2020ರ ಮೇನಲ್ಲಿ ಕರ್ನಾಟಕ ರಾಜ್ಯದ
ಪದವಿಪೂರ್ವ ಶಿಕ್ಷಣ ಇಲಾಖೆಯು (DPUE Department of Pre University Education) ಪರೀಕ್ಷಾ ಅಭ್ಯಾಸ ಕಾರ್ಯಕ್ರಮವು ಕೇಂದ್ರ ಸರ್ಕಾರದ ದೀಕ್ಷಾ ಅಪ್ಲಿಕೇಶನ್ (Diksha App) ನಲ್ಲಿ ಲಭ್ಯವಾಗುವ ಸೌಲಭ್ಯವನ್ನು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬಿಡುಗಡೆ ಮಾಡಿದರು. ಪ್ರತಿಯೊಂದು ವಿಷಯಕ್ಕೆ ಇ-ಪಠ್ಯಪುಸ್ತಕ, ಬಹು ಆಯ್ಕೆಯ ಪ್ರಶ್ನೆಗಳು, ವಿವರಣಾತ್ಮಕ ಪಠ್ಯಾಂಶಗಳು, ಕಲಿಕಾ ಸಂಪನ್ಮೂಲಗಳು, ಅಭ್ಯಾಸ ಪ್ರಶ್ನೆಗಳು, ಪ್ರಶ್ನೆಕೋಶ, ಶಿಕ್ಷಕರಿಗೆ ಪಾಠ ಯೋಜನೆ ಸಂಪನ್ಮೂಲಗಳನ್ನು ಈ ಪೋರ್ಟಲ್‌ನಲ್ಲಿ ಅಳವಡಿಸಲಾಗಿದೆ.
DIKSHA ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ರೂಪಿಸಿದ
ಡಿಎಸ್‌ಇಆರ್‌ಟಿಯು (Department of State Educational Research and Training) 10ನೇ ತರಗತಿಯ ಮಕ್ಕಳ ಪರೀಕ್ಷಾ ಸಿದ್ಧತೆಗೆ ಫೋಕಸ್ ಎಂಬ ಮುನರ್ ಮನನ ಕಾರ್ಯಕ್ರಮವನ್ನು ರೂಪಿಸಿದ್ದು ಇದು ಕೂಡಾ ದೀಕ್ಷಾ ಪೋರ್ಟಲ್‌ನಲ್ಲಿ ಲಭ್ಯವಾಗಲಿದೆ. Diksha: Digital Infrastructure for School Education.
ಶಿಕ್ಷಣ
ಸಚಿವಾಲಯದ ಅಧೀನದಲ್ಲಿ
ಕೇಂದ್ರ ಸರ್ಕಾರದ ಕಾರ್ಯನಿರ್ವಹಿಸುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ತರಬೇತಿ bo (NCERT-National Council of Educational Research and Training) ವತಿಯಿಂದ ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಡಿಜಿಟಲ್ ಮಾಧ್ಯಮದ ರೂಪದಲ್ಲಿ ಶೈಕ್ಷಣಿಕ ಸಂಪನ್ಮೂಲವನ್ನು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೂ ಲಭ್ಯವಾಗುವಂತೆ ಅಭಿವೃದ್ಧಿಪಡಿಸಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ರಾಷ್ಟ್ರಾದ್ಯಂತ ಎಲ್ಲಾ ಶಿಕ್ಷಕರಿಗೂ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನ ಆಧಾರಿತ ನೆರವು ಕಾರ್ಯಕ್ರಮ.
ನೆನಪಿರಲಿ: ಭಾರತ ಸರ್ಕಾರವು 1987ರಲ್ಲಿ ಕಪ್ಪು ಹಲಗೆ ಕಾರ್ಯಾಚರಣೆ (Operation Blackboard) ಅನ್ನು ಜಾರಿಗೆ ತಂದಿದ್ದು ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ ಅಗತ್ಯ ಮೂಲಸೌಕರ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು.
ಆಪರೇಶನ್ ಡಿಜಿಟಲ್' ಬೋರ್ಡ್ (ODB-Operation Digital Board) ಎಂಬುದು 2019ರಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಇಂದಿನ ಕೇಂದ್ರ ಶಿಕ್ಷಣ ಸಚಿವಾಲಯ) ವತಿಯಿಂದ ದೇಶದಲ್ಲಿ ಗುಣಮಟ್ಟ ಶಿಕ್ಷಣದ ಒದಗಿಸುವಿಕೆಗೆ ಶೈಕ್ಷಣಿಕ ತಂತ್ರಜ್ಞಾನವನ್ನು ಅಳವಡಿಸಲು ಜಾರಿಗೆ ತಂದಿತ್ತು. 9ನೇ ತರಗತಿಯ ನಂತರದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಡಿಜಿಟಲ್ ಬೋರ್ಡ್ ಯೋಜನೆಯನ್ನು ಜಾರಿಗೆ ತರುವ ಉದ್ದೇಶವನ್ನು ಹೊಂದಿತ್ತು. (ಡಿಜಿಟಲ್ ತರಗತಿ ಕೋಣೆಯ ಸೃಷ್ಟಿ).
ಮಕ್ಕಆಗಾಗಿ ಪಿಎಂಕೇರ್ ಯೋಜನೆ (PMCARES for Childre
2021ರ ಮೇ 29 ರಂದು ಕೇಂದ್ರ ಶಿಕ್ಷಣ ಸಚಿವಾಲಯದ ವತಿಯಿಂದ ಲೇಖಕರಿಗೆ ಪ್ರೇರಣೆ ನೀಡಲು ಯುವ ಯುವ ಹೆಸರಿನ ಕಾರ್ಯಕ್ರಮವನ್ನು ರೂಪಿಸಿದೆ. ಇದು 2021-22ರ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಒಂದು ಭಾಗವಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಬುಕ್ ಟ್ರಸ್ಟ್ ಸಂಸ್ಥೆಯು ಯುವ ಯೋಜನೆಯ ಅನುಷ್ಠಾನದ ಘಟಕವಾಗಿದೆ. YUVA: Young Upcoming and Versatile Authors AUTHORS
MENTORING YOUNG
30 ವರ್ಷದೊಳಗಿನ ಯುವ ಲೇಖಕರಿಗೆ ಜಾಗತಿಕ ಮಟ್ಟಕ್ಕನುಗುಣವಾಗಿ ಓದು, ಬರವಣಿಗೆ ಮತ್ತು ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶವನ್ನು ಪ್ರಧಾನಮಂತ್ರಿ ಯುವ ಯೋಜನೆಯು ಹೊಂದಿದೆ (Prime Minsters Scheme for Mentoring Young Authors).
2021ರ ಜೂನ್ 1 ರಿಂದ ಜುಲೈ 31 ರವರೆಗಿನ ಅವಧಿಯಲ್ಲಿ ಯುವ ಯೋಜನೆಯಡಿಯಲ್ಲಿ 75 ಲೇಖಕರನ್ನು ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಮಾಡಿ 2021ರ ಆಗಸ್ಟ್ 15ರ 75ನೇ ಸ್ವಾತಂತ್ರೋತ್ಸವ ದಿನದಂದು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ 6 ತಿಂಗಳ ಅವಧಿಯಲ್ಲಿ ಮಾಸಿಕ 50 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಯುವ ಲೇಖಕರಿಗೆ ಮಾರ್ಗದರ್ಶನ ನೀಡುವ, ಯುವ ಬರಹಗಾರರ ಬರವಣಿಗೆಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮವಾಗಿದೆ. ಯುವ
ಭಾರತ್ @ 75 ಹೆಸರಿನ ಈ ಯೋಜನೆಯು ಯುವ ತಲೆಮಾರಿನ ಲೇಖ
ಕರು ದೇಶದ ಸ್ವಾತಂತ್ರ್ಯ ಹೋರಾಟಗಾರರು, ಗುರುತಿಸಲಾಗದಂತಹ, ಮರೆತು ಹೋಗಿರುವಂತಹ ಸ್ಥಳಗಳು, ರಾಷ್ಟ್ರೀಯ ಚಳುವಳಿಗಳಲ್ಲಿ ಅವುಗಳ ಪಾತ್ರ ಮತ್ತು ಇತರೆ ವಿಷಯಗಳನ್ನು ವಿನೂತನ ಮತ್ತು ಕ್ರಿಯಾಶೀಲವಾಗಿ ಹಂಚಿಕೊಳ್ಳಲು, ನಾನಾ ಆಯಾಮಗಳಲ್ಲಿ ಅಭಿವ್ಯಕ್ತಪಡಿಸಲು ನೆರವಾಗಲಿದೆ. ನ್ಯಾಷನಲ್ ಬುಕ್ ಟ್ರಸ್ಟ್ ವತಿಯಿಂದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು ಸಿದ್ಧಪಡಿಸಿದ ಪುಸ್ತಕಗಳನ್ನು ಪ್ರಕಟಿಸಲಾಗುವುದು. ಮತ್ತು ಅವುಗಳನ್ನು ಇತರೆ ಭಾರತೀಯ ಭಾಷೆಗಳಿಗೂ ಅನುವಾದಿಸುವ ಮೂಲಕ ಏಕ್ ಭಾರತ್ ಶ್ರೇಸ್ಟ್ ಭಾರತ್ ಯೋಜನೆಯ ಉತ್ತೇಜನಕ್ಕೆ ಸಂಸ್ಕೃತಿ ಮತ್ತು ಸಾಹಿತ್ಯ ವಿನಿಮಯವನ್ನು ಖಾತರಿಪಡಿಸುವುದು.
2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಯುವ ಮನಸ್ಸುಗಳ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಮತ್ತು ಭವಿಷ್ಯದ ಜಗತ್ತಿನಲ್ಲಿ ಯುವ ಸೃಜನಾತ್ಮಕ ನಾಯಕರನ್ನು ರೂಪಿಸಲು ಭದ್ರ ಬುನಾದಿಯನ್ನು ಹಾಕಲಿದೆ. ಯುವ ಓದುಗರು ಮತ್ತು ಕಲಿಕಾರ್ಥಿಗಳಿಗೆ ಸಿದ್ಧಪಡಿಸಬಹುದಾದ # ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲಾಗುವುದು.
ಮಕ್ಕಳಿಗಾಗಿ ಪಿಎಂಕೇರ್ ಯೋಜನೆ (PMCARES for Children) 2021ರ ಮೇ 29 ರಂದು ಪ್ರಧಾನಿ ನರೇಂದ್ರ ಮೋದಿ ಅವರು
ಕೋವಿಡ್ ಸಾಂಕ್ರಾಮಿಕದಿಂದ ಸಂತ್ರಸ್ತರಾಗಿರುವ ಮಕ್ಕಳಿಗೆ ಪಿಎಂಕೇರ್ ಯೋಜನೆಯಡಿ ಹಲವು ಸೌಲಭ್ಯಗಳನ್ನು ಘೋಷಣೆ ಮಾಡಿದ್ದಾರೆ. ಕೋವಿಡ್ ಕಾರಣದಿಂದ ಇಬ್ಬರೂ ಪೋಷಕರು ಅಥವಾ ದತ್ತು ಪಡೆದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವು ನೀಡಲು ಮತ್ತು ರಕ್ಷಣೆ ಒದಗಿಸುವ ಕ್ರಮವನ್ನು ಕೈಗೊಳ್ಳಲಾಗಿದೆ. 10 ವರ್ಷದೊಳಗಿನ ಮಕ್ಕಳಿಗೆ ಶಾಲಾ ಶಿಕ್ಷಣ, 11 ರಿಂದ 18 ವರ್ಷದ ಮಕ್ಕಳಿಗೆ ಪಿಎಂ ಕೇರ್ ನಿಧಿಯಿಂದ ಶಾಲಾ ಪ್ರವೇಶ, ಸಮವಸ್ತ್ರ, ಪಠ್ಯಪುಸ್ತಕಗಳ ಖರ್ಚಿಗೆ ಹಣ ನೀಡುವುದು. ಶಿಕ್ಷಣ ಸಾಲದ ಮಾನದಂಡಗಳ ಪ್ರಕಾರ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಪಡೆಯಲು ಮಗುವಿಗೆ ಸಹಾಯ ಮಾಡುವುದು ಮತ್ತು ಅದರ ಮೇಲಿನ ಬಡ್ಡಿಯನ್ನು ಈ ನಿಧಿಯಿಂದ ಭರಿಸುವುದು. ಆಯುಷ್ಮಾನ್ ಭಾರತ್ diseason mari der best, saj. (PMCARES-Prime Minister's Citizen Assistance and Relief in Emergency Situation Fund)
Post a Comment