3) ಬ್ರಿಟಾನಿಯಾ ವಿಶ್ವಕೋಶ ದಲ್ಲಿ ಉಲ್ಲೇಖಿಸಿರುವಂತೆ “ ಒಂದು ಜೀವಿಯನ್ನು ಸುತ್ತುವರೆದಿರುವ ನಿಸರ್ಗದ

2)

ಸ್ವಾಭಾವಿಕ ಮತ್ತು ಜೈವಿಕ ಶಕ್ತಿಗಳು ಅದರ ಮೇಲೆ ಬಾಹ್ಯವಾಗಿ ಪ್ರಭಾವ ಬೀರುವ ಒಟ್ಟು ಮೊತ್ತವೇ

ಪರಿಸರವಾಗಿದೆ".

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now