ಯೇಸು ಕ್ರಿಸ್ತನ ಜೀವನ (ಸಾ.ಶ.ಪೂ.4-ಸಾ.ರ, 30)

 

ಕ್ರೈಸ್ತ ಧರ್ಮದ ಸ್ಥಾಪಕ ಯೇಸು ಕ್ರಿಸ್ತ: ಈತ ಸಾ.ಶ.ಪೂ.4 ಡಿಸೆಂಬರ್ 25 ರಂದು ಜುಡಿಯಾದಲ್ಲಿರುವ (ಬ್ಯಾಲಿಸ್ಟೈನ್) 'ಬೆತ್ತಹಮ್' ಎಂಬಲ್ಲಿ ಜನಿಸಿದನು. ಜೋಸೆಫ್ ಮತ್ತು ಮೇರಿ ಈತನ ತಂದೆ ತಾಯಿಗಳು, ಜೋಸೆಫ್‌ನು ನಜರೇತ್ ಎಂಬ ಹಳ್ಳಿಯಲ್ಲಿ ಬಡಗಿಯಾಗಿದ್ದನು. ಬೈಬಲ್‌ನ ಹೊಸ ಒಡಂಬಡಿಕೆ ಪ್ರಕಾರ ಯೇಸು ಜನಿಸಿದಾಗ ಪೂರ್ವದಲ್ಲಿ ನಕ್ಷತ್ರವೊಂದು ಮಿನುಗಿತು. ಅದನ್ನು ಪೂರ್ವದ ನಕ್ಷತ್ರ' (Star of East) ಎಂದು ಕರೆಯುತ್ತಾರೆ. ಯೇಸುವಿನ ಜನನ ಹಾಗೂ ಅದೇ ಸಮಯದಲ್ಲಿ ಕಂಡ 'ಪೂರ್ವದ ನಕತ' ಪುರೋಹಿತರಿಗೆ ಆವನು ದೈವಾಂಶ ಸಂಭೂತನೆರಬ ನಂಬಿಕೆಯನ್ನಂಟುಮಾಡಿತು. ಆದ್ದರಿಂದ ಅವನನ್ನು ಪೂಜಿಸಲು ಆರಂಭಿಸಿದರು. ಅವನು ತನ್ನ ಜೀವನದ ಸುಮಾರು 25 ವರ್ಷಗಳನ್ನು ಗೆಲಾಲಿ ಪ್ರಾಂತ್ಯದ ನಜರತ್‌ನಲ್ಲಿ ಕಳೆದನು. ಆದ್ದರಿಂದ ಅದನ್ನು ನಜರತ್ನ ಜೀಸಸ್ ಎಂದೇ ಕರೆಯಲಾಗಿದೆ.

ಯೇಸು ಬೆಳೆದಂತೆ ತನ್ನ ತಂದೆಯ ವೃತ್ತಿಯನ್ನು ಕಲಿತನು ಮತ್ತು ಕುರಿಗಳನ್ನು ಮೇಯಿಸುತ್ತಿದ್ದನು. ಈತನು ಸರಳ ಜೀವನವನ್ನು ನಡೆಸುತ್ತಿದ್ದನು ಮತ್ತು ಬಡವರೊಡನೆ ಬೆರೆಯುತ್ತಿದ್ದನು. ಜೀಸಸ್ತನು ತನ್ನ 12ನೆಯ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಯಹೂದಿಗಳ ಸೈನಗಾಗ್‌ಗೆ ಭೇಟಿನೀಡಿದನು ಮತ್ತು ಜನರಿಗೆ ಅರ್ಥವಾಗದ ಧರ್ಮ ಗ್ರಂಥಗಳ ಅರ್ಥವಿವರಣೆ ನೀಡಿ ಅವರನ್ನು ಚಕಿತಗೊಳಿಸಿದನು. ಜೀಸಸ್ 'ಜಾನ್ ಬ್ಯಾಪ್ಟಿಸ್ಟ್'ನ ಪ್ರಭಾವಕ್ಕೊಳಗಾಗಿದ್ದನು. ಜಾನ್‌ಬ್ಯಾಪ್ಟಿಸ್ಸನು ತಮ್ಮ ಪಾಪ ಜೀವನಗಳಿಂದ ಮುಕ್ತಗೊಳಿಸಲು ಒಬ್ಬ ಉದ್ಧಾರಕ ಬರುತ್ತಾನೆಂದು ಜನರಿಗೆ ಹೇಳಿದ್ದನು. ಜೀಸಸ್ ತನ್ನ 30ನೇ ವಯಸ್ಸಿನಲ್ಲಿ ಜಾನ್‌ಬ್ಯಾಪ್ಟಿಸನಿಂದ ದೀಕ್ಷೆಯನ್ನು ಸ್ವೀಕರಿಸಿದನು. ನಂತರ ಜೀಸಸ್ ಹೊಸ ಜೀವನ ಪ್ರಾರಂಭಿಸಿ, ಸಂಚಾರಿ ಪ್ರಚಾರಕನಾದನು.


ತನ್ನ ಉಳಿದ ಸಮಯವನ್ನು ದೇವರ ಪಿತೃತ್ವವನ್ನು ಸಾರುತ್ತಾ, ಅದರಲ್ಲಿ ಜನರು ನ್ಯಾಯ, ಪ್ರೀತಿ ಮತ್ತು ಕರುಣೆಯನ್ನು ಪಡೆಯುವರೆಂದು ಹೇಳಿದನು. ಇವನ ಸರಳ ಬೋಧನೆಗಳಿಂದ ಜನರು ಇವನೆಡೆಗೆ ಆಕರ್ಷಿತರಾದರು. ಅವನು ಜುಡಿಯಾ ಮತ್ತು ಅದರ ಸುತ್ತ ಮುತ್ತ ತನ್ನ 12 ಜನ ಶಿಷ್ಯರೊಡನೆ ಪ್ರಯಾಣಿಸಿ, ತನ್ನ ಸಂದೇಶಗಳನ್ನು ದೃಷ್ಟಾಂತಗಳ ರೂಪದಲ್ಲಿ ತಿಳಿಸಿದನು. ಸರಳ ಜೀವನ ನಡೆಸುತ್ತಾ ಬಡವರೊಡನೆ ಮುಕ್ತವಾಗಿ ಬೆರೆತನು. ಆತ ಯಾವಾಗಲೂ ರೋಗಿಗಳಿಗೆ ಮತ್ತು ತುಳಿತಕ್ಕೊಳಗಾದವರಿಗೆ ಸಹಾಯ ಮಾಡುತ್ತಿದ್ದನು. ಈತನ ಅನುಯಾಯಿಗಳು ಇವನನ್ನು ದೇವದೂತನೆಂದು ಪರಿಗಣಿಸಿದರು. ಅವನ ಕೆಲವು ಬೋಧನೆಗಳು ಯಹೂದಿಗಳ ಕಾನೂನುಗಳನ್ನು ಪ್ರಶ್ನಿಸಿದವು, ಈತ ಮಾತನಾಡುತ್ತಿದ್ದ ಸ್ವರ್ಗ ಸಾಮ್ರಾಜ್ಯದ ಪರಿಶುದ್ಧ ಕಲ್ಪನೆಯನ್ನು ಅನೇಕರು ಪ್ರಾಪಂಚಿಕ ಸಾಮ್ರಾಜ್ಯವೆಂದು ತಪ್ಪಾಗಿ ಗ್ರಹಿಸಿಕೊಂಡರು. ಯೇಸು ತನ್ನನ್ನು ತಾನು ದೇವರ ಮಗನೆಂದು ಕರೆದುಕೊಂಡದ್ದು ಸಂಪ್ರದಾಯಸ್ಥ ಯಹೂದಿಗಳಿಗೆ ಕೋಪವನ್ನುಂಟುಮಾಡಿತು.


ತನ್ನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಿಂದ ಜೀಸಸ್ 'ಕ್ರಿಸ್ತ' ನಾದನು. ಕ್ರಿಸ್ತನೆಂದರೆ 'ಉದ್ಧಾರಕ' ಅಥವಾ 'ದೀಕ್ಷಾವಂತ' ಎಂದರ್ಥ. ಯೇಸುವಿನ ಜನಪ್ರಿಯತೆ ಸಂಪ್ರದಾಯಸ್ಥ ಯಹೂದಿಗಳಲ್ಲಿ ಎಚ್ಚರಿಕೆ ಮತ್ತು ಅನುಮಾನವನ್ನು ಉಂಟುಮಾಡಿತು. ಹೀಬ್ರುಗಳ ಅಂಧ ನಂಬಿಕೆಗಳನ್ನು ಖಂಡಿಸಿದನು. ನ್ಯಾಯಕ್ಕಾಗಿ ಪ್ರೀತಿ, ಮಾನವೀಯತೆ ಮತ್ತು ದೇವರ ಇಚ್ಛೆಗೆ ಶರಣಾಗುವವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಹೇಳಿದನು. ಹಾಗೆಯೇ ಯಹೂದಿಗಳ ಧರ್ಮಗುರುಗಳನ್ನು ಅವರ ಐಹಿಕ ಜೀವನವನ್ನು ಟೀಕಿಸಲು ಹೆದರಲಿಲ್ಲ. ಆದ್ದರಿಂದ ಅವರು ಈತನ ಶತ್ರುಗಳಾದರು. ರಾಜನಾದ ಹರಾಡ್ ಅಥವಾ ಪಾಂಟಿಯಸ್ ಪಿಲೇಟ್ ಈತನನ್ನು ಸುಳ್ಳು ಪ್ರವಾದಿಯೆಂದು ಖಂಡಿಸಿದನು. ದುರಾದೃಷ್ಟವೆಂದರೆ ಈತನ ಜನಪ್ರಿಯತೆ ಮತ್ತು ಬೆಳವಣಿಗೆಯನ್ನು ರೋಮನ್ನರು ಸಾರ್ವಜನಿಕ ಶಾಂತಿಗೆ ಭಂಗವೆಂದು ಭಾವಿಸಿದರು. ಈತನನ್ನು ಪಿಲೇಟ್‌ನ ಮುಂದೆ ಕರೆತರಲಾಯಿತು. ರೋಮನ್ ಗೌರರ್‌ ಆಗಿದ್ದ, ಪಾಂಟಿಯಾಸ್ ಪಿಲೇಟ್ ಕ್ರಿಸ್ತನನ್ನು ಧರ್ಮನಿಂದ ಮತ್ತು ದೇಶದ್ರೋಹಿ ಎಂದು ಆರೋಪಿಸಿ ಮರಣದಂಡನೆಗೊಳಪಡಿಸಿದನು.


ಯೇಸುವನ್ನು ಶಿಲುಬೆಗೇರಿಸಿದ್ದು:


ಜೀಸಸ್ ಭಗವಂತನ ಪಿತೃತ್ವ ಮತ್ತು ಮಾನವರ ಭ್ರಾತೃತ್ವವನ್ನು ಬೋಧಿಸಿದನು. ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಟ್ಟವರಿಗೆ ದೀಕ್ಷೆ ನೀಡಿದನು. ಜಹೋವ ದೇವರ ಪೂಜೆಯನ್ನು ಟೀಕಿಸಿದನು. ಸಾ.ಶ.30ರಲ್ಲಿ ಯೇಸುವು ಯಹೂದಿಗಳು ಜರುಸಲೇಂಗೆ ಭೇಟಿನೀಡುವ ಸಂದರ್ಭದಲ್ಲಿಯೇ ಅಲ್ಲಿಗೆ ಹೋದನು. ಇದು ವಿರೋಧಿಗಳಿಗೆ ಅವನ ವಿರುದ್ಧ ಪಿತೂರಿ ನಡೆಸಲು ಅವಕಾಶ ನೀಡಿತು. ಯೇಸು ಶಿಷ್ಯರೊಡನೆ ತನ್ನ ಕೊನೆಯ ಭೋಜನವನ್ನು ಮಾಡಿದನು. ಯೇಸುವು ಗಮನ್ ದೇವಾಲಯದ ಉದ್ಯಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ದೇವಾಲಯದ ಕಾವಲುಗಾರ ಅವನನ್ನು ಬಂಧಿಸಿದನು.


ಜರುಸಲೇಂನ ಹೊರವಲಯದಲ್ಲಿರುವ ಗೋಲೋಥಾ ಗುಡ್ಡದ ಮೌಂಟ್ ಕ್ಯಾಲ್ವರಿ ಎಂಬಲ್ಲಿಗೆ ಎಳೆತಂದನು. ಇಬ್ಬರು ಕಳ್ಳರೊಡನೆ ಶಿಲುಬೆಗೇರಿಸಿ, ಕೈಕಾಲುಗಳಿಗೆ ಮೊಳೆ ಹೊಡೆದು ಕೊಲ್ಲಲಾಯಿತು. ಇದನ್ನು ಯೇಸುವನ್ನು ಶಿಲುಬೆಗೇರಿಸಿದ್ದೆಂದು ಕರೆಯಲಾಗುತ್ತದೆ. ಬೈಬಲ್ ಪ್ರಕಾರ ಇಂತಹ ಕಠಿಣ ಪರಿಸ್ಥಿತಿ ಎದುರಾದರೂ ಯಾ ಸಿಟ್ಟಿಗೇಳಲಿಲ್ಲ. 'ತಂದೆಯೇ ಅವರನ್ನು ಕ್ಷಮಿಸು ತಾವೇನು ಮಾಡುತ್ತಿದ್ದೇವೆಂದು ಅರಿಯರು' ಎಂದು ಹೇಳಿದನು. ಯೇಸುವಿನ ಈ ನುಡಿಯು ಎಲ್ಲಾ ಧರ್ಮೀಯರ ಮನಕಲಕುತ್ತದೆ. ಇಂತಹ ಉದಾತ್ತ ಗುಣಗಳಿಂದಲೇ ಯೇಸ ಅಜರಾಮರವಾಗಿರುವುದು,




1/Post a Comment/Comments

Post a Comment

Stay Conneted

WhatsApp Group Join Now
Telegram Group Join Now
Instagram Group Join Now