ಫ್ರಾನ್ಸಿನ ಮಹಾಕ್ರಾಂತಿ ಮತ್ತು ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ

ಅವಳಿ ಕ್ರಾಂತಿಗಳ ಪರಿಣಾಮ: ಫ್ರಾನ್ಸಿನ ಮಹಾಕ್ರಾಂತಿ ಹಾಗೂ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯ ಸಂದರ್ಭಗಳಲ್ಲಿ

ಸಂಭವಿಸಿದ ಭಾರೀ ಪರಿವರ್ತನೆಗಳು ಸಮಾಜಶಾಸ್ತ್ರದ ಉಗಮಕ್ಕೆ ಕಾರಣವಾಗಿವೆ. ಆರ್ಥಿಕ ಬಿಕ್ಕಟ್ಟು ಇತ್ಯಾದಿಗಳು ಚಿಂತಕರ ಮನಸ್ಸನ್ನು ಕದಡಿದವು. ಸಮಾಜದಲ್ಲಿ ಸುವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕು, ರಾಜಕೀಯ ಕ್ರಾಂತಿ ಬುಡಮೇಲು ಮಾಡಿದ ಹಳೆಯ ವ್ಯವಸ್ಥೆಗೆ ಪರ್ಯಾಯವಾಗಿ

3) .ಫ್ರಾನ್ಸಿನ ಮಹಾಕ್ರಾಂತಿ(1789)ಯಲ್ಲಿ ಉಂಟುಮಾಡಿದ ರಾಜಕೀಯ ಅಸ್ಥಿರತೆ, ಸಾಮಾಜಿಕ ಗೊಂದಲ,

ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕು. ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ವ್ಯಕ್ತಿವಾದ, ವೈಜ್ಞಾನಿಕ

ಮನೋಭಾವ, ಮುಂತಾದ ವಿಚಾರಗಳು ಅವರ ಮನಸ್ಸಿನಲ್ಲಿ ಸೇರಿಕೊಂಡವು. ಸಾಮಾಜಿಕ ವ್ಯವಸ್ಥೆಯ

ಕುರಿತಾದ ಈ ಚಿಂತನೆ ಇಂದಿಗೂ ಅಸ್ತಿತ್ವದಲ್ಲಿದ್ದು ಇದು ಸಮಾಜಶಾಸ್ತ್ರಜ್ಞರ ಅಧ್ಯಯನದ ಮುಖ್ಯ

ಕ್ಷೇತ್ರಗಳಲ್ಲೊಂದು ಎನ್ನಬಹುದು. 18ನೇ ಶತಮಾನದಲ್ಲಿ ಸಂಭವಿಸಿದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯು ಇಡೀ ಜಗತ್ತನ್ನೇ ತಲ್ಲಣಗೊಳಿಸಿತು ಮತ್ತು ಇತಿಹಾಸದ ದಿಕ್ಕನ್ನು ಕೂಡ ಬದಲಿಸಿತು. ಕೈಗಾರಿಕಾ ಕ್ರಾಂತಿಯ ಸಾಮಾಜಿಕ ಆರ್ಥಿಕ ವ್ಯವಸ್ಥೆ ಹಾಗೂ ಉತ್ಪಾದನಾ ಪ್ರಕ್ರಿಯೆಯಲ್ಲಿ ಬದಲಾವಣೆಯಾಯಿತು. ಯ ಒಡೆತನಕ್ಕಿಂತಲೂ ಕೈಗಾರಿಕೋದ್ಯಮದ ಮೇಲಿನ ಒಡೆತನ ಆಕರ್ಷಣೀಯವಾಯಿತು, ವಸ್ತುಗಳ ಉತ್ಪಾದನೆಗಾಗಿ ಬೃಹತ್ ಗಾತ್ರದ ಕಾರ್ಖಾನೆಗಳು ಸ್ಥಾಪನೆಯಾದವು. ಜನಸಂಖ್ಯೆಯ ಹೆಚ್ಚಳ, ನಿರುದ್ಯೋಗ, ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುತ್ತಿದ್ದರು.

ಕೈಗಾರೀಕರಣದ ಪರಿಣಾಮದಿಂದ ನಗರೀಕರಣ ಪ್ರಕ್ರಿಯೆ ಆರಂಭವಾಯಿತು. ನಗರಗಳು ಭರದಿಂದ ಬೆಳೆಯತೊಡಗಿದವು. ಶತಮಾನಗಳವರೆಗೆ ಕಾಯ್ದುಕೊಂಡು ಬರಲಾಗಿದ್ದ ಸ್ಥಿರತೆ ಹಾಗೂ ಭದ್ರತೆಗಳು ಈಗ ಕುಸಿದು ಬೀಳುವ ಪರಿಸ್ಥಿತಿ ಕಾಣಿಸತೊಡಗಿತು. ಸಾಮಾಜಿಕ ಸಮಸ್ಯೆಗಳು ಹೆಚ್ಚತೊಡಗಿದವು. ರಾಜಕೀಯ ಸ್ಥಿರತೆಯೂ ಇಲ್ಲವಾಗಿ ರಾಜಪ್ರಭುತ್ವಗಳು ಪತನಗೊಳ್ಳತೊಡಗಿದವು, ಮಹಿಳೆಯರು, ಮಕ್ಕಳು ಮತ್ತು ಕಾರ್ಮಿಕರ ಶೋಷಣೆಯು ಹೆಚ್ಚಾಗಿತ್ತು.

b) ಕೈಗಾರಿಕಾ ಕ್ರಾಂತಿಯು ಮಾನವ ಚಿಂತನೆಯನ್ನು ಗಂಭೀರವಾಗಿ ಪ್ರಭಾವಿಗೊಳಿಸಿತು: ಆಗಸ್ಟ್ ಕಾಮ್ಸ್ ಹರ್ಬಟ್ ಸ್ಪೆನ್ಸರ್, ಎಮಿಲಿ ಡರ್ಖೀಮ್, ಮ್ಯಾಕ್ಸ್ ವೇಬರ್, ಕಾರ್ಲ್ ಮಾರ್ಕ್ಸ್ ಮುಂತಾದವರು ಕೈಗಾರಿಕಾ ಕ್ರಾಂತಿಯು ತಂದಂತಹ ಹಲವಾರು ಸಮಸ್ಯೆಗಳನ್ನು ಆಳವಾಗಿ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಸಾಮಾಜಿಕ ವಿದ್ಯಮಾನಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ಒಂದು ಸ್ವತಂತ್ರ ಹಾಗೂ ಪ್ರತ್ಯೇಕ ಸಮಾಜ ವಿಜ್ಞಾನದ ಸ್ಥಾಪನೆಯ ಅವಶ್ಯಕತೆಯಿದೆ ಎಂದೂ ಅವರು ವಾದಿಸಿದರು. ಆಗಸ್ಟ್ ಕಾಮ್ಸ್‌ರವರು ತಾನೇ ಸ್ವತಃ ಅಂತಹ ವಿಜ್ಞಾನವೊಂದನ್ನು ಹುಟ್ಟುಹಾಕಿ ಅದನ್ನು "ಸೋಸಿಯಾಲಜಿ" ಎಂದು ಹೆಸರಿಸಿದರು.

ಭೌತವಿಜ್ಞಾನಿಗಳು ಮತ್ತು ಇತರೆ ಸಮಾಜ ವಿಜ್ಞಾನಿಗಳ ಬೆಳವಣಿಗೆಯಿಂದ ದೊರೆತ ಸ್ಫೂರ್ತಿ

ಜ್ಞಾನೋದಯದ ಯುಗವು ಸಮಾಜದಲ್ಲಿ ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಭಾರೀ ಗೌರವವನ್ನು ಮೂಡಿಸಿತು.

ಪಾಶ್ಚಿಮಾತ್ಯ ಸಮಾಜದಲ್ಲಿ ಹಲವಾರು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ವಿಜ್ಞಾನ ವಿಷಯಗಳು

ಬೋಧಿಸಲ್ಪಡತೊಡಗಿದವು. ತಾಂತ್ರಿಕ ವಸ್ತುಗಳಾದ ಯಂತ್ರ-ತಂತ್ರಗಳು, ಮೋಟಾರು-ಕಾರುಗಳು, ಹಬೆಯ

ಯಂತ್ರಗಳು, ಕೋವಿ-ಫಿರಂಗಿಗಳು, ಪೆನ್, ಪೇಪರ್, ಮುದ್ರಣ ಯಂತ್ರಗಳು ಇತ್ಯಾದಿಗಳು ಎಲ್ಲೆಡೆ ಬಳಕೆಗೆ ಬಂದವು, ಇವೆಲ್ಲದರ ಒಟ್ಟು ಪರಿಣಾಮವೆಂಬಂತೆ ವಿಜ್ಞಾನಕ್ಕೆ ಮನ್ನಣೆ ಲಭಿಸತೊಡಗಿತು. ನೈಸರ್ಗಿಕ ಅಥವಾ ಭೌತವಿಜ್ಞಾನಗಳ ಕ್ಷೇತ್ರದಲ್ಲಿ ಸಾಧ್ಯವಾದ ಯಶಸ್ಸು ಸಾಮಾಜಿಕ ವಿಜ್ಞಾನಗಳು ಸಾಧ್ಯವಾಗಲಾರದೇಕೆ? ಎಂಬ ಸಹಜವಾದ ಪ್ರಶ್ನೆಯೊಂದು ಈಗ ಮೂಡಿತು. ಈ ಪ್ರಶ್ನೆಗೆ ಉತ್ತರವಾಗಿ ಆಗಸ್ಟ್ ಕಾಮ್, ಎಮಿಲಿ ಡರ್ಖೀಮ್, ಮ್ಯಾಕ್ಸ್ ವೇಬರ್ ಮುಂತಾದ ಚಿಂತಕರು ಸಮಾಜಶಾಸ್ತ್ರದಲ್ಲಿಯೂ ಕೂಡ ವೈಜ್ಞಾನಿಕ ವಿಧಾನಗಳು ಬಳಕೆ ಮಾಡುವುದು ಸಾಧ್ಯವಿದೆ ಎಂದು ಸಾಧಿಸಿ ತೋರಿಸಿದರು.

ವಿಭಿನ್ನ ಸಮಾಜಗಳು ಮತ್ತು ಸಂಸ್ಕೃತಿಗಳ ಅಧ್ಯಯನದ ಸ್ಪೂರ್ತಿ

ಯುರೋಪಿನ ಸಾಮ್ರಾಜ್ಯ ಶಾಹಿ ಜಗತ್ತಿನ ಮೂಲೆ-ಮೂಲೆಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿ ನಾನಾ ತೆರನಾದ ಸಮಾಜಗಳ ಹಾಗೂ ವೈವಿಧ್ಯಮಯವಾದ ಸಂಸ್ಕೃತಿಗಳ ಪರಿಚಯವಾಯಿತು. ಯೂರೋಪಿನ ಜನ ಜೀವನದ ರೀತಿ-ನೀತಿಗಳಿಗಿಂತಲೂ ತೀರಾ ಭಿನ್ನವಾಗಿದ್ದ ಈ ಸಂಸ್ಕೃತಿಗಳನ್ನು ಅಧ್ಯಯನ ಮಾಡುವುದು ಸಮಾಜ ಚಿಂತಕರುಗಳಿಗೆ ಒಂದು ಬೌದ್ಧಿಕ ಸವಾಲಾಗಿತ್ತು. ಸಮಾಜ-ಸಮಾಜಗಳ ನಡುವೆ ಇಷ್ಟೊಂದು ವೈಪರಿತ್ಯಗಳು ಹಾಗೂ ವೈರುದ್ಧಗಳಿರಲು ಕಾರಣವೇನು? ಸಮಾಜಗಳ ಪ್ರಗತಿ ಒಂದೇ ತೆರನಾಗಿಲ್ಲವೇಕೆ? ಸಮಾಜಗಳ ನಡುವಿನ ಈ ರೀತಿಯ ಹೋಲಿಕೆಯಿಂದ ಯುರೋಪಿಯನ್ನರು ಕಲಿಯಬಹುದಾದ ಪಾಠಗಳೇನು? ಈ ಪ್ರಶ್ನೆಗಳಿಗೆ ನಿಖರವಾದ ಸಮಾಧಾನಕರವಾದ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಹೀಗೆ ಸಮಾಜಶಾಸ್ತ್ರವು ಒಂದು ಸ್ವತಂತ್ರವಾದ ಹಾಗೂ ವಿಶಿಷ್ಟವಾದ ಅಧ್ಯಯನಶಾಸ್ತ್ರವಾಗಿ ಮೂಡಿ ಬಂದಿತು.

1.3 ಸಮಾಜಶಾಸ್ತ್ರದ ಸ್ವರೂಪ - ಲಕ್ಷಣಗಳು: (Nature of Sociology) ಸಮಾಜ ವಿಜ್ಞಾನಗಳ ಸಮೂಹದಲ್ಲಿ ಸಮಾಜಶಾಸ್ತ್ರಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ತನ್ನ ಕೆಲವು ಗುಣಗಳಿಂದಾಗಿ ಅದು ಇತರ ಸಮಾಜ ವಿಜ್ಞಾನಗಳಿಂದ ಭಿನ್ನವಾಗಿದೆ. ಸಮಾಜಶಾಸ್ತ್ರದ ಕೆಲವು ಮುಖ್ಯ ಸ್ವರೂಪ ಲಕ್ಷಣಗಳ ಬಗ್ಗೆ ರಾಬರ್ಟ್ ಬೈರ್‌ಸ್ಟೆಡ್ ಪ್ರಸ್ತಾಪಿಸಿದ್ದು ಅವು ಹೀಗಿವೆ.

1. ಸಮಾಜಶಾಸ್ತ್ರವು ಒಂದು ಪ್ರತ್ಯೇಕವಾದ ಹಾಗೂ ಸ್ವತಂತ್ರವಾದ ಅಧ್ಯಯನ ಶಾಸ್ತ್ರವಾಗಿದೆ: ಸಮಾಜಶಾಸ್ತ್ರವು ಒಂದು ಪ್ರತ್ಯೇಕವಾದ ಮತ್ತು ಸ್ವತಂತ್ರವಾದ ಅಧ್ಯಯನ ಶಾಸ್ತ್ರವೆಂದು ಪರಿಗಣಿಸಲ್ಪಟ್ಟಿದೆ. ಆದನ್ನು ಇತಿಹಾಸ, ಸಾಮಾಜಿಕ ತತ್ವಜ್ಞಾನ ಅಥವಾ ರಾಜಕೀಯ ತತ್ವಜ್ಞಾನ ಇಂತಹ ಯಾವುದೇ ಅಧ್ಯಯನ ಶಾಸಗಳ ಶಾಖೆ ಎಂಬುದಾಗಿ ಪರಿಗಣಿಸುತ್ತಿಲ್ಲ.

2. ಸಮಾಜಶಾಸ್ತ್ರವು ಒಂದು ಸಮಾಜ ವಿಜ್ಞಾನವಾಗಿದೆಯೇ ಹೊರತು ಭೌತವಿಜ್ಞಾನವಾಗಿಲ್ಲ: ಸಮಾಜಶಾಸ್ತ್ರವು ಸಮಾಜ ವಿಜ್ಞಾನಗಳ ಸಮೂಹಕ್ಕೆ ಸೇರಿದುದಾಗಿದೆಯೇ ಹೊರತು ಭೌತ ವಿಜ್ಞಾನಗಳ ಸಮೂಹಕ್ಕೆ ಸೇರಿಲ್ಲ. ಸಮಾಜ ವಿಜ್ಞಾನಗಳಲ್ಲಿ ಒಂದಾದ ಸಮಾಜ ಶಾಸ್ತ್ರವು ಮಾನವ, ಅವನ ಸಮಾಜ, ಸಾಮಾಜಿಕ ಚಟುವಟಿಕೆಗಳು ಮತ್ತು ಸಾಮಾಜಿಕ ಜೀವನವನ್ನು ಅಧ್ಯಯನ ಮಾಡುತ್ತದೆ. ಹಾಗೆಯೇ ಸಮಾಜಶಾಸ್ತ್ರವು ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮನಃಶಾಸ್ತ್ರ, ಮಾನವ ಶಾಸ್ತ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ.

ಸಮಾಜಶಾಸ್ತ್ರವು ಒಂದು ನಿಶ್ಚಯಾತ್ಮಕ ಶಾಸ್ತ್ರವಾಗಿದೆಯೇ ವಿನಃ ಗುಣ ನಿರ್ದೇಶಕ ಶಾಸ್ತ್ರದಲ್ಲ ಸಮಾಜಶಾಸ್ತ್ರವು ತನ್ನ ಅಧ್ಯಯನದಲ್ಲಿ ವಸ್ತುವು “ಹೇಗಿದೆಯೋ ಹಾಗೆ” (3s it is) ಎಂದು ಅಧ್ಯಯನ ಮಾಡುವುದೇ ಹೊರತು ವಸ್ತುವು “ಹೇಗಿರಬೇಕು” (as it ought to be) ಎನ್ನುವ ದೃಷ್ಠಿಯಿಂದ ಆಧ್ಯಯನ ಮಾಡುವುದಿಲ್ಲ. ಅದು ಮೌಲ್ಯಗಳ ಬಗ್ಗೆ ತಟಸ್ಥ ವಹಿಸುವುದು, ಅದರ ದೃಷ್ಠಿಕೋನ ನೈತಿಕವೂ ಅಲ್ಲ ಅನೈತಿಕವೂ ಅಲ್ಲ. ಆದರೆ ನೀತಿ ನಿರಪೇಕ್ಷವಾದುದು (not moral or immoral but amoral) ಅಂದರೆ ನೈತಿಕ ವಿಷಯಗಳಲ್ಲಿ ಸಮಾಜಶಾಸ್ತ್ರವು ತಟಸ್ಥ ಧೋರಣೆಯನ್ನು ವಹಿಸುವುದು.

4. ಸಮಾಜಶಾಸ್ತ್ರವು ಒಂದು 'ಶುದ್ಧ' ಶಾಸ್ತ್ರವೇ ಹೊರತು ಪ್ರಾಯೋಗಿಕ ವಿಜ್ಞಾನವಲ್ಲ. ವಾಗಿರುವ ಸಮಾಜಶಾಸ್ತ್ರದ ಉದ್ದೇಶವು ಜ್ಞಾನ ಸಂಪಾದನೆಯೇ ಹೊರತು “ಪ್ರಾಯೋಗಿಕ ಒಂದು ಶುದ್ಧಶಾಸ್ತ್ರ ಶಾಸ್ತ್ರ"ಗಳಂತೆ ಸಂಪಾದಿತ ಜ್ಞಾನವನ್ನು ಮಾನವನ ಅನುಕೂಲತೆಗಾಗಿ ಉಪಯೋಗಿಸುವುದಲ್ಲ ಆದಾಗ್ಯೂ ಸಮಾಜಶಾಸ್ತ್ರ ಒದಗಿಸುವ ಜ್ಞಾನವು ಆಡಳಿತಗಾರರು, ಶಾಸಕರು, ರಾಜನೀತಿ ನಿಮಣರು, ಆಧ್ಯಪಕರು ಕಾರ್ಖಾನೆಗಳ ಕಾರ್ಮಿಕ ಕಲ್ಯಾಧಿಕಾರಿಗಳು, ಮೇಲ್ವಿಚಾರಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾಮಾನ್ಯ ಪ್ರಜೆಗಳು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

5. ಸಮಾಜಶಾಸ್ತ್ರವು ಅಮೂರ್ತ ಸ್ವರೂಪದ ವಿಜ್ಞಾನವಾಗಿದೆಯೇ ಹೊರತು ಮೂರ್ತ ಸ್ವರೂಪದಲ್ಲ: ಸಮಾಜಶಾಸ್ತ್ರವು ಕೆಲವು ನಿರ್ದಿಷ್ಟ ಮಾನವ ಘಟನೆಗಳ ಮೂರ್ತ ರೂಪದ ಪ್ರಕಟಣೆಯಲ್ಲಿ ಆಸಕ್ತವಾಗಿಲ್ಲ. ಆದರೆ ಸಾಮಾನ್ಯ ಸ್ವರೂಪದ ಮಾನವ ಘಟನೆಗಳ “ರೂಪ”(Form) ಹಾಗೂ “ನಮೂನೆ”(Patterns)ಗಳಲ್ಲಿ ಮಾತ್ರ ಆಸಕ್ತವಾಗಿದೆ. ಉದಾ: ಸಮಾಜಶಾಸ್ತ್ರವು ಇತಿಹಾಸದಂತೆ ಯಾವುದೇ ನಿಶ್ಚಿತವಾದ ಯುದ್ಧ ಅಥವಾ ಕ್ರಾಂತಿಯಲ್ಲಿ ಆಸಕ್ತವಾಗಿಲ್ಲ. ಆದರೆ ಅದು ಯುದ್ಧ ಹಾಗೂ ಕ್ರಾಂತಿಗಳನ್ನು ಸಾಮಾಜಿಕ ವಿದ್ಯಮಾನಗಳೆಂದು ಅರ್ಥಾತ್ ವಿಭಿನ್ನ ರೀತಿಯ ಸಾಮಾಜಿಕ ಸಂಘರ್ಷಗಳೆಂದು ಪರಿಭಾವಿಸಿ ಅವುಗಳ ಸಾಮಾನ್ಯ ಸ್ವರೂಪ ಹಾಗೂ ಲಕ್ಷಣಗಳನ್ನು ಅಧ್ಯಯನ ಮಾಡುತ್ತದೆ.

6. ಸಮಾಜಶಾಸ್ತ್ರವು ಸಾಮಾನೀಕರಣ ಮಾಡುವ ವಿಜ್ಞಾನವಾಗಿದೆಯೇ

ವಿಜ್ಞಾನವಲ್ಲ.

ಹೊರತು ವೈಯಕ್ತಿಕರಣ ಮಾಡುವ

ಸಮಾಜಶಾಸ್ತ್ರವು ಸಮಾಜದಲ್ಲಿ ಸಂಭವಿಸುವ ಪ್ರತಿಯೊಂದು ಘಟನೆಯನ್ನೂ ಅಧ್ಯಯನ ಮಾಡುವುದಿಲ್ಲ. ಅದು ಸಾಧ್ಯವಾಗದ ಮಾತು, ಬದಲಾಗಿ ಅದು ಕೆಲವು ಆಯ್ದ ಘಟನೆಗಳ ಆಧಾರದ ಮೇಲೆ ಕೆಲವು ಸಾಮಾನ್ಯ ನಿಯಮಗಳನ್ನು ಹಾಗೂ ನಿರ್ಣಯಗಳನ್ನು ಕೈಗೊಳ್ಳಲು ಪ್ರಯತ್ನಿಸುವುದು.ಉದಾ:

ಅ) ಅವಿಭಕ್ತ ಕುಟುಂಬಗಳು ಕೇಂದ್ರ ಕುಟುಂಬಗಳಿಗಿಂತಲೂ ಹೆಚ್ಚು ಸುಭದ್ರವಾದವು ಹಾಗೂ ಪ್ರತಿಗಾಮಿ ಸ್ವರೂಪದವು ಆಗಿವೆ.

ಆ) ಸಾಮಾಜಿಕ ಪರಿವರ್ತನೆಗಳು ಗ್ರಾಮೀಣ ಹಾಗೂ ಆದಿವಾಸಿ ಸಮುದಾಯಗಳಿಗಿಂತಲೂ ನಗರ ಸಮುದಾಯಗಳಲ್ಲಿ ಹೆಚ್ಚು ತ್ವರಿತವಾಗಿ ಸಂಭವಿಸುತ್ತವೆ ಇತ್ಯಾದಿ.

7. ಸಮಾಜಶಾಸ್ತ್ರವು ಒಂದು ಸಾಮಾನ್ಯ ಸಮಾಜ ವಿಜ್ಞಾನವಾಗಿದೆಯೇ ಹೊರತು ವಿಶೇಷ ವಿಜ್ಞಾನವಾಗಿಲ್ಲ

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now