ಸುಪ್ರೀಂ ಕೋರ್ಟ್ 48ನೇ ಮುಖ್ಯ ನ್ಯಾಯಾಧೀಶರು

ಭಾರತದಲ್ಲಿ ತಂಬಾಕು ನಿಯಂತ್ರಣ ಶಾಸನ (Tobacco Control Legislation) ವು ಅತ್ಯಂತ ಹಳೆಯ ಕಾಯ್ದೆಯಾಗಿದ್ದು, ಶಾಸನಬದ್ಧ ಆರೋಗ್ಯ ಎಚ್ಚರಿಕೆಗಳನ್ನು ಪ್ರದರ್ಶಿಸಲು ಆದೇಶಿಸುತ್ತದೆ. 2003ರಲ್ಲಿ ಸಮಗ್ರ ತಂಬಾಕು ನಿಯಂತ್ರಣ ಶಾಸನವು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳು ಮತ್ತು ತಂಬಾಕು ಜಾಹೀರಾತು ಹಾಗೂ ಪ್ರಚಾರಗಳಿಗೆ ಸ್ಥಳಗಳನ್ನು ಒದಗಿಸುವುದಕ್ಕೆ ನಿರ್ಬಂಧ ಹೇರುವ ಗುರಿಯನ್ನು ಹೊಂದಿದೆ. ಬ್ರೆಜಿಲ್ ರಿಯೋಡಿ ಜಾನಿರೋದಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ ಶಾಸಕಾಂಗ ಸಭೆಯ ಸದಸ್ಯರಾಗಿದ್ದ ಡಾ. ಹರ್ಷವರ್ಧನ್ ಅವರು 1998ರಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕರ ಮೆಚ್ಚುಗೆಯ ಪೊಲಿಯೋ ನಿರ್ಮೂಲನಾ ಚಾಂಪಿಯನ್ ಪ್ರಮಾಣ ಪತ್ರವನ್ನು ಪಡೆದಿದ್ದರು. 2019ರಲ್ಲಿ ಭಾರತ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಮಸೂದೆಯನ್ನು ರೂಪಿಸಿದ್ದರು. ಇ-ಸಿಗರೇಟ್‌ಗಳ ಉತ್ಪಾದನೆ, ಆಮದು, ರಫ್ತು, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತುಗಳನ್ನು ಮಸೂದೆ ನಿಷೇಧ ಮಾಡಿದೆ. ಅಸಮರ್ಪಕವಾಗಿ ಹದಿಹರೆಯದವರ ಮೇಲೆ ಪರಿಣಾಮ ಬೀರುವ ಇ-ಸಿಗರೇಟ್‌ಗಳ ಅಪಾಯದಿಂದ ದೇಶವನ್ನು ರಕ್ಷಿಸಲು ಸರ್ಕಾರದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಭಾರತ ಸರ್ಕಾರವು 2025ರ ವೇಳೆಗೆ ತಂಬಾಕು ಬಳಕೆಯನ್ನು ಶೇ. 30 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

Toll Free Quit Line Service: ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಬಳಕೆಯನ್ನು ತ್ಯಜಿಸಲು 2016 ರಿಂದ ಈ ಸೇವೆಯು ಆರಂಭವಾಗಿದ್ದು ನಾಲ್ಕು ಕೇಂದ್ರಗಳಿಂದ 16 ಮುಖ್ಯ ಭಾಷೆಗಳು ಮತ್ತು ಇತರ ಸ್ಥಳೀಯ ಉಪಭಾಷೆಗಳಲ್ಲೂ ಲಭ್ಯವಿದೆ.

ನೆನಪಿರಲ: ಭಾರತಕ್ಕೆ ಮೊದಲ ಬಾರಿ ಪೋರ್ಚುಗೀಸರು ತಂಬಾಕು ಬೆಳೆಯನ್ನು ಪರಿಚಯಿಸಿದ್ದರು. ಹೊಗೆಸೊಪ್ಪಿನ ಮೂಲ ದಕ್ಷಿಣ ಆಫ್ರಿಕಾದ ಆಂಡಿಸ್ ಪರ್ವತ, ಪ್ರಪಂಚದಲ್ಲಿ ಅತಿಹೆಚ್ಚು ತಂಬಾಕನ್ನು ಚೀನಾ ದೇಶವು ಉತ್ಪಾದಿಸುತ್ತದೆ. ಭಾರತವು ಜಗತ್ತಿನಲ್ಲಿ 3ನೇ ಸ್ಥಾನದಲ್ಲಿದ್ದು ದೇಶದಲ್ಲಿ ಆಂಧ್ರಪ್ರದೇಶ ರಾಜ್ಯವು ಮೊದಲ ಸ್ಥಾನದಲ್ಲಿದೆ. ತಂಬಾಕು ಬೆಳೆಗಳಲ್ಲಿ 70 ಬಗೆಯ ಪ್ರಭೇದಗಳಿದ್ದು ವರ್ಜೀನಿಯಾ ಟೊಬ್ಯಾಕೋ ತಳಿ. ಅತ್ಯಂತ ಅಪಾಯಕಾರಿ, ತಂಬಾಕು ಬೆಳೆದ ಪ್ರದೇಶಗಳಲ್ಲಿ ಫಲವತ್ತತೆ ನಾಶವಾಗುತ್ತದೆ. 2008ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕನ್ನು ಉತ್ತೇಜಿಸುವ ಯಾವುದೇ ವಿವಿಧ ಜಾಹೀರಾತನ್ನು ನೀಡುವುದನ್ನು ನಿಷೇಧಿಸಿದೆ. (ತಂಬಾಕು ಸಂಶೋಧನಾ ಕೇಂದ್ರ - ಆಂಧ್ರಪ್ರದೇಶದ ರಾಜಮುಂಡಿ)

ಇ-ಸಿಗರೇಟ್: ತಂಬಾಕು ಆಧಾರಿತ ಸಾಮಾನ್ಯ ಸಿಗರೇಟ್ ಪರ್ಯಾಯವಾಗಿ ಬಳಸುವ ವಿದ್ಯುನ್ಮಾನ ಸಾಧನವಾಗಿದ್ದು ಇದರಲ್ಲಿ ತಂಬಾಕು ಇರುವುದಿಲ್ಲ. ಲೈಟರ್ ಮಾದರಿಯಲ್ಲಿರುವ ಇದರ ಒಳಗೆ ದ್ರವರೂಪದ ನಿಕೋಟಿನ್ ಜತೆಗೆ ಕೆಲವು ಹಾನಿಕಾರಕ ರಾಸಾಯನಿಕ ವಸ್ತುಗಳನ್ನು ಸೇರಿಸಲಾಗುತ್ತದೆ. ಬ್ಯಾಟರಿಯಿಂದ ಉಂಟಾದ ಶಾಖದ ನೆರವಿನಿಂದ ದ್ರವರೂಪದ ನಿಕೋಟಿನ್ ಪರಿವರ್ತನೆಗೊಂಡು ಅಬೆಯಾಗಿ ಸಿಗರೇಟ್‌ನಂತೆ ಎಳೆದುಕೊಳ್ಳಲಾಗುತ್ತದೆ. ಆದ್ದರಿಂದ 2019ರಲ್ಲಿ ಕೇಂದ್ರ ಸರ್ಕಾರವು ತಂಬಾಕು ಆಧಾರಿತ ಸಿಗಿರೇಟ್‌ಗಳಿಗೆ ಪರ್ಯಾಯವಾಗಿ ಬಳಕೆಯಲ್ಲಿದ್ದ ಇ-ಸಿಗರೇಟ್‌ನ ಉತ್ಪಾದನೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮಸೂದೆಯನ್ನು ಹೊರಡಿಸಿತ್ತು.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now