ಪರಿಸರದ ಪ್ರಕಾರಗಳು

ಪರಿಸರದ ಪ್ರಕಾರಗಳು (Types of Environment):

ಮಾನವನ ಅಸ್ತಿತ್ವ ಮತ್ತು ಅಭಿವೃದ್ಧಿಗೆ ಸಹಾಯಕವಾಗಿರುವ ಒಟ್ಟು ಪರಿಸರವನ್ನು ಭೌತಿಕ ಪರಿಸರ, ಜೈವಿಕ ಪರಿಸರ ಮತ್ತು ಸಾಮಾಜಿಕ ಪರಿಸರ ಎಂಬುದಾಗಿ ವಿಭಾಗಿಸಲಾಗಿದೆ. ಮಾನವನ ಹುಟ್ಟು ಮತ್ತು ಬೆಳವಣಿಗೆಗೆ ಜೈವಿಕ ಮತ್ತು ಭೌತಿಕ ಪರಿಸರಗಳು ಕಾರಣೀಭೂತವಾದರೆ, ಅವನ ಜೀವನದ ಸರ್ವಾಂಗೀಣ ಅಭಿವೃದ್ಧಿಗೆ ಆರ್ಥಿಕ ಮತ್ತು ಸಾಮಾಜಿಕ ಪರಿಸರಗಳು ಆಧಾರವಾಗಿವೆ. ಈ ಕಾರಣದಿಂದಾಗಿಯೇ ಪರಿಸರವು ಮಾನವನ ಶಾರೀರಿಕ ಗುಣಲಕ್ಷಣ ಮತ್ತು ಬುದ್ಧಿಮಟ್ಟದ ಮೇಲೆ ತನ್ನ ಅಗಾಧವಾದ ಪ್ರಭಾವವನ್ನು ಬೀರುತ್ತಲಿರುತ್ತದೆ.

1. ಭೌತಿಕ ಪರಿಸರ (Physical Environment) :

ಭೌತಿಕ ಪರಿಸರವು ನೆಲ-ಜಲ, ಬೆಟ್ಟ-ಗುಡ್ಡ, ಕಾಡು, ಗ್ರಹ, ನಕ್ಷತ್ರ, ಸರೋವರ, ಖನಿಜಸಂಪನ್ಮೂಲ ಮಂತಾದವುಗಳನ್ನು ಒಳಗೊಂಡಿದೆ. ಇದನ್ನು ಭೌಗೋಳಿಕ ಅಥವಾ ನೈಸರ್ಗಿಕ ಪರಿಸರವೆಂದು ಕರೆಯಲಾಗಿದೆ. ಈ ಭೌತಿಕ ಪರಿಸರವು ಮಾನವ ನಿರ್ಮಿತವಲ್ಲದಿದ್ದರೂ ಇದರಲ್ಲಿಯ ಕೆಲವೊಂದು ಅಂಶಗಳು ಮಾನವನ ನಿಯಂತ್ರಣಕ್ಕೆ ಒಳಪಟ್ಟಿವೆ.

ಭೌಗೋಳಿಕ ಪರಿಸರವನ್ನು ಶಿಲಾಗೋಳ (Lithosphere), ಜಲಗೋಳ(Hydrosphere). ವಾಯುಗೋಳ

(Biosphere), ಎಂಬುದಾಗಿ ವಿಂಗಡಿಸಲಾಗಿದೆ. ಮಾನವನ ಜೀವನದ ವಿವಿಧ ಕ್ಷೇತ್ರಗಳ ಮೇಲೆ ಭೌತಿಕ


ಪರಿಸರವು ಪ್ರಭಾವ ಬೀರುತ್ತದೆ. ಅಂದರೆ ಜನಸಂಖ್ಯೆ, ಜನಾಂಗೀಯ ಸಮಸ್ಯೆಗಳು, ಆರ್ಥಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ಆರೋಗ್ಯ, ಸಾಹಿತ್ಯ, ಕಲೆ ಮತ್ತು ಉತ್ಪಾದನೆಯ ಮೇಲೆ ಭೌತಿಕ ಪರಿಸರವು ಪರಿಣಾಮ ಬೀರುವುದು.

2. ಜೈವಿಕ ಪರಿಸರ (Biological Environment) :

ಜೈವಿಕ ಪರಿಸರವು ಜೀವಿಗಳನ್ನು ಒಳಗೊಂಡಿರುವ ಪರಿಸರವಾಗಿದೆ. ಇದು ಕ್ರಿಮಿ ಕೀಟ, ಪಾಣಿ ಮತ್ತು ಮಾನವನ ಸಂತತಿಯ ಉತ್ಪತ್ತಿಗೆ ಪೂರಕ ಹಾಗೂ ಪೋಷಕವಾಗಿದೆ. ಜೀವಿಯು ಹುಟ್ಟಿ, ವಿಕಾಸಗೊಂಡು ಪ್ರಗತಿಯತ್ತ ಸಾಗಲು ಜೈವಿಕ ಪರಿಸರದ ಅಸ್ತಿತ್ವವು ಅತ್ಯವಶ್ಯಕವಾದುದು. ಜೈವಿಕ ಪರಿಸರವು ಕಲುಷಿತವಾದರೆ ಜೀವಿಗಳು ನಾಶವಾಗುತ್ತವೆ.

3. ಸಾಮಾಜಿಕ ಪರಿಸರ : (Social environment)

ಸಾಮಾಜಿಕ ಪರಿಸರವು ಮಾನವ ನಿರ್ಮಿತ ಸಾಮಾಜಿಕ ಪ್ರಪಂಚವಾಗಿದೆ. ಇದು ಮಾನವನ ಬದುಕಿಗೆ ಅತ್ಯಾವಶ್ಯಕವಾದ ಪರಿಸರವಾಗಿದೆ. “ಸಮಾಜರಹಿತ ವ್ಯಕ್ತಿಯು ಕಲ್ಪನಾತೀತ" ಎಂಬುದು ತಜ್ಞರ ಅಭಿಪ್ರಾಯವಾಗಿದೆ. ವ್ಯಕ್ತಿಯು ಸಾಮಾಜಿಕ ಪರಿಸರದೊಂದಿಗೆ ಸುಮಧುರವಾದ ಸಂಬಂಧವನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಸಾಮಾಜಿಕ ಪರಿಸರವು ಜೀವನಾಡಿಗಳನ್ನು ಹೊಂದಿರುವ ಜೀವಂತ ವ್ಯವಸ್ಥೆಯಾಗಿದೆ. ಸಮಾಜದಲ್ಲಿನ

ಜಾತಿ ವ್ಯವಸ್ಥೆ, ಆಚಾರ-ವಿಚಾರಗಳು, ಪದ್ಧತಿಗಳು, ಸಂಪ್ರದಾಯಗಳು, ಧರ್ಮ, ಪರಂಪರೆ, ಲೋಕಾಚಾರಗಳು,

ನೈತಿಕ ನಿಯಮ, ನಂಬುಗೆ, ಸಾಹಿತ್ಯ, ಕಲೆ, ಕಾನೂನು ಮುಂತಾದವುಗಳು ಸಾಮಾಜಿಕ ಪರಿಸರದ ಅಂಗ

(components of Social Enviornment) .

ಸಾಮಾಜಿಕ ಪರಿಸರವು ಅಸಹಾಯಕ ಸ್ಥಿತಿಯಲ್ಲಿರುವ ಮಾನವ ಶಿಶುವಿನ ಪಾಲನೆ-ಪೋಷಣೆಯನ್ನು ಮಾಡುತ್ತದೆ. ವ್ಯಕ್ತಿಯಲ್ಲಿ ಹುದುಗಿರುವ ಸುಪ್ತ ಪ್ರತಿಭೆ-ಸಾಮರ್ಥ್ಯಗಳ ವಿಕಾಸಕ್ಕೆ ಅವಕಾಶವನ್ನು ಒದಗಿಸುತ್ತದೆ. ಸಂಸ್ಕೃತಿ ಮತ್ತು ನಾಗರಿಕತೆಯ ಮುನ್ನಡೆಗೆ ಪೂರಕವಾಗಿರುವ ಸಾಮಾಜಿಕ ಪರಿಸರವು ವ್ಯಕ್ತಿಯು ನಿರ್ವಹಿಸಬೇಕಾದ ಪಾತ್ರದ ಕಲ್ಪನೆಯನ್ನು ಮೂಡಿಸುತ್ತದೆ. ಯಾವುದೇ ರಾಷ್ಟ್ರದ ಅಭಿವೃದ್ಧಿಯು ಆ ರಾಷ್ಟ್ರದ ಸಾಮಾಜಿಕ ಪರಿಸರವನ್ನು ಅವಲಂಬಿಸಿದೆ.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now