2021ರ ಮೇ 31 ರಂದು ವಿಶ್ವ ತಂಬಾಕು ರಹಿತ ದಿನ (World No Tobacco Day) ವನ್ನು ತ್ಯಜಿಸಲು ಬದ್ಧರಾಗಿರಿ
Warld No Tobacco Day
COMMIT TO QUIT
(Commit to Quit )” ಎಂಬ ಧೈಯವಾಕ್ಯದೊಂದಿಗೆ ಆಚರಿಸಲಾಗಿದೆ. 2021ರ ಮೇ 31 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ತಂಬಾಕಿನಿಂದ ದೂರವಿರುವುದಾಗಿ ಪ್ರತಿಜ್ಞೆ ಕೈಗೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತದಲ್ಲಿ ತಂಬಾಕು ಸೇವನೆಯಿಂದ ಪ್ರತಿವರ್ಷ 13 ದಶಲಕ್ಷಕ್ಕೂ ಹೆಚ್ಚು ಸಾವುಗಳು ಹಾಗೂ ದಿನಕ್ಕೆ 3,500 ಸಂಭವಿಸುತ್ತಿದ್ದು, ಸಾಮಾಜಿಕ ಮತ್ತು ಆರ್ಥಿಕ ಹೊರೆಗಳಿಗೆ ಕಾರಣವಾಗಿದೆ. ಕೋವಿಡ್ 19 ರಿಂದ ಧೂಮಪಾನಿಗಳು ತೀವ್ರ ರೋಗ & ಸಾವುಗಳ ಅಪಾಯವನ್ನು ಶೇ. 40 ರಿಂದ 50 ರಷ್ಟು ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು 'ಭಾರತದಲ್ಲಿ ತಂಬಾಕು ಬಳಕೆಗೆ ಕಾರಣವಾದ
ರೋಗಗಳು & ಸಾವುಗಳ ಅರ್ಥಿಕ ವೆಚ್ಚಗಳು' ಎಂಬ ಶೀರ್ಷಿಕೆಯ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಇದರ ಪ್ರಕಾರ ದೇಶದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ & ಸಾವುಗಳ ಆರ್ಥಿಕ ಹೊರೆಯು 1.77 ಲಕ್ಷ ಕೋಟಿ ರೂ. ಆಗಿದ್ದು ಇದು ಜೆಡಿಪಿಯ ಅಂದಾಜು ಪ್ರತಿಶತ ಶೇ. 1 ರಷ್ಟಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರ ವಿಶೇಷ ಮಾನ್ಯತೆ ಪ್ರಶಸ್ತಿ 2021ರಲ್ಲಿ ಆರೋಗ್ಯ ಸಚಿವಾಲಯದ ತಂಬಾಕು ನಿಯಂತ್ರಣದ ಕಾರ್ಯವನ್ನು ಗುರುತಿಸಿ ಮತ್ತು ಅವರ ಸೇವೆಯನ್ನು ಸ್ಮರಿಸಲು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರ 2021ರ ಸಾಲಿನ ವಿಶೇಷ ಮಾನ್ಯತೆ ಪ್ರಶಸ್ತಿಯನ್ನು ಡಾ. ಹರ್ಷವರ್ಧನ್ ಅವರಿಗೆ ನೀಡಲಾಗಿದೆ. ಇವರು ತಂಬಾಕು ಉತ್ಪನ್ನಗಳ ಬಳಕೆಯ ನಿರ್ಬಂಧ ಶಾಸನ ಹಾಗೂ ಇ-ಸಿಗರೇಟ್ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿವರ್ಷ ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ನಿಯಂತ್ರಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಯೊಬ್ಬ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಮಹಾನಿರ್ದೇಶಕರ ವಿಶೇಷ ಮಾನ್ಯತೆ ಪ್ರಶಸ್ತಿ (WHO Director General's Special Recognition Award) ಯನ್ನು ನೀಡುತ್ತಿದೆ. ಪ್ರಶಸ್ತಿಯನ್ನು ನೀಡುವ 6 ವಿಭಾಗಗಳು: AFRO, AMRO, EURO, WPRO, EMRO & SEAR. ಡಾ. ಹರ್ಷವರ್ಧನ್ 2020ರ ಮೇ 22 ರಿಂದ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿ ನೇಮಕವಾಗಿದ್ದರು.
WHO honours Usion Health Minister Harsh Vardhan
ಆಚರಣೆಯ ಹಿನ್ನೆಲೆ: ವಿಶ್ವ ಆರೋಗ್ಯ
ಸಂಸ್ಥೆಯು ಉಂಟಾಗುವ ತಂಬಾಕು ಸೇವನೆಯಿಂದ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ಮೊದಲ ಬಾರಿಗೆ 1987ರಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಿತು.
ಪ್ರತೀ ವರ್ಷವು ಒಂದು ಧೈಯವಾಕ್ಯದೊಂದಿಗೆ
ಆಚರಿಸಲಾಗುತ್ತದೆ. 2020ರ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು “ತಂಬಾಕು ಮತ್ತು ತಂಬಾಕಿಗೆ ಸಂಬಂಧಿಸಿದ ಉದ್ಯಮಗಳು ಯುವ ಪೀಳಿಗೆಯನ್ನು ಆಕರ್ಷಿಸಲು ಮಾಡುವ ಕುತಂತ್ರಗಳು" ಧೈಯವಾಕ್ಯದಲ್ಲಿ ಆಚರಿಸಲಾಗಿತ್ತು.
ಭಾರತದಲ್ಲಿ ತಂಬಾಕು ನಿಯಂತ್ರಣ ಶಾಸನ (Tobacco Control Legislation) ವು ಅತ್ಯಂತ ಹಳೆಯ ಕಾಯ್ದೆಯಾಗಿದ್ದು, ಶಾಸನಬದ್ಧ ಆರೋಗ್ಯ ಎಚ್ಚರಿಕೆಗಳನ್ನು ಪ್ರದರ್ಶಿಸಲು ಆದೇಶಿಸುತ್ತದೆ. 2003ರಲ್ಲಿ ಸಮಗ್ರ ತಂಬಾಕು ನಿಯಂತ್ರಣ ಶಾಸನವು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳು ಮತ್ತು ತಂಬಾಕು ಜಾಹೀರಾತು ಹಾಗೂ ಪ್ರಚಾರಗಳಿಗೆ ಸ್ಥಳಗಳನ್ನು ಒದಗಿಸುವುದಕ್ಕೆ ನಿರ್ಬಂಧ ಹೇರುವ ಗುರಿಯನ್ನು ಹೊಂದಿದೆ. ಬ್ರೆಜಿಲ್ ರಿಯೋಡಿ ಜಾನಿರೋದಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ ಶಾಸಕಾಂಗ ಸಭೆಯ ಸದಸ್ಯರಾಗಿದ್ದ ಡಾ. ಹರ್ಷವರ್ಧನ್ ಅವರು 1998ರಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕರ ಮೆಚ್ಚುಗೆಯ ಪೊಲಿಯೋ ನಿರ್ಮೂಲನಾ ಚಾಂಪಿಯನ್ ಪ್ರಮಾಣ ಪತ್ರವನ್ನು ಪಡೆದಿದ್ದರು. 2019ರಲ್ಲಿ ಭಾರತ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಮಸೂದೆಯನ್ನು ರೂಪಿಸಿದ್ದರು. ಇ-ಸಿಗರೇಟ್‌ಗಳ ಉತ್ಪಾದನೆ, ಆಮದು, ರಫ್ತು, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತುಗಳನ್ನು ಮಸೂದೆ ನಿಷೇಧ ಮಾಡಿದೆ. ಅಸಮರ್ಪಕವಾಗಿ ಹದಿಹರೆಯದವರ ಮೇಲೆ ಪರಿಣಾಮ ಬೀರುವ ಇ-ಸಿಗರೇಟ್‌ಗಳ ಅಪಾಯದಿಂದ ದೇಶವನ್ನು ರಕ್ಷಿಸಲು ಸರ್ಕಾರದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಭಾರತ ಸರ್ಕಾರವು 2025ರ ವೇಳೆಗೆ ತಂಬಾಕು ಬಳಕೆಯನ್ನು ಶೇ. 30 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
Toll Free Quit Line Service: ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಬಳಕೆಯನ್ನು ತ್ಯಜಿಸಲು 2016 ರಿಂದ ಈ ಸೇವೆಯು ಆರಂಭವಾಗಿದ್ದು ನಾಲ್ಕು ಕೇಂದ್ರಗಳಿಂದ 16 ಮುಖ್ಯ ಭಾಷೆಗಳು ಮತ್ತು ಇತರ ಸ್ಥಳೀಯ ಉಪಭಾಷೆಗಳಲ್ಲೂ ಲಭ್ಯವಿದೆ.
ನೆನಪಿರಲ: ಭಾರತಕ್ಕೆ ಮೊದಲ ಬಾರಿ ಪೋರ್ಚುಗೀಸರು ತಂಬಾಕು ಬೆಳೆಯನ್ನು ಪರಿಚಯಿಸಿದ್ದರು. ಹೊಗೆಸೊಪ್ಪಿನ ಮೂಲ ದಕ್ಷಿಣ ಆಫ್ರಿಕಾದ ಆಂಡಿಸ್ ಪರ್ವತ, ಪ್ರಪಂಚದಲ್ಲಿ ಅತಿಹೆಚ್ಚು ತಂಬಾಕನ್ನು ಚೀನಾ ದೇಶವು ಉತ್ಪಾದಿಸುತ್ತದೆ. ಭಾರತವು ಜಗತ್ತಿನಲ್ಲಿ 3ನೇ ಸ್ಥಾನದಲ್ಲಿದ್ದು ದೇಶದಲ್ಲಿ ಆಂಧ್ರಪ್ರದೇಶ ರಾಜ್ಯವು ಮೊದಲ ಸ್ಥಾನದಲ್ಲಿದೆ. ತಂಬಾಕು ಬೆಳೆಗಳಲ್ಲಿ 70 ಬಗೆಯ ಪ್ರಭೇದಗಳಿದ್ದು ವರ್ಜೀನಿಯಾ ಟೊಬ್ಯಾಕೋ ತಳಿ. ಅತ್ಯಂತ ಅಪಾಯಕಾರಿ, ತಂಬಾಕು ಬೆಳೆದ ಪ್ರದೇಶಗಳಲ್ಲಿ ಫಲವತ್ತತೆ ನಾಶವಾಗುತ್ತದೆ. 2008ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕನ್ನು ಉತ್ತೇಜಿಸುವ ಯಾವುದೇ ವಿವಿಧ ಜಾಹೀರಾತನ್ನು ನೀಡುವುದನ್ನು ನಿಷೇಧಿಸಿದೆ. (ತಂಬಾಕು ಸಂಶೋಧನಾ ಕೇಂದ್ರ - ಆಂಧ್ರಪ್ರದೇಶದ ರಾಜಮುಂಡಿ)
ಇ-ಸಿಗರೇಟ್: ತಂಬಾಕು ಆಧಾರಿತ ಸಾಮಾನ್ಯ ಸಿಗರೇಟ್ ಪರ್ಯಾಯವಾಗಿ ಬಳಸುವ ವಿದ್ಯುನ್ಮಾನ ಸಾಧನವಾಗಿದ್ದು ಇದರಲ್ಲಿ ತಂಬಾಕು ಇರುವುದಿಲ್ಲ. ಲೈಟರ್ ಮಾದರಿಯಲ್ಲಿರುವ ಇದರ ಒಳಗೆ ದ್ರವರೂಪದ ನಿಕೋಟಿನ್ ಜತೆಗೆ ಕೆಲವು ಹಾನಿಕಾರಕ ರಾಸಾಯನಿಕ ವಸ್ತುಗಳನ್ನು ಸೇರಿಸಲಾಗುತ್ತದೆ. ಬ್ಯಾಟರಿಯಿಂದ ಉಂಟಾದ ಶಾಖದ ನೆರವಿನಿಂದ ದ್ರವರೂಪದ ನಿಕೋಟಿನ್ ಪರಿವರ್ತನೆಗೊಂಡು ಅಬೆಯಾಗಿ ಸಿಗರೇಟ್‌ನಂತೆ ಎಳೆದುಕೊಳ್ಳಲಾಗುತ್ತದೆ. ಆದ್ದರಿಂದ 2019ರಲ್ಲಿ ಕೇಂದ್ರ ಸರ್ಕಾರವು ತಂಬಾಕು ಆಧಾರಿತ ಸಿಗಿರೇಟ್‌ಗಳಿಗೆ ಪರ್ಯಾಯವಾಗಿ ಬಳಕೆಯಲ್ಲಿದ್ದ ಇ-ಸಿಗರೇಟ್‌ನ ಉತ್ಪಾದನೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮಸೂದೆಯನ್ನು ಹೊರಡಿಸಿತ್ತು.
Post a Comment