ಭಾರತದ ಬ್ಯಾಂಕಿಂಗ್ ಸುಧಾರಣಾ ಪಿತಾಮಹ ಎಂ.ನರಸಿಂಹನ್ ನಿಧನ
2021ರ ಏಪ್ರಿಲ್ 20 ರಂದು ಭಾರತದ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣಾ ಪಿತಾಮಹ (Father of Banking Reforms in India) ಖ್ಯಾತಿಯ ಎಂ. ನರಸಿಂಹನ್ (M. Narasimhan) ಅವರು ತೆಲಂಗಾಣದ ಹೈದರಾಬಾದ್‌ನಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರನ್ನು ಆಧುನಿಕ ಭಾರತೀಯ ಬ್ಯಾಂಕಿಂಗ್‌ನ ಶಿಲ್ಪಿ ಎನ್ನಲಾಗಿದೆ.
ಬ್ಯಾಂಕಿಂಗ್ ಸುಧಾರಣಾ ಸಮಿತಿ: ಕೇಂದ್ರ ಸರ್ಕಾರವು 1991 ಮತ್ತು 1998 ರಲ್ಲಿ ನರಸಿಂಹನ್ ಅವರ ನೇತೃತ್ವದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಸುಧಾರಣೆಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಸುಧಾರಣಾ ಸಮಿತಿಯನ್ನು ನೇಮಿಸಿತ್ತು. ಐಸಿಐಸಿಐ, ಹೆಚ್‌ಡಿಎಫ್‌ಸಿ, ಕೋಟಕ್, ಆಕ್ಸಿಸ್‌ನಂತಹ ಹಲವಾರು ಖಾಸಗಿ ಬ್ಯಾಂಕುಗಳು ಭಾರತದಲ್ಲಿ ಈ ಸಮಿತಿಯ ಶಿಫಾರಸ್ಸಿನ ಮೇರೆಗೆ ತಮ್ಮ ಕಾರ್ಯಾಚರಣೆ ಆರಂಭಿಸಿವೆ. ಆರ್‌ಐ 13ನೇ ಗವರ್ನರ್ ಆಗಿ ಸೇವೆ: 1977ರ ಮೇ 2 ರಿಂದ 1977 ನವೆಂಬರ್ 30ರವರೆಗೆ ಆರ್‌ಬಿಐನ 13ನೇ ಗವರ್ನರ್ ಆಗಿ ಎಂ.ನರಸಿಂಹನ್ ಅವರು ಸೇವೆ ಸಲ್ಲಿಸಿದ್ದರು. ಆರ್‌ಬಿಐ ಕೇಡರ್ ಅಧಿಕಾರಿ (ಆರ್ಥಿಕ ಇಲಾಖೆಯ ಸಂಶೋಧನಾ ಅಧಿಕಾರಿ) ಮೊದಲ ಬಾರಿ ಕೇಂದ್ರ ಬ್ಯಾಂಕಿನ ಗವರ್ನರ್ ಆಗಿ ನೇಮಕ ಹೊಂದಿದ ಮೊದಲ ಘಟನೆ ಇದಾಗಿದೆ. ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಅಂತ್ಯಗೊಂಡ ನಂತರ ಅಸ್ತಿತ್ವಕ್ಕೆ ಬಂದ ಜನತಾ ಸರ್ಕಾರವು ನರಸಿಂಹನ್ ಅವರನ್ನು ಆರ್‌ಬಿಐ ಗವರ್ನರ್ ಆಗಿ ನೇಮಿಸಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ: ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವಬ್ಯಾಂಕ್ ಮತ್ತು ಐಎಂಎಫ್‌ನಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಾಗೂ ಎಡಿಬಿಯ ನಿರ್ದೇಶಕರಾಗಿಯೂ ಕೂಡ ಇವರು ಸೇವೆ ಸಲ್ಲಿಸಿದ್ದರು.
ಬ್ಯಾಕಿಂಗ್ ಸುಧಾರಣಾ ಕ್ಷೇತ್ರಕ್ಕೆ ಕೊಡುಗೆಗಳು: ಕೇಂದ್ರ ಸರ್ಕಾರವು 1991ರಲ್ಲಿ ನರಸಿಂಹನ್ ಅವರ ನೇತೃತ್ವದಲ್ಲಿ ಬ್ಯಾಂಕಿಂಗ್ ಸುಧಾರಣಾ ಸಮಿತಿಯನ್ನು ನೇಮಿಸಿದ್ದು, ಮೊದಲ ಬಾರಿ ಸಾರ್ವಜನಿಕ ವಲಯದ ಮೆಗಾ ಬ್ಯಾಂಕುಗಳ ಸೃಷ್ಟಿಗೆ ಇವರು ಶಿಫಾರಸ್ಸು ನೀಡಿದ್ದು, 2020ರ ಏಪ್ರಿಲ್ 1 ರಂದು 10 ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಈ ಶಿಫಾರಸ್ಸಿನ ಆಧಾರದ ಮೇಲೆ ನಡೆದಿದೆ ಎಂಬುದು ಹೆಗ್ಗಳಿಕೆ ವಿಚಾರ, ಬ್ಯಾಂಕಿಂಗ್ ರಚನೆ, ಖಾಸಗಿ ವಲಯದ ಬ್ಯಾಂಕ್‌ಗಳ ಸ್ಥಾಪನೆಗೆ ಅವಕಾಶ, ಗ್ರಾಮೀಣ ಬ್ಯಾಂಕ್‌ಗಳ ಸ್ಥಾಪನೆ, ಸ್ವತ್ತು ಪುನಶ್ವೇತನ ನಿಧಿ ಸೃಷ್ಟಿ, ಸಾರ್ವಜನಿಕ ಬ್ಯಾಂಕುಗಳ ವಲಯದಲ್ಲಿ ಆಧುನೀಕರಣ ಮತ್ತು ತಂತ್ರಜ್ಞಾನ ಉನ್ನತೀಕರಣ, ಬಂಡವಾಳ ಮಾರುಕಟ್ಟೆಯೊಂದಿಗೆ ಸಂಪರ್ಕ ಕಲ್ಪಿಸುವ ಬ್ಯಾಂಕಿಂಗ್ ಸುಧಾರಣೆಗೆ ಹಲವಾರು ಶಿಫಾರಸ್ಸುಗಳನ್ನು ತಮ್ಮ ನೇತೃತ್ವದ ಬ್ಯಾಂಕಿಂಗ್ ಸುಧಾರಣಾ ಸಮಿತಿಯ ಮೂಲಕ ನೀಡಿದ್ದಾರೆ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಪಿತಾಮಹ: 1975 ಅಕ್ಟೋಬರ್ 2ರಂದು ಭಾರತದಲ್ಲಿ ಮೊದಲ ಬಾರಿ ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕಾಗಿ ಪ್ರಥಮ್ ಬ್ಯಾಂಕ್ ಆರಂಭವಾಯಿತು. ಇದಕ್ಕೆ ನರಸಿಂಹನ್ ಅವರ ಆರ್‌ಆರ್‌ಐ ವರದಿ ಪ್ರೇರಣೆ ಆಗಿದೆ. ಅದಕ್ಕಾಗಿ ನರಸಿಂಹನ್ ಅವರನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಪಿತಾಮಹ ಎನ್ನುವರು. 1976ರಲ್ಲಿ ಆರ್‌ಆರ್‌ಬಿ ಕಾಯ್ದೆ ಜಾರಿಗೆ ಬಂದಿತ್ತು. (5ನೇ ಪಂಚವಾರ್ಷಿಕ ಯೋಜನೆ) ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿ (1982 ಮತ್ತು 1983) ಸೇವೆ ಸಲ್ಲಿಸಿದ್ದ ನರಸಿಂಹನ್ ಅವರಿಗೆ 2000ದ ಸಾಲಿನ ಪದ್ಮವಿಭೂಷಣ ಗೌರವಲಭಿಸಿದೆ. ಇವರ ಪ್ರಮುಖ ಪುಸ್ತಕ From Reseve Bank to Finance Ministry & Beyond: From Reminiscences).
ವಿಶ್ವ ಹಸಿವು ದಿನ (World Hunger Day) -ಮೇ 28
2021ರ ಮೇ 28 ರಂದು ವಿಶ್ವ ಹಸಿವು ದಿನವನ್ನು Access Ends Hunger ಎಂಬ ಧೈಯವಾಕ್ಯದಲ್ಲಿ ಆಚರಿಸಲಾಯಿತು. ಹಸಿವು ಮತ್ತು ಬಡತನದ ಸುಸ್ಥಿರ ಪರಿಹಾರಕ್ಕಾಗಿ ಶಿಕ್ಷಣ, ಆರೋಗ್ಯ ಸೇವೆ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. 1977ರಲ್ಲಿ ಸ್ಥಾಪನೆಯಾದ ದಿ ಹಂಗರ್ ಪ್ರಾಜೆಕ್ಟ್ (ಕೇಂದ್ರ ಕಚೇರಿ: ನ್ಯೂಯಾರ್ಕ್) ಎಂಬುದು ಜಗತ್ತಿನ ವಿವಿಧ ದೇಶಗಳ ಹಸಿವು ಸಮಸ್ಯೆಯನ್ನು ನೀಗಿಸಲು ಹೋರಾಟ ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ 2011 ರಿಂದ ವಿಶ್ವ ಹಸಿವು ದಿನವನ್ನು ಆಚರಿಸಲಾಗುತ್ತಿದೆ.
ನೆನಪಿರಂ: 2016-2030ರ ಅವಧಿಯಲ್ಲಿ ಸಾಧಿಸಲು ನಿರ್ಧರಿಸುವ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಹಸಿವು ಮುಕ್ತ ಜಗತ್ತು ಎಂಬುದು 2ನೇ ಗುರಿಯಾಗಿದೆ. 1945ರ ಅಕ್ಟೋಬರ್ 16ರಂದು ಆಹಾರ ಮತ್ತು ಕೃಷಿ ಸಂಘಟನೆಯು ಇಟಲಿಯ ರೋಮ್‌ನಲ್ಲಿ ಆರಂಭವಾದ ಹಿನ್ನೆಲೆಯಲ್ಲಿ
ಅಕ್ಟೋಬರ್ 16 ಅನ್ನು ವಿಶ್ವ ಆಹಾರ ದಿನ ಎಂದು ಆಚರಿಸಲಾಗುತ್ತದೆ.
ವಿಶ್ವ ಆಹಾರ ಸುರಕ್ಷತೆ ದಿನ (World Food Safety Day) - ಜೂನ್ 7
2021ರ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತೆ ದಿನವನ್ನು Safe Food Today for a Healthy Tomorrow ಎಂಬ ಧೈಯವಾಕ್ಯದಲ್ಲಿ ಆಚರಿಸಲಾಯಿತು. 2019ರಲ್ಲಿ ಜಿನೀವಾ ಮತ್ತು ಅಡಿಸ್ ಅಬಾಬದಲ್ಲಿ ನಡೆದ ಆಹಾರ ಸುರಕ್ಷತೆಯ ಭವಿಷ್ಯ ಸಮ್ಮೇಳನದಲ್ಲಿ (ಆಹಾರ ಸುರಕ್ಷತೆ ಮೇಲೆ ನಡೆದ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನ) ಈ ದಿನದ ಆಚರಣೆಯ ಬಗ್ಗೆ ಪ್ರಸ್ತಾಪಿಸಲಾಯಿತು. ಆಹಾರ ಸುರಕ್ಷತೆ ಎಂಬುದು ಆಹಾರದಿಂದ ಹರಡುವ ಅನಾರೋಗ್ಯವನ್ನು ತಡೆಗಟ್ಟು ರೀತಿಯಲ್ಲಿ ಆಹಾರದ ನಿರ್ವಹಣೆ, ತಯಾರಿಕೆ ಮತ್ತು ಸಂಗ್ರಹಣೆಯ ವಿಧಾನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದು.
ನೆನಪಿರಲಿ: ಭಾರತದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವು ಆಹಾರ ಸುರಕ್ಷತೆ ಸೂಚ್ಯಂಕವನ್ನು ಪ್ರಕಟಿಸುತ್ತದೆ. ವಿಶ್ವಸಂಸ್ಥೆಯು 2016-25ರ ದಶಕವನ್ನು UN Decade of Action on Nutrition ಎಂದು ಘೋಷಿಸಿದೆ.
Post a Comment