ನಿಧನರಾದ ಪ್ರಮುಖ ವ್ಯಕ್ತಿಗಳು

2021ರ ಏಪ್ರಿಲ್ 21 ರಂದು ಆಧ್ಯಾತ್ಮ ಮತ್ತು ವೇದಾಂತ ವಿಷಯಗಳ ಬಗ್ಗೆ ಆಳವಾದ ಒಳನೋಟವನ್ನು ಹೊಂದಿದ್ದು, ಸಮುದಾಯದ ಸೇವೆ ಮತ್ತು ಸಾಮಾಜಿಕ ಸಬಲೀಕರಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಮೌಲಾನಾ | ವಹೀದುದ್ದೀನ್ ಖಾನ್ ರವರು ನವದೆಹಲಿಯಲ್ಲಿ ನಿಧನರಾಗಿದ್ದಾರೆ.

, 2021ರ ಏಪ್ರಿಲ್ 17ರಂದು ತಮಿಳು ಚಿತ್ರನಟ ವಿವೇಕ್ (ವಿವೇಕಾನಂದನ್) ರವರು ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ 2009ರಲ್ಲಿ ಪದ್ಮಶ್ರೀ ಗೌರವವನ್ನು ನೀಡಿತ್ತು.

• 2021ರ ಏಪ್ರಿಲ್ 21 ರಂದು ಬಂಗಾಳಿ ಮತ್ತು ಭಾರತೀಯ ಸಾಹಿತ್ಯ ವಲಯಕ್ಕೆ ಹೆಚ್ಚು ಕೊಡುಗೆ ನೀಡಿದ್ದ ಶಂಖಘೋಷ್ ಅವರು ಕೊಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಇವರಿಗೆ 2016ರಲ್ಲಿ ಜ್ಞಾನಪೀಠ ಪ್ರಶಸ್ತಿ, 1977ರಲ್ಲಿ

ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2011ರಲ್ಲಿ ಪದ್ಮಭೂಷಣ ಗೌರವ ಲಭಿಸಿದ್ದವು. • 2021ರ ಏಪ್ರಿಲ್ 25 ರಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ (ಖಯ್ಯಾಲ್ ಶೈಲಿ) ಉತ್ತಮ ಸೇವೆ ಸಲ್ಲಿಸಿದ್ದ ಪಂಡಿತ್‌ ರಾಜನ್‌ ಮಿಶ್ರಾ ಅವರು ಕೋವಿಡ್-19ರಿಂದ ನಿಧನರಾಗಿದ್ದಾರೆ. ಇವರಿಗೆ 2007 ರಲ್ಲಿ ಪದ್ಮಭೂಷಣ ಗೌರವ ಮತ್ತು 2012ರಲ್ಲಿ ರಾಷ್ಟ್ರೀಯ ತಾನ್‌ಸೇನ್ ಸಮ್ಮಾನ್ ಪ್ರಶಸ್ತಿಗಳು ಲಭಿಸಿದ್ದವು.

* 2021ರ ಏಪ್ರಿಲ್ 27 ರಂದು ಗುಜರಾತಿ, ಕವಿ, ಪದ್ಮಶ್ರೀ ಪುರಸ್ಕೃತ ದದುದಾನ್ ದಾದ್ವಿ ಅವರು ನಿಧನರಾಗಿದ್ದಾರೆ. ಇವರು ಜನಪದ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದರು ಮತ್ತು 2021ರ ಪದ್ಮಶ್ರೀ ಪುರಸ್ಕೃತರಾಗಿದ್ದರು.

* 2021ರ ಏಪ್ರಿಲ್ 27 ರಂದು ಖ್ಯಾತ ಶಿಕ್ಷಣ ತಜ್ಞ ಜನಪ್ರಿಯ ಅಂಕಣಕಾರ, ಇಂಗ್ಲೀಷ್ ಮತ್ತು ಒರಿಯಾ ಸಾಹಿತ್ಯದಲ್ಲಿ ಸಮೃದ್ಧ ಬರಹಗಾರರಾಗಿದ್ದ ಮನೋಜ್ ದಾಸ್ ರವರು ನಿಧನರಾಗಿದ್ದಾರೆ. ಇವರು ಶ್ರೀ ಅರಬಿಂದೋ ಅವರ ತತ್ವಶಾಸ್ತ್ರದ ಪ್ರಮುಖ ಪ್ರತಿಪಾದಕರಾಗಿದ್ದಾರೆ. ಇವರಿಗೆ 2000ದಲ್ಲಿ ಸರಸ್ವತಿ ಸಮ್ಮಾನ್, 2001ರಲ್ಲಿ ಪದ್ಮಶ್ರೀ ಮತ್ತು 2020ರಲ್ಲಿ ಪದ್ಮಭೂಷಣ ಗೌರವ ಲಭಿಸಿದ್ದವು.

* 2021ರ ಏಪ್ರಿಲ್ 30 ರಂದು ರೋಹಿತ್‌ ಸರ್ದಾನಾ ಅವರು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಿಧನರಾಗಿದ್ದಾರೆ. ನಿರೂಪಕ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿದ್ದ ರೋಹಿತ್ ಅವರು ಜೀ ನ್ಯೂಸ್ ವಾಹಿನಿಯಿಂದ 2017 ರಲ್ಲಿ ಆಜ್‌ಕ್ ವಾಹಿನಿಗೆ ಸೇರಿದ್ದ ಸಂಪಾದಕ

ಮತ್ತು ಪತ್ರಿಕೋದ್ಯಮಿ ವ್ಯಕ್ತಿಯಾಗಿದ್ದರು. • 2021ರ ಏಪ್ರಿಲ್ 30 ರಂದು ಅತ್ಯುತ್ತಮ ವಕೀಲ ಬುದ್ಧಿಜೀವಿ, ಭಾರತದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಸೋಲಿ ಸೊರಾಬ್ಬ ರವರು ದೆಹಲಿಯಲ್ಲಿ ನಿಧನರಾಗಿದ್ದಾರೆ.

2021ರ ಮೇ 3 ರಂದು ಹೆಸರಾಂತ ವಿದ್ವಾಂಸ ಮತ್ತು ಅನುಕರಣೀಯ ಆಡಳಿತಗಾರ, ಜಮ್ಮು-ಕಾಶ್ಮೀರದ 5ನೇ ಮತ್ತು ಮಾಜಿ ರಾಜ್ಯಪಾಲ ಜಗಮೋಹನ್ ಮಲ್ಲೋತ್ರ ರವರು ದೆಹಲಿಯಲ್ಲಿ ನಿಧನರಾಗಿದ್ದಾರೆ. ಇವರಿಗೆ 2016ರಲ್ಲಿ ಪದ್ಮವಿಭೂಷಣ, 1977ರಲ್ಲಿ ಪದ್ಮಭೂಷಣ ಮತ್ತು 1971ರಲ್ಲಿ ಪದ್ಮಶ್ರೀ ಪ್ರಶಸ್ತಿ ಗೌರವ ಲಭಿಸಿದ್ದವು. • 2021ರ ಮೇ 5 ರಂದು ಉತ್ತರ ಪ್ರದೇಶದ ಬಿಜೆಪಿ ಪಕ್ಷದ ನಾಯಕರಾಗಿದ್ದ

ಭವಾನಿ ಸಿಂಗ್ ಅವರು ಕೋವಿಡ್-19 ರಿಂದ ನಿಧನರಾಗಿದ್ದಾರೆ.

* 2021ರ ಮೇ 5 ರಂದು ಕೇರಳ ರಾಜ್ಯದ ಮಲಂಕರ ಮಾರ್ತೋಮ ಸಿರಿಯನ್ ಚರ್ಚ್ ಸದಸ್ಯರಾದ ರೆವರೆಂಡ್ ಡಾ. ಫಿಮೋಸ್ ಮರ್ ಕಿಸೋಸ್ಟಂ ಮರ್‌ ತೋಮ ಫಲಿಯಾ ಮೆಟ್ರೋ ಪಾಲಿಟನ್ ಅವರು 103ನೇ ವಯಸ್ಸಿನಲ್ಲಿ ನಿಧನರಾದರು. ಇವರಿಗೆ 2018ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತು.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now