ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಭಿವೃದ್ಧಿಪಡಿಸಿರುವ ನೇರ ನಗದು ವರ್ಗಾವಣೆ ಅಪ್ಲಿಕೇಷನ್ (DBT-Direct Benefit Transfer App) ಅನ್ನು 2021ರ ಜೂನ್ 10 ರಂದು ಬಿಡುಗಡೆ ಮಾಡಿದರು. ಡಿಬಿಟಿ ಅಪ್ಲಿಕೇಷನ್ ಪ್ರಾಜೆಕ್ಟ್ ಡೈರೆಕ್ಟರ್ ಎಂ.ಎನ್. ಶ್ರೀವತ್ಸ ಆಗಿದ್ದಾರೆ. ಡಿಬಿಟಿ ಅಪ್ಲಿಕೇಶನ್ ಎಂಬುದು ರಾಜ್ಯದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳು ಎದುರಿಸುತ್ತಿದ್ದ ಸವಾಲುಗಳ ಸಮಸ್ಯೆ ಪರಿಹಾರಕ್ಕಾಗಿ ರೂಪಿಸಿದ ನೂತನ ತಂತ್ರಜ್ಞಾನ ಆಧಾರಿತ ಕ್ರಮವಾಗಿದೆ. ರಾಜ್ಯ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಕಡಿಮೆ ವರಮಾನ ಹೊಂದಿದ ಜನರ ಕಲ್ಯಾಣಕ್ಕಾಗಿ ರೂಪಿಸಿದ್ದು, ಈ ಯೋಜನೆಗಳ ಪ್ರಯೋಜನಗಳನ್ನು, ನಗದು ನೆರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಈ ಅಪ್ಲಿಕೇಷನ್ ಪ್ರಯೋಜನವಾಗಲಿದೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಸಂಪರ್ಕಿತ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಹಣಕಾಸಿನ ನೆರವನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ಪಡೆಯಲು ಸಹಾಯಕವಾಗಲಿದೆ. ಅನ್ವಯ: ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಕೆವೈಸಿ ದಾಖಲೆಗಳ ನೋಂದಣಿ ಮಾಡಿ ಅಪ್ಲಿಕೇಷನ್‌ನ ಪ್ರಯೋಜನ ಪಡೆಯಬಹುದು. ಈ ಆ್ಯಪ್ ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ದೊಂದಿಗೆ ಸಂಪರ್ಕ ಹೊಂದಿದೆ. ರಾಜ್ಯ ಸರ್ಕಾರದ ಸುಮಾರು 120 ಯೋಜನೆಗಳನ್ನು ಈ ವೇದಿಕೆಗೆ ಒಳಪಡಿಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ 12 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ಫಲಾನುಭವಿಗಳ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ.
ಅನುಕೂಲಗಳು: ಡಿಬಿಟಿ ಮೊಬೈಲ್ ಆ್ಯಪ್‌ನಲ್ಲಿ ಸರ್ಕಾರದಿಂದ ನಿರ್ದಿಷ್ಟ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿರುವ ಹಣದ ಮಾಹಿತಿ, ಪಾವತಿಯ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ, ವಿಶಿಷ್ಟ ವರ್ಗಾವಣಾ ರೆಫರೆನ್ಸ್ ಸಂಖ್ಯೆ ಕೂಡಾ| ಲಭ್ಯವಾಗಲಿದೆ. ಸರ್ಕಾರದ ಯೋಜನೆಗಳಲ್ಲಿನ ಹಣದ ಸೋರಿಕೆಯನ್ನು ತಡೆಗಟ್ಟಲು ಹೆಚ್ಚು ಅನುಕೂಲವಾಗಲಿದ್ದು, ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶ ಹೊಂದಲಾಗಿದೆ. ಫಲಾನುಭವಿಯ ಆಧಾರ್ ಸಂಖ್ಯೆಯ ಮೂಲಕ ಗುರುತಿಸಿ ಫಲಾನುಭವಿಯ ಆಧಾರ್ ವಿಳಾಸವಾಗಿ ಪರಿಗಣಿಸುವುದರಿಂದ ಫಲಾನುಭವಿಗಳಿಗೆ ಯೋಜನೆ ಸಿಗಲಿದೆ. ಈ ನೂತನ ವ್ಯವಸ್ಥೆಯಿಂದ ಯೋಜನೆಯ ಹಣದ ದುರುಪಯೋಗ ಮತ್ತು ಲೋಪದೋಷಗಳು ಕಡಿಮೆಯಾಗಲಿವೆ. ಕೋವಿಡ್-19ರ ಮೊದಲ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಸರ್ಕಾರವು ಘೋಷಿಸಿರುವ ಎಲ್ಲಾ ಪ್ಯಾಕೇಜುಗಳನ್ನೂ ಕೂಡ ಈ ವೇದಿಕೆಯಡಿ ಪಾವತಿ ಮಾಡಲಾಗಿದೆ. 2021-220 ರಾಜ್ಯ ಬಜೆಟ್ ಮ೦ಡನೆಯ ಸಂದರ್ಭದಲ್ಲಿ | ಫಲಾನುಭವಿಗಳ ಆರ್ಥಿಕ ನೆರವು ನೀಡುವ ಎಲ್ಲಾ ಯೋಜನೆಗಳನ್ನು ಡಿಬಿಟಿ ವೇದಿಕೆಯಡಿ ತರಲಾಗುವುದು ಎಂದು ಕರ್ನಾಟಕ ರಾಜ್ಯ ವಿತ್ತ | ಸಚಿವ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಸ್ತಾಪಿಸಿದ್ದರು.
Post a Comment