ಜೀವಪರಿಸರಶಾಸ್ತ್ರವೆಂಬ ವಿಜ್ಞಾನ : (The science of Ecology) :
ಜೀವಿಗಳು ವಾಸಿಸುವ ಭೂಪ್ರದೇಶವನ್ನು ಜೀವಿಗೋಳ ಎಂದು ಕರೆಯಲಾಗಿದೆ. ಸೂಕ್ಷ್ಮ ಜೀವಿಗಳು, ಸಸ್ಯ ಹಾಗೂ ಪ್ರಾಣಿಗಳು ಮುಂತಾದವು ಜೀವಿಗೋಳದಲ್ಲಿ ವಾಸಿಸುತ್ತವೆ. ಪ್ರತಿಯೊಂದು ಜೀವಿಯು ತನ್ನದೇ ಆದ ಪರಿಸರಕ್ಕೆ ಹೊಂದಿಕೊಂಡು, ಅದರ ಎಲ್ಲಾ ಘಟನೆಗಳೊಂದಿಗೆ ಅಂತಃಕ್ರಿಯೆ ನಡೆಸುತ್ತದೆ. ಪರಿಸರದ ಆಧ್ಯಯನ ಮತ್ತು ಪರಿಸರ ಜಾಗೃತಿಯು ಸಮಾಜಶಾಸ್ತ್ರೀಯ ಅಧ್ಯಯನದ ಪ್ರಮುಖ ಭಾಗ ಮತ್ತು ತನ್ನದೇ ಆದ ಅನ್ವಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಪರಿಸರ ಮತ್ತು ಜೀವಿಗಳ ನಡುವಿನ ಸಂಕೀರ್ಣ ಸಂಬಂಧಗಳು ಮತ್ತು ಪರಸ್ಪರ ಪರಿಣಾಮಗಳ ಕುರಿತಾದ ಸಮಗ್ರ ಅಧ್ಯಯನವೇ ಪರಿಸರ ಅಧ್ಯಯನವಾಗಿದೆ.
ಭೂಗ್ರಹವು ಜೀವವಾಸ ವ್ಯವಸ್ಥೆ (Erology)ಯಾಗಿದೆ. ಗ್ರೀಕ್ ಭಾಷೆ eco' ಎಂಬ ಧಾತುವಿನಿಂದ Eeology ಎಂಬ ವಿಜ್ಞಾನ ಉಗಮವಾಗಿದೆ. 'eco' ಎಂದರೆ ಮನೆ (house) ಎಂದರ್ಥ. ಜೀವಿಗಳು ಮತ್ತು
JUಗಳು ಪರಸ್ಪರ ಸಂಬಂಧ ಹೊಂದಿವೆ ಹಾಗೂ ಇಡೀ ಪ್ರಪಂಚವೇ ಒಂದು ಮನೆಯಂತಿದೆ ಎಂಬುದನ್ನು ಈ ಪರಿಕಲ್ಪನೆ ಸಂಕೇತಿಸುವುದು.
ಕ್ರಿ.ಶ 19ನೇ ಶತಮಾನದ ಅರ್ನೆಸ್ಟ್ ಹೇಕಲ್ (Ernest Haeckel) ಏಂಬ ಜರ್ಮನಿಯ ಪ್ರಸಿದ್ಧ ಸೇ ಶಾಸ್ತ್ರಜ್ಞನು ಪ್ರಥಮ ಬಾರಿಗೆ "Ecology" ಎಂಬ ಪರಿಕಲ್ಪನೆಯನ್ನು ಬಳಸಿದನು. ಪರಿಸರವು ಪ್ರಾಣಿ ಸಮುದಾಯದ ಮೇಲೆ ಬೀರುವ ಪ್ರಭಾವವನ್ನು ಸಂಕೇತಿಸಲು ಈ ಪದವನ್ನು ಸೂಚಿಸಿದನು. Ian Robertson ಹೇಳುವಂತೆ “ಪರಿಸರ ಮತ್ತು ಜೀವಿಗಳ ನಡುವಿನ ಅಂತರ್ ಸಂಬಂಧದ ಅಧ್ಯಯನವೇ ಜೀವಪರಿಸರಶಾಸ್ತ್ರ",
ಸೃಷ್ಟಿಯ ಎಲ್ಲ ಜೀವಿಗಳು ಮತ್ತು ಪರಿಸರದೊಂದಿಗಿನ ಸಂಬಂಧವನ್ನು ಅಧ್ಯಯನ ಮಾಡುವ ಜೀವಶಾಸ್ತ್ರದ
ಗಿಯೇ ಜೀವಪರಿಸರಶಾಸ್ತ್ರ. ಜೀವಪರಿಸರಶಾಸ್ತ್ರ ವಿಚಾರಗಳು ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದ ಕ್ಷೇತ್ರಗಳ ಮೇಲೆ ಪ್ರಭಾವ ನೀಗಿಸುವುದರಿಂದ ಪ್ರಾಣಿ ಜೀವಪರಿಸರಶಾಸ್ತ್ರ (Animal ecology), ಸಸ್ಯ ಜೀವಪರಿಸರಶಾಸ್ತ್ರ(plant ecology) ಇಾಜಿಕ ಅಥವಾ ಮಾನವ ಜೀವಪರಿಸರಶಾಸ್ತ್ರ (Social or Human ecology) ಎಂಬ ಜ್ಞಾನದ AM'ಗಳು ಆವಿಷ್ಕಾರಗೊಂಡಿವೆ. ಮರೆ ಬುಕ್‌ಚಿನ್ (Murray Boockchin) ಎಂಬ ರಾಜಕೀಯ ತತ್ವಜ್ಞಾನಿಯು ಸಾಮಾಜಿಕ ಜೀವ ಪರಿಸರಶಾಸ್ತ್ರದ ಸಂಸ್ಥೆ"ಯನ್ನೆ ಹುಟ್ಟು ಹಾಕಿದ್ದಾನೆ.
ಸಮಾಜಶಾಸ್ತ್ರದ ಒಂದು ಶಾಖೆಯಾಗಿರುವ ಮಾನವ ಜೀವಪರಿಸರಶಾಸ್ತ್ರವು ಮಾನವನ ಜೀವಿಗಳು ತಮ್ಮ ಪರಿಸರದೊಂದಿಗೆ ಹೇಗೆ ನಿರಂತರವಾಗಿ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತವೆ ಎಂಬುದನ್ನು ಅಧ್ಯಯನ ಮಾಡುವುದು. ಪಾರ್ಕ್ ಮತ್ತು ಬರ್ಗೆಸ್, ಮೆಕೆಂಜಿ ಮತ್ತು ಅವರ 'ಚಿಕಾಗೋ ವಿಚಾರ ವೇದಿಕೆ'ಯು (Chicago
Lohool) ಸಾಮಾಜಿಕ ಪರಿಸರಶಾಸ್ತ್ರವನ್ನು ಸಮಾಜಶಾಸ್ತ್ರದ ಒಂದು ಶಾಖೆಯಾಗಿ ಬೆಳೆಯುವಂತೆ ಮಾಡಿತು.
Post a Comment