ಪರ್ಯಾಯ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆ

ಉಷ್ಣ ವಿದ್ಯುತ್ ಸ್ಥಾವರ (Thermal Power Plant) ಕ್ಕೆ ಬದಲಾಗಿ ಪರ್ಯಾಯ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ

ಜಲವಿದ್ಯುತ್ ಯೋಜನೆಗೆ ಪರ್ಯಾಯವಾಗಿ ದೇಶಾದ್ಯಂತ ಸ್ಥಾಪನೆಗೊಂಡಿದ್ದ ಉಷ್ಣ ವಿದ್ಯುತ್ ಸ್ಥಾವರಗಳು ಇತಿಹಾಸ ಪುಟ ಸೇರುವ ಕಾಲ ಸನ್ನಿಹಿತವಾಗಿದೆ. ಪರ್ಯಾಯ ಇಂಧನ ಮೂಲಗಳಾದ ಸೌರ ವಿದ್ಯುತ್, ಪವನ ವಿದ್ಯುತ್ ಉತ್ಪಾದನೆಗೆ ಕೇಂದ್ರ ಸರ್ಕಾರವು ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ದೇಶದ ಅನೇಕ ಕಡೆ ಉಷ್ಣ ವಿದ್ಯುತ್ ಸ್ಥಾವರಗಳು ಮುಚ್ಚುವ ಸಿದ್ಧತೆ ಮಾಡಿಕೊಂಡಿವೆ. ಈ ಸರದಿಯ ಮೊದಲ ಸಾಲಿನಲ್ಲಿ ರಾಯಚೂರು ಉಷ್ಣ ವಿದ್ಯುತ್ ಸ್ಥಾವರವು (ಆರ್‌ಐಪಿಎಸ್) ಸೇರಿದೆ. ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಯಾವುದೇ ಶಾಖೋತ್ಪನ್ನ (ಉಷ್ಣ) ವಿದ್ಯುತ್ ಸ್ಥಾವರಗಳ ಆಧುನೀಕರಣಕ್ಕೆ ಹೂಡಿಕೆ ಮಾಡದಿರಲು ನಿರ್ಧರಿಸಿದೆ. ಪ್ರಸ್ತುತವಾಗಿ ಅಸ್ತಿತ್ವದಲ್ಲಿರುವ ಶಾಖ ವಿದ್ಯುತ್ ಸ್ಥಾವರಗಳು ಕಾರ್ಯ ನಿರ್ವಹಿಸುವವರೆಗೆ ಕಾರ್ಯ ನಿರ್ವಹಿಸಲಿ ಎಂಬ ನಿರ್ಧಾರಕ್ಕೆ ಬಂದಿದೆ.


ಆರ್‌ಐಪಿಎಸ್ ಘಟಕಗಳನ್ನು ಮುಚ್ಚಲು ಸೂಚನೆ: ಆರ್‌ಟಿಪಿಎಸ್ ನ 8 ಘಟಕಗಳು ಸುಮಾರು 25 ರಿಂದ 32 ವರ್ಷಗಳಷ್ಟು ಹಳೆಯದಾಗಿದ್ದು, ಇವುಗಳನ್ನು ಮುಚ್ಚುವುದಕ್ಕೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಸೂಚನೆ ನೀಡಿದೆ. ರಾಜ್ಯ ಸರ್ಕಾರವು ಈ ಸ್ಥಾವರಗಳ ಆಧುನೀಕರಣಕ್ಕೆ ಮನವಿ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರವೇ ಉಷ್ಣ ವಿದ್ಯುತ್ ಸ್ಥಾವರಗಳ ಬದಲಿಗೆ ಪರ್ಯಾಯ ಇಂಧನಕ್ಕೆ ಆದ್ಯತೆ ನೀಡುತ್ತಿರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳನ್ನು ಆಧುನೀಕರಿಸುವುದನ್ನು ನಿರ್ಲಕ್ಷಿಸಲಾಗಿದೆ.

ಹೈಡೋ ಸ್ಟೋರೇಜ್ ಪ್ಲಾಂಟ್ ಯೋಜನೆ: ಸ್ವಚ್ಛ ಶಕ್ತಿ ಆಧಾರಿತ ನಿರಂತರ ವಿದ್ಯುತ್ ಸರಬರಾಜಿಗಾಗಿ 1000 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ ಹೈಡೋ ಸ್ಟೋರೇಜ್ ಪ್ಲಾಂಟ್ ಯೋಜನೆಯನ್ನು 4,000 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಹೂಡಿಕೆ ಆಧಾರದ ಮೇಲೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದ್ದು, ಬಜೆಟ್‌ನಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿದೆ. ಶರಾವತಿಯನ್ನು ಈಗಾಗಲೇ ಗುರ್ತಿಸಲಾಗಿದೆ. ಮುಂದೆ ನೇತ್ರಾವತಿ, ವರದಾ ನದಿಗಳಲ್ಲಿ ಪಂಪ್ ಹೈಡೋ ಸ್ಟೋರೇಜ್ ಘಟಕಗಳನ್ನು ಆರಂಭಿಸಲು ಉದ್ದೇಶಿಸಿದೆ. ಪ್ರತಿ

ನಿತ್ಯ 10 ಗಂಟೆಗಳ ಕಾಲ 1000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಿ

ಸ್ಟೋರ್ ಮಾಡಿಕೊಳ್ಳಲು ಇವುಗಳ ಅಗತ್ಯವಿದೆ.

ಉಷ್ಣ ವಿದ್ಯುತ್ ಸ್ಥಾವರಕ್ಕೆ ಪರ್ಯಾಯ ವ್ಯವಸ್ಥೆ: ಮುಂದಿನ 5 ವರ್ಷಗಳಲ್ಲಿ

ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳು ಹೆಚ್ಚಾಗುವುದರಿಂದ ಸರಿದೂಗಿಸಲು ಮತ್ತು ಏಕ ಪ್ರಕಾರದ ವಿದ್ಯುತ್ ಸರಬರಾಜಿಗೆ ಪೀಕ್ ಲೋಡ್ ಸಮಯದಲ್ಲಿ ಉತ್ಪಾದನೆಗೆ ನೆರವಾಗುತ್ತದೆ. ಉಷ್ಣ ವಿದ್ಯುತ್ ಸ್ಥಾವರವನ್ನು ಮುಚ್ಚುವ ಉದ್ದೇಶ: ಉಷ್ಣ ವಿದ್ಯುತ್ ಸ್ಥಾವರಗಳು ಮಾಲಿನ್ಯ ಉಂಟು ಮಾಡುವುದರಿಂದ ಅವುಗಳನ್ನು

ಸ್ಥಗಿತಗೊಳಿಸಬೇಕೆಂಬುದು ಪರಿಸರವಾದಿಗಳ ವಾದವಾಗಿದೆ.

* ಕರ್ನಾಟಕ ರಾಜ್ಯಕ್ಕೆ ತನ್ನದೇ ಆದ ಕಲ್ಲಿದ್ದಲು ಗಣಿಗಳಿಲ್ಲ, ಹೊರ ರಾಜ್ಯಗಳು ಅಥವಾ ಹೊರ ದೇಶಗಳಿಂದ ಕಲ್ಲಿದ್ದಲನ್ನು (Black Diamond) ಆಮದು ಮಾಡಿಕೊಳ್ಳಬೇಕು.

• 30 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು ಇಟ್ಟುಕೊಳ್ಳಬೇಕು, ಆದರೆ 3 ದಿನಗಳಿಗಾಗುವಷ್ಟು ದಾಸ್ತಾನು ಮಾತ್ರ ಇರುತ್ತದೆ. * ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಪ್ರತಿದಿನಕ್ಕೆ 30 ಸಾವಿರ

ಟನ್ ಕಲ್ಲಿದ್ದಲು ಬೇಕು. ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪ್ರತಿದಿನಕ್ಕೆ 20 ಸಾವಿರ ಟನ್ ಕಲ್ಲಿದ್ದಲು ಬೇಕು.

ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ: ಕೈಗಾ ಅಣು ಸ್ಥಾವರವು ಕರ್ನಾ

ಕರ್ನಾಟಕದಲ್ಲಿರುವ ಪ್ರಮುಖ ಉಷ್ಣ ವಿದ್ಯುತ್ ಸ್ಥಾವರಗಳು: ರಾಯಚೂರು ಶಾಖ ವಿದ್ಯುತ್ ಸ್ಥಾವರ (RTPS-Raichur Thermal Power Station): ಇದು ಕರ್ನಾಟಕದ ಮೊದಲ ಶಾಖ ವಿದ್ಯುತ್ ಸ್ಥಾವರವಾಗಿದೆ. ಇದನ್ನು 1986ರಲ್ಲಿ ಮೊದಲ ಮತ್ತು 2ನೇ

ಘಟಕಗಳು ಕಾರ್ಯಾರಂಭ ಆರಂಭಿಸಿದವು. ಇದು ಇಂಧನ ಆಧಾರಿತ ಉಷ್ಣ ವಿದ್ಯುತ್ ಸ್ಥಾವರವಾಗಿದೆ. ಈ ಸ್ಥಾವರದಲ್ಲಿ 8 ಘಟಕಗಳಿದ್ದು, ಒಟ್ಟು 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಕೃಷ್ಣಾ ನದಿಯಿಂದ ಸ್ಥಾವರದ ತಂಪುಕಾರಿಗಾಗಿ ನೀರನ್ನು ಒದಗಿಸಲಾಗುತ್ತದೆ. ಇದನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ರವರು ನಿರ್ವಹಿಸುತ್ತಾರೆ. ಕರ್ನಾಟಕ ರಾಜ್ಯಕ್ಕೆ ಅತಿ ಹೆಚ್ಚು ವಿದ್ಯುತ್ ಅನ್ನು ಒದಗಿಸುತ್ತಿರುವ ಸ್ಥಾವರವಾಗಿದೆ. (ಶಕ್ತಿನಗರ-ರಾಯಚೂರು) ಬಳ್ಳಾರಿ ಶಾಖ ವಿದ್ಯುತ್ ಸ್ಥಾವರ (BTPS-Bellary Thermal Power Station): ಇದು ಬಳ್ಳಾರಿ ಜಿಲ್ಲೆಯ ಕುಡತಿನಿ ಗ್ರಾಮದ ಬಳಿಯಿರುವ ಕಲ್ಲಿದ್ದಲು ಆಧಾರಿತ ಶಾಖ ವಿದ್ಯುತ್ ಸ್ಥಾವರವಾಗಿದೆ. 2007ರಲ್ಲಿ ಮೊದಲ ಸ್ಥಾವರವು ಕಾರ್ಯಾರಂಭ ಮಾಡಿತು. ಒಟ್ಟು ಮೂರು ಘಟಕಗಳಿಂದ ಒಟ್ಟು 1700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದನ್ನು ಕರ್ನಾಟಕ ಪವರ್ ಕಾರ್ಪೊರೇಷನ್ ರವರು ನಿರ್ವಹಣೆ ಮಾಡುತ್ತಾರೆ.

ಶಾಖ ವಿದ್ಯುತ್ ಸ್ಥಾವರ (YTPS-Yermarus Thermal Power Station): ಇದು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರವಾಗಿದ್ದು, ರಾಯಚೂರು ಜಿಲ್ಲೆಯ ಯರ್ಮಾಸ್ ಗ್ರಾಮದ ಬಳಿ ಸ್ಥಾಪಿಸಲಾಗಿದೆ. ಕರ್ನಾಟಕ ಪವರ್ ಕಾರ್ಪೊರೇಷನ್‌ನ ಒಡೆತನದ ಸ್ಥಾವರವಾಗಿದ್ದು, 2 ವಿದ್ಯುತ್ ಘಟಕಗಳನ್ನು ಹೊಂದಿದ್ದು, ಒಟ್ಟು ಸಾಮರ್ಥ್ಯವು 1,600 ಮೆಗಾ ವ್ಯಾಟ್ ಆಗಿದೆ. ಉಡುಪಿ ಪವರ್ ಪ್ಲಾಂಟ್:

ಇದು 2008ರಲ್ಲಿ ಉಡುಪಿಯ ಪಡುಬಿದ್ರಿಯಲ್ಲಿ ಸ್ಥಾಪನೆಯಾಗಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರವಾಗಿದೆ. ಅದಾನಿ ಪವರ್‌ನ ಅಂಗಸಂಸ್ಥೆಯಾದ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿರ್ವಹಿಸುತ್ತದೆ. ಪ್ರಸ್ತುತ 1200 ಮೆಗಾ ವ್ಯಾಟ್ ವಿದ್ಯುತ್ ಅನ್ನು ಉತ್ಪಾದನೆ ಮಾಡುತ್ತದೆ. ಕೆಪಿಟಿಸಿಎಲ್ 5 ವಲಯಗಳು: ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ), ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ), ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪನಿ), ಜೆಸ್ಕಾಂ (ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ), ಸೆಸ್ಕಾಂ (ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ).


ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ: ಕೈಗಾ ಅಣು ಸ್ಥಾವರವು ಕರ್ನಾಟಕದ ಏಕೈಕ ಪರಮಾಣು ವಿದ್ಯುತ್ ಸ್ಥಾವರವಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಕೈಗಾದ ಬಳಿ ಕಾಳಿನದಿಯ ಎಡದಂಡೆಯಲ್ಲಿದೆ. ಎನ್‌ಪಿಸಿಐಎಲ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಕೈಗಾವು 220 ಮೆಗಾ ವ್ಯಾಟ್‌ನ ನಾಲ್ಕು ಘಟಕಗಳನ್ನು ಹೊಂದಿದ್ದು, ಇದರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 880 ಮೆಗಾ ವ್ಯಾಟ್ ಆಗಿದೆ.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now