ವೈದಿಕ ಸಂಸ್ಕೃತಿ

 ಭಾರತದ ಉಪಖಂಡದಲ್ಲಿ ಸಿಂಧೂ ನಾಗರಿಕತೆಯ ನಂತರ ಆರ್ಯರು ಒಂದು ವಿಭಿನ್ನ ಸಂಸ್ಕೃತಿಯನ್ನು ಬೆಳೆಸಿದರು. ಸಾ.ಶ.ಪೂ., 2000ದ ಆಸುಪಾಸಿನಲ್ಲಿ ವಾಯುವ್ಯ ದಿಕ್ಕಿನಿಂದ ಅವರು ಭಾರತಕ್ಕೆ ಬಂದಿರಬಹುದೆಂದು ನಂಬಲಾಗಿದೆ. ಆರಂಭಿಕ ಆರ್ಯರು ಯಾವುದೇ ಮರಾತತ್ವ ಮೂಲಾಧಾರಗಳನ್ನು ಬಿಟ್ಟು ಹೋಗಿಲ್ಲ. ಆದರೆ ಅವರು ಕೊಟ್ಟಿರುವ ಶ್ರೀಮಂತ ವೈದಿಕ ಸಾಹಿತ್ಯ ಅವರ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತದೆ. ವೇದಗಳು


ಆರ್ಯರ ಮಹಾನ್ ಕೊಡುಗೆಗಳಾಗಿವೆ. ಆದ್ದರಿಂದ ಈ ಸಂಸ್ಕೃತಿಯನ್ನು ವೈದಿಕ ಸಂಸ್ಕೃತಿ ಎಂದು ಕರೆಯಲಾಗಿದೆ.


ಆರ್ಯರ ಮೂಲಸ್ಥಳದ ಬಗ್ಗೆ ಒಮ್ಮತಾಭಿಪ್ರಾಯವಿಲ್ಲ. ಆರ್ಯರು ಮೂಲತಃ ಮಧ್ಯ ಏಷಿಯಾದ ಕ್ಯಾಸ್ಪಿಯನ್ ಸಮುದ್ರ ಪ್ರದೇಶದ ಹಳ್ಳಿಗಾಡಿನ ಅಲೆಮಾರಿ ದನಗಾಹಿಗಳಾಗಿದ್ದರೆಂದು ನಂಬಲಾಗಿದೆ. ಅವರು ಹುಲ್ಲುಗಾವಲು ಹುಡುಕಿಕೊಂಡು ವಲಸೆ ಹೊರಟು ಭಾರತದ ಉಪಖಂಡವನ್ನು ಪ್ರವೇಶಿಸಿದರು. ಇಲ್ಲಿನ ಸ್ಥಳೀಯರಿಂದ ಪ್ರಬಲ ವಿರೋಧ ಎದುರಿಸಿದರು ಮತ್ತು ಅವರನ್ನು ದಾಸ್ಯಗಳೆಂದು ಕರೆದರು. ಆದಾಗ್ಯೂ ಅವರ ಪ್ರತಿರೋಧವನ್ನು ಎದುರಿಸಿ ಸಿಂಧೂ ನದಿಯ ತೀರದಲ್ಲಿ (ಸಪ್ತಸಿಂಧೂ ಪ್ರದೇಶ) ನೆಲೆಸಿದರು. ಉತ್ತರ ಭಾರತದ ಬಹುಭಾಗವನ್ನಾವರಿಸಿದ ಆರ್ಯಾವರ್ತವನ್ನು (ಆರ್ಯರ ನಾಡು) ಇವರು ಆಕ್ರಮಿಸಿಕೊಂಡಿದ್ದರಿಂದ ಸೋತ ದ್ರಾವಿಡರು ದಕ್ಷಿಣಕ್ಕೆ ವಲಸೆ ಹೋದರು.


ಸಪ್ತಸಿಂಧೂ : ಏಳು ನದಿಗಳ ಪ್ರದೇಶ


ಝೀಲಂ 2.ಚೀನಾಬ್ 3, ಬಿಯಾಸ್ 4. ರಾವಿ 5 ಸಟೇಜ್ 6, ಸರಸ್ವತಿ 7 ದ್ವಿಪದ್ಧತಿ

ಆರ್ಯ ಅಂದರೆ ಕುಲೀನ ಅಥವಾ ಒಡೆಯ ಅಥವಾ ಕೃಷಿ ಅವಲಂಬಿತ ವ್ಯಕ್ತಿ ಎಂದರ್ಥ. ಆರ್ಯರು ದ್ರಾವಿಡರಿಗಿಂತ ಸಾಕಷ್ಟು ಭಿನ್ನವಾಗಿದ್ದರು. ಅವರು ಶುಭ್ರವರ್ಣದ ಸದೃಢ ಮೈಕಟ್ಟಿನವರಾಗಿದ್ದರು. ವೈದಿಕ ಸಂಸ್ಕೃತಿಯನ್ನು ಅಭ್ಯಸಿಸಲು ಆರ್ಯರ ಪವಿತ್ರ ಗ್ರಂಥಗಳಾದ ವೇದಗಳು ಪ್ರಮುಖ ಮೂಲಾಧಾರಗಳಾಗಿವೆ. 'ವೇದ' ಶಬ್ದವನ್ನು ಸಂಸ್ಕೃತ ಮೂಲದ 'ಏಡ್' ಎಂಬುದರಿಂದ ಪಡೆಯಲಾಗಿದೆ. 'ವಿದ್' ಎಂದರೆ ಜ್ಞಾನ ಎಂದರ್ಥ, ಅವರು ನಾಲ್ಕು ವೇದಗಳನ್ನು ರಚಿಸಿದರು. ಅವುಗಳೆಂದರೆ ಋಗ್ವದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ. ಋಗ್ವದವನ್ನು ಮೊದಲು ರಚಿಸಲಾಯಿತು. ಈ ಅವಧಿಯನ್ನು ಪೂರ್ವವೇದಕಾಲ ಅಥವಾ ಋಗ್ಗೇದದ ಕಾಲವೆಂದು ಕರೆಯಲಾಗಿದೆ. ಉಳಿದ ಮೂರು ವೇದಗಳಾದ ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳು ಆನಂತರ ರಚನೆಯಾದವು. ಇದನ್ನು ಉತ್ತರ ವೇದ ಕಾಲವೆಂದು ಕರೆಯಲಾಗಿದೆ.


ಪ್ರಮುಖ ಲಕ್ಷಣಗಳು.


ರಾಜಕೀಯ ಸ್ಥಿತಿ


ಆರ್ಯರ ಬುಡಕಟ್ಟುಗಳು ಕ್ರಮೇಣವಾಗಿ ಭಾರತದಲ್ಲಿ ನೆಲೆಸಿದವು, ಬುಡಕಟ್ಟುಗಳನ್ನು 'ಜನ'ಗಳು ಎಂದು ಕರೆಯಲಾಗುತ್ತಿತ್ತು. ಬುಡಕಟ್ಟಿನ ಮುಖ್ಯಸ್ಥನನ್ನು 'ರಾಜನ್' ಎಂದು ಕರೆಯುತ್ತಿದ್ದರು. ಜಾನುವಾರುಗಳು ಮತ್ತು ಪ್ರದೇಶಗಳಿಗಾಗಿ ಬುಡಕಟ್ಟುಗಳು ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದವು. ಪುರೋಹಿತ, ಸಂಗ್ರಹತ್ರಿ, ಸೇನಾಪತಿ, ವಿಸ್ಪತಿಗಳು ಮತ್ತು ಗ್ರಾಮಣಿಗಳು ಅರಸನಿಗೆ ಆಡಳಿತದಲ್ಲಿ ಸಹಾಯಕರಾಗಿದ್ದರು. ಗ್ರಾಮ ಆಡಳಿತದ ಅತ್ಯಂತ ಸಣ್ಣ ಘಟಕವಾಗಿತ್ತು. ಗ್ರಾಮಣಿಯು ಗ್ರಾಮದ ಮುಖ್ಯಸ್ಥನಾಗಿದ್ದನು ಮತ್ತು ವಿಸ್ಪತಿಯು ಕೆಲವು ಗ್ರಾಮಗಳ ಗುಂಪಿನ ಉಸ್ತುವಾರಿ ಹೊಂದಿದ್ದನು. ರಾಜನ ಪ್ರಾಥಮಿಕ ಕರ್ತವ್ಯವು ಬುಡಕಟ್ಟಿನ ರಕ್ಷಣೆ ಮಾಡುವುದಾಗಿತ್ತು ಮತ್ತು ಇದಕ್ಕಾಗಿ ಅವನು ಜನರಿಂದ ಕಾಣಿಕೆಗಳನ್ನು ಪಡೆಯುತ್ತಿದ್ದನು. ಸಭಾ (ಹಿರಿಯರ ಗುಂಪು) ಮತ್ತು


ಸಮಿತಿ (ಪರಿಣಿತರ ಗುಂಪು)ಗಳು ಸಹ ರಾಜನಿಗೆ ಆಡಳಿತದಲ್ಲಿ ಸಹಾಯಕವಾಗಿದ್ದವು.


ಉತ್ತರ ವೇದ ಕಾಲದಲ್ಲಿ 'ಜನ'ಗಳು ಪ್ರಬಲವಾಗಿ ರಾಜ್ಯಗಳಾಗಿ ಪರಿವರ್ತನೆಗೊಂಡವು. ರಾಜ್ಯಗಳು ಪ್ರಾಂತ್ಯಗಳಾಗಿ ವಿಭಜಿಸಲ್ಪಟ್ಟವು ಮತ್ತು ಪ್ರಾಂತ್ಯಗಳು ' ಗೋಪ'ಗಳು, 'ವಿಷಯ'ಗಳು ಹಾಗೂ 'ಗ್ರಾಮಗಳಾಗಿ ಉಪವಿಂಗಡಣೆಗೊಂಡವು, ರಾಜಪ್ರಭುತ್ವವು ವಂಶಪಾರಂಪರವಾಯಿತು, ಕುರು, ಪಾಂಚಾಲ, ಕಾಶಿ, ವಿದೇಹ, ವಿದರ್ಭ ಮುಂತಾದವು ಪ್ರಮುಖ ರಾಜ್ಯಗಳಾಗಿದ್ದವು. ಸಾಮಾಜ್ಯಶಾಹಿತ್ವದ ಪರಿಣಾಮವಾಗಿ ಅರಸರಲ್ಲಿ ಶ್ರೇಣಿಕ್ರಮ ಅಸ್ತಿತ್ವಕ್ಕೆ ಬಂದಿತು. ಉದಾಹರಣೆಗೆ - ರಾಜ, ಮಹಾರಾಜ, ರಾಜಾಧಿರಾಜ, ಏಕರಾಟ, ವಿರಾಟ, ಸಾಮ್ರಾಟ, ಚಕ್ರವರ್ತಿ ಮುಂತಾದವು. ರಾಜಕೀಯ ಸಾರ್ವಭೌಮತ್ವದ ಸ್ಥಾಪನೆಗಾಗಿ ಅರಸರು ರಾಜಸೂಯ, ಅಶ್ವಮೇಧ ಮತ್ತು ವಾಜಪೇಯ ಯಾಗಗಳನ್ನು ಮಾಡತೊಡಗಿದರು. ರಾಜನ ಅಧಿಕಾರವು ಹೆಚ್ಚಾಗಿ ಜನರ ರಕ್ಷಣೆಯ ಜೊತೆಗೆ ಆಡಳಿತಾತ್ಮಕ ಕರ್ತವ್ಯಗಳನ್ನು ನಿರ್ವಹಿಸುವುದಾಗಿತ್ತು. ಮಂತ್ರಿಮಂಡಲ ಮತ್ತು ಅನೇಕ ಅಧಿಕಾರಿಗಳು ರಾಜನಿಗೆ ಸಹಾಯ ಸಲ್ಲಿಸುತ್ತಿದ್ದರು. ಸಭಾ ಮತ್ತು ಸಮಿತಿಗಳ ಅಸ್ತಿತ್ವ ಮುಂದುವರೆಯಿತು.


ಸೈನ್ಯವು ವ್ಯವಸ್ಥಿತವಾಗಿ ಸಂಘಟಿಸಲ್ಪಟ್ಟಿತ್ತು ಮತ್ತು ಅದು ಕಾಲ್ಗಳ, ಗಜದಳ ಮತ್ತು ಅಶ್ವದಳಗಳನ್ನೊಳಗೊಂಡಿತ್ತು. ನೌಕಾದಳದ ಬಳಕೆ ಮಿತವಾಗಿತ್ತು, ಯುದ್ಧವು ಉತ್ತರ ವೇದ ಕಾಲದಲ್ಲಿ ಜಟಿಲಗೊಂಡಿತು. ಪೂರ್ವವೇದಕಾಲದ ಸರಳ ಯುದ್ಧೋಪಕರಣಗಳ ಬದಲಾಗಿ, ಉತ್ತರ ವೇದಕಾಲದಲ್ಲಿ ಸುಧಾರಿತ ಬಿಲ್ಲುಗಳು, ಬಾಣಗಳು, ಖಡ್ಗಗಳು, ಭರ್ಚಿಗಳು, ಗದೆಗಳು, ಕೊಡಲಿಗಳು ಮುಂತಾದ ಯುದ್ಧೋಪಕರಣಗಳು ಬಳಕೆಗೆ ಬಂದವು. ಶಿರಸ್ತಾಣಗಳು ಮತ್ತು ಕವಚಗಳು ರಕ್ಷಣೆಗಾಗಿ ಉಪಯೋಗಿಸಲ್ಪಟ್ಟವು. ಯುದ್ಧದಲ್ಲಿ ಜಯಗಳಿಸುವುದು ಪ್ರಮುಖವಾಯಿತು ಮತ್ತು ಇದಕ್ಕಾಗಿ ಮೋಸದ ಮಾರ್ಗವನ್ನು ಅನುಸರಿಸಲಾರಂಭಿಸಿದರು.


ಅವಿಭಕ್ತ ಕುಟುಂಬ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಆರ್ಯಸಮಾಜವು ಪಿತೃಪ್ರಧಾನವಾಗಿತ್ತು. ಕುಟುಂಬದ


ಹಿರಿಯ ಪುರುಷ ಸದಸ್ಯ ಮುಖ್ಯಸ್ಥನಾಗಿದ್ದು, ಅವನನ್ನು 'ಕುಲಪತಿ' ಅಥವಾ 'ಗೃಹಪತಿ' ಎಂದು ಕರೆಯಲಾಗಿತ್ತು. ಏಕಪತ್ನಿತ್ವ ರೂಢಿಯಲ್ಲಿತ್ತು. ಬಹುಪತ್ನಿತ್ವ ರಾಜವಂಶಕ್ಕೆ ಸೀಮಿತವಾಗಿತ್ತು. ವಿಧವಾ ಮನ‌ ವಿವಾಹ ಅಸ್ತಿತ್ವದಲ್ಲಿತ್ತು. ಮಹಿಳೆಯರಿಗೆ ಉನ್ನತ ಸ್ಥಾನವಿತ್ತು ಮತ್ತು ಅವರು ಪುರುಷರೊಂದಿಗೆ ಸಮಾನ ಹಕ್ಕುಗಳನ್ನು ಹೊಂದಿದ್ದರು. ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ, ವೃತ್ತಿಗಳನ್ನು ಬದಲಾಯಿಸುವುದರೊಂದಿಗೆ ಜನರು ವರ್ಣಗಳನ್ನೂ ಬದಲಾಯಿಸಬಹುದಾಗಿತ್ತು. ಹೀಗೆ ವರ್ಣಗಳಲ್ಲಿ ಚಲನಶೀಲತೆ ಇತ್ತು.


ಮಹಿಳಾ ವಿದ್ವಾಂಸರಾದ ವಿಶ್ವವರಾ, ಘೋಷಾ, ಅಪಾಲಾ ಮುಂತಾದವರು ಶ್ಲೋಕಗಳನ್ನು ರಚಿಸಿದ್ದರು. ಸಾಮಾಜಿಕ ವರ್ಗಿಕರಣಗಳಾದ ಚತುರ್‌ವರ್ಣಗಳು ವೃತ್ತಿ ಆಧಾರಿತವಾಗಿದ್ದವು. ಅವುಗಳೆಂದರೆ ಬ್ರಾಹ್ಮಣ,


ಉತ್ತರ ವೇದಕಾಲದಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಅಸ್ತಿತ್ವಕ್ಕೆ ಬಂದವು. ಮಹಿಳೆಯರ ಸ್ಥಾನ ಕ್ಷೀಣಿಸಿತು. ಮಹಿಳೆಯರು ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳುವುದು ಮುಂದುವರೆಯಿತು. ಉನ್ನತ ವರ್ಗದ ಮಹಿಳೆಯರು ಮಾತ್ರ ಉಚ್ಛಶಿಕ್ಷಣ ಪಡೆಯುತ್ತಿದ್ದರು. ಆದರೆ ಮಹಿಳೆ ಈಗ ತಂದೆ ಅಥವಾ ಗಂಡ ಅಥವಾ ಮಗನ ರಕ್ಷಣೆಯಲ್ಲಿರಬೇಕಾಯಿತು. ವರ್ಣಗಳು ಅನೇಕ ಜಾತಿಗಳಾಗಿ ಪರಿವರ್ತನೆಗೊಂಡವು, ಜಾತಿಪದ್ಧತಿ ಅನುವಂಶಿಕವಾಯಿತು. ವೈಶ್ಯರು ಮತ್ತು ಶೂದ್ರರಿಗೆ ಹೋಲಿಸಿದರೆ ಬ್ರಾಹ್ಮಣರು ಮತ್ತು ಕ್ಷತ್ರಿಯರು ಉನ್ನತ ಸ್ಥಾನ-ಮಾನ ಅನುಭವಿಸುತ್ತಿದ್ದರು. ವ್ಯಕ್ತಿಯೊಬ್ಬನ ಜೀವನವನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಯಿತು.


ಇವುಗಳನ್ನು ಆಶ್ರಮಗಳೆಂದು ಕರೆಯುತ್ತಾರೆ. ಅವುಗಳೆಂದರೆ, ಬ್ರಹ್ಮಚರ್ಯ (ಶಿಕ್ಷಣದ ಅವಧಿ), ಗೃಹಸ್ಥ (ವೈವಾಹಿಕ ಜೀವನ), ವಾನಪ್ರಸ್ಥ (ಧ್ಯಾನಕ್ಕಾಗಿ ಕಾಡಿಗೆ ತೆರಳುವುದು) ಮತ್ತು ಸನ್ಯಾಸ (ವೈರಾಗ್ಯ) ಎಂಬುದಾಗಿತ್ತು.


ಗೋದಿ, ಅಕ್ಕಿ, ಬಾರಿ, ತರಕಾರಿ, ಹಣ್ಣುಗಳು, ಹಾಲು ಮತ್ತು ಹೈನು ಜನರ ಆಹಾರ ಪದಾರ್ಥಗಳಾಗಿದ್ದವು. ಮೀನು ಮತ್ತು ಮಾಂಸಗಳನ್ನೂ ಉಪಯೋಗಿಸುತ್ತಿದ್ದರು. ಧಾರ್ಮಿಕ ಮತ್ತು ಹಬ್ಬದ ಸಂದರ್ಭದಲ್ಲಿ ಸೋಮ ಆರ್ಯರು ಹತ್ತಿ ಮತ್ತು ಉಣ್ಣೆಯಿಂದ ತಯಾರಿಸಿದ ಉಡುಪುಗಳನ್ನು ಧರಿಸುತ್ತಿದ್ದರು, ಅವರ ಉಡುಪು


ಮತ್ತು ಸುರವೆಂಬ ಮಾದಕ ಪೇಯಗಳನ್ನು ಸೇವಿಸುತ್ತಿದ್ದರು.


ವಸ್ತ-ಆದಿವಸ್ತ್ರ ಮತ್ತು ನಿವಿ ಒಳಗೊಂಡಿತ್ತು. ಚಿನ್ನ, ಬೆಳ್ಳಿ ಮತ್ತು ಹೂವುಗಳಿಂದ ತಯಾರಿಸಿದ ಆಭರಣಗಳನ್ನು ಸ್ತ್ರೀ ಮತ್ತು ಪುರುಷರಿಬ್ಬರೂ ಧರಿಸುತ್ತಿದ್ದರು. ಕಂಠಹಾರ, ಕಿವಿಯೋಲೆ, ಉಂಗುರ, ಕೈಕಡಗ, ಕಾಲಂದುಗೆ ಬಳೆ, ತೋಳಬಂದಿ ಮುಂತಾದವುಗಳನ್ನು ಧರಿಸುತ್ತಿದ್ದರು. ಸ್ತ್ರೀಯರು ವಿವಿಧ ಶೈಲಿಗಳಲ್ಲಿ ಜಡೆಗಳನ್ನು ಹೆಣೆದುಕೊಳ್ಳುತ್ತಿದ್ದರು.


ಜೂಜಾಡುವುದು, ರಥ ಓಡಿಸುವ ಸ್ಪರ್ಧೆ, ಕುದುರೆ ಓಡಿಸುವ ಸ್ಪರ್ಧೆ, ಸಂಗೀತ, ನೃತ್ಯ ಮುಂತಾದುವುಗಳು ಅವರ ವಿವಿಧ ರೀತಿಯ ಮನರಂಜನೆಗಳಾಗಿದ್ದವು. ನಗಾರಿ, ದುಂದುಭಿ, ವೀಣೆ, ಮತ್ತು ಕೊಳಲು ಆ ಕಾಲದ ಪ್ರಮುಖ ಸಂಗೀತ ವಾದ್ಯಗಳಾಗಿದ್ದವು.


ಆರ್ಥಿಕ ಸ್ಥಿತಿ.


ಋಗೈದದ ಕಾಲದಲ್ಲಿ ಆರ್ಯರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಕೃಷಿ ಅವರ ಪ್ರಮುಖ ಕಸುಬಾಗಿತ್ತು. ಪಶುಪಾಲನೆ ಇನ್ನೊಂದು ಪ್ರಮುಖ ಉದ್ಯೋಗವಾಗಿತ್ತು, ಉಳುಮೆ ಭೂಮಿಯನ್ನು 'ಕ್ಷೇತ್ರ'ವೆಂದು ಕರೆಯುತ್ತಿದ್ದರು. ಮರಗೆಲಸ, ಕುಂಬಾರಿಕೆ, ನೇಕಾರಿಕೆ, ಮುಂತಾದ ಸರಳ ವೃತ್ತಿಗಳು ಅಸ್ತಿತ್ವದಲ್ಲಿದ್ದವು. ವ್ಯಾಪಾರವು ಅಲ್ಪ ಪ್ರಮಾಣದಲ್ಲಿ ನಡೆಯುತಿತ್ತು. ಜಾನುವಾರುಗಳನ್ನು ಸಂಪತ್ತೆಂದು ಪರಿಗಣಿಸಲಾಗಿತ್ತು. ವಸ್ತುವಿನಿಮಯ ಪದ್ಧತಿ ರೂಢಿಯಲ್ಲಿತ್ತು.

ಉತ್ತರ ವೇದಕಾಲದಲ್ಲಿ ಅನೇಕ ಹಳ್ಳಿಗಳು ನಗರಗಳಾಗಿ ಮಾರ್ಪಟ್ಟವು. ಉದಾಹರಣೆಗೆ - ಹಸ್ತಿನಾಪುರ, ಇಂದ್ರಪ್ರಸ್ತ, ಕೌಸಂಬಿ ಮುಂತಾದವುಗಳು, ಕೃಷಿ ಪ್ರಮುಖ ಉದ್ಯೋಗವಾಗಿ ಮುಂದುವರೆಯಿತು. ಪಶುಪಾಲನೆ, ವ್ಯಾಪಾರ ಮತ್ತಿತರ ವೃತ್ತಿಗಳು ಮುಂದುವರಿದವು. ವ್ಯಾಪಾರ ಮತ್ತು ವಾಣಿಜ್ಯ ಪ್ರಾಮುಖ್ಯತೆಯನ್ನು ಪಡೆಯಿತು. ಆಂತರಿಕ ಮತ್ತು ಸಮುದ್ರವ್ಯಾಪಾರಗಳೆರಡೂ ಕಂಡುಬರುತ್ತವೆ. ಹತ್ತಿ, ರೇಷ್ಮೆ ಮುಂತಾದವು ಅವರ ವ್ಯಾಪಾರದ ಮುಖ್ಯ ವಸ್ತುಗಳಾಗಿದ್ದವು. ವಸ್ತು ವಿನಿಮಯ ಪದ್ಧತಿ ಮುಂದುವರೆಯಿತು ಮತ್ತು ನಿಷ್ಕ (ಒಂದು ಚಿನ್ನದ ತುಣುಕು) ಕೂಡಾ ಬಳಕೆಯಲ್ಲಿತ್ತು.


ಧಾರ್ಮಿಕ ಸ್ಥಿತಿ.


ವೈದಿಕ ಧರ್ಮವು ಸನಾತನ ಧರ್ಮ, ಹಿಂದೂಧರ್ಮ ಮತ್ತು ಬ್ರಾಹಣ ಧರ್ಮ ಎಂದೂ ಹೆಸರಾಗಿದೆ. ಇದು ಜಗತ್ತಿನ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದ್ದು, ಇಂದಿಗೂ ಆಚರಣೆಯಲ್ಲಿದೆ.


ಸಹ


ಪೂರ್ವ ವೇದ ಕಾಲದ ಆರ್ಯರು ಪ್ರಕೃತಿಯನ್ನು ಆರಾಧಿಸುತ್ತಿದ್ದರು. ಅವರಿಗೆ ಅನೇಕ ದೇವರುಗಳಲ್ಲಿ ನಂಬಿಕೆಯಿತ್ತು. ಅವರು ಇಂದ್ರ, ವರುಣ, ಅಗ್ನಿ, ವಾಯು, ಸೂರ್ಯ, ಪೃಥ್ವಿ, ಸೋಮ ಮುಂತಾದ ದೇವತೆಗಳನ್ನು ಪೂಜಿಸುತ್ತಿದ್ದರು. ಆದ್ದರಿಂದ ಅವರು ಬಹುದೇವತಾ ಆರಾಧಕರಾಗಿದ್ದರು. ಮೂರ್ತಿ ಪೂಜೆ ಇರಲಿಲ್ಲ. ಪೂಜಾ ವಿಧಾನ ಸರಳವಾಗಿತ್ತು. ಅವರು ಶ್ಲೋಕಗಳನ್ನು ರಚಿಸಿ ದೇವತೆಗಳನ್ನು ಆರಾಧಿಸುತ್ತಿದ್ದರು. ಸರಳ ವಿಧಿ ವಿಧಾನಗಳು ಮತ್ತು ಯಜ್ಞ-ಯಾಗಾದಿಗಳು (ಬಲಿ ಅರ್ಪಣೆ) ರೂಢಿಯಲ್ಲಿದ್ದವು.


ಉತ್ತರ ವೇದಕಾಲದಲ್ಲಿ ಧರ್ಮಾಚರಣೆ ಸಂಕೀರ್ಣ ಮತ್ತು ಕಠಿಣವಾಯಿತು. ದೇವತೆಗಳ ಸಂಖ್ಯೆ ಬಹುಪಟ್ಟು ಹೆಚ್ಚಿತು ಮತ್ತು ದೇವತೆಗಳಿಗೆ ವಿವಿಧ ಆಕಾರ ಮತ್ತು ಗುಣಗಳನ್ನು ಕೊಡಲಾಯಿತು. ಮೂರ್ತಿಪೂಜೆ ಅಸ್ತಿತ್ವಕ್ಕೆ ಬಂದಿತು. ದೇವತೆಗಳನ್ನು ಶ್ರೇಣೀಕರಿಸಲಾಯಿತು. ಹೊಸ ದೇವತೆಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಕಾರ್ತಿಕೇಯ, ಪಾರ್ವತಿ, ಲಕ್ಕಿ, ಕಾಳಿ, ದುರ್ಗಾ ಮುಂತಾದವರು ಅಸ್ತಿತ್ವಕ್ಕೆ ಬಂದರು. ಆಕಳನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು ಮತ್ತು ಅದರ ಹತ್ಯೆಯನ್ನು ನಿಷೇಧಿಸಲಾಯಿತು. ವಿಸ್ತತವಾದ ವಿಧಿವಿಧಾನಗಳು ಮತ್ತು ಮಂತ್ರಗಳ ಬಳಕೆ ಪೂಜಾ ವಿಧಾನವನ್ನು ಸಂಕೀರ್ಣಗೊಳಿಸಿತು. ಯಜ್ಞ ಮತ್ತು ಯಾಗಾದಿಗಳ ಆಚರಣೆಯೂ ವಿಶ್ವತವಾದವು. ಆದ್ದರಿಂದ ವೈದಿಕ ಧರ್ಮದ ಆಚರಣೆ ದುಬಾರಿಯಾಯಿತು. ಕುದ್ರಪೂಜೆ, ವಾಮಾಚಾರ ಮತ್ತು ಮಾಟಮಂತ್ರಗಳು ರೂಢಿಗೆ ಬಂದವು.


ವರ್ಣಗಳು, ಆಶ್ರಮಗಳು ಮತ್ತು ಪುರುಷಾರ್ಥಗಳು (ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ) ವೈದಿಕ ಧರ್ಮದ ಅವಿಭಾಜ್ಯ ಅಂಗಳಾಗಿವೆ. ಹಿಂದೂಗಳ ಸಂಪೂರ್ಣ ಜೀವನವು ಸಂಸ್ಕಾರಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ. ವೈದಿಕ ಧರ್ಮವು ಹುಟ್ಟು-ಸಾವು-ಮನರ್ಜನ ಚಕ್ರದಲ್ಲಿ ಮತ್ತು ಆತ್ಮದ ಪರಕಾಯ ಪ್ರವೇಶದ ಪರಿಕಲ್ಪನೆಯಲ್ಲೂ ನಂಬಿಕೆ ಹೊಂದಿದೆ. ಆತ್ಮದ ಉದ್ದೇಶವು ದೇವರನ್ನು ಸೇರುವುದಾಗಿದ್ದು, ಅದನ್ನು 'ಮೋಕ್ಷ' ಎಂದು ಕರೆಯಲಾಗಿದೆ. ಮೋಕ್ಷ ಸಾಧನೆಗಾಗಿ ಭಕ್ತಿ, ಜ್ಞಾನ, ಕರ್ಮ ಮತ್ತು ಯೋಗ ಮಾರ್ಗಗಳಂತಹ ಪಥಗಳನ್ನು ಸೂಚಿಸಲಾಗಿದೆ. ಹಿಂದೂಗಳ ಪವಿತ್ರ ಗ್ರಂಥಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅದರಲ್ಲಿ ಪ್ರಮುಖವಾದವುಗಳೆಂದರೆ ವೇದಗಳು, ಉಪನಿಷತ್ತುಗಳು, ಮರಾಣಗಳು, ಸ್ಮೃತಿಗಳು ಮುಂತಾದವು. ಮಹಾಕಾವ್ಯಗಳಾದ ರಾಮಾಯಣ ಮತ್ತು


ಮಹಾಭಾರತಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ.


ಪಿಟ್ಟು ಮತ್ತು ವಿಜ್ಞಾನ,


ಗುರುಕುಲ, ಪಾಠಶಾಲೆ, ಅಗ್ರಹಾರ ಮತ್ತು ಘಟಕಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು, ದೇವಾಲಯಗಳೂ ಕೂಡ ಶಿಕ್ಷಣ ಕೇಂದ್ರಗಳಾಗಿದ್ದವು, ಉನ್ನತ ಶಿಕ್ಷಣವನ್ನು ಕಂಚಿ ಮತ್ತು ತಕ್ಷಶಿಲಾಗಳಂತಹ ವಿಶ್ವವಿದ್ಯಾಲಯಗಳಲ್ಲಿ ಒದಗಿಸಲಾಗುತ್ತಿತ್ತು. ಶಿಕ್ಷಣವು ಉಪನಯನ ಸಮಾರಂಭದೊಂದಿಗೆ ಪ್ರಾರಂಭವಾಗುತ್ತಿತ್ತು. ಗುರುವಿನ ಸ್ಥಾನ


ಉನ್ನತವಾಗಿತ್ತು. ಸ್ತ್ರೀ-ಪುರುಷರಿಬ್ಬರೂ ಶಿಕ್ಷಣ ಪಡೆಯುತ್ತಿದ್ದರು. ಗಾರ್ಗಿ, ಮೈತ್ರೇಯಿ, ಶಾಶ್ವತಿ, ಲೋಪಮುದ್ರಾ ಮುಂತಾದವರು ಪ್ರಮುಖ ಮಹಿಳಾ ವಿದ್ವಾಂಸರಾಗಿದ್ದರು. ವೇದಗಳು, ಪುರಾಣಗಳು, ತತ್ವಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಜೋತಿಷ್ಯಶಾಸ್ತ್ರ, ಔಷಧಶಾಸ್ತ್ರ, ತರ್ಕಶಾಸ್ತ್ರ ಮುಂತಾದವು ಪ್ರಮುಖ ಬೋಧನಾ ವಿಷಯಗಳಾಗಿದ್ದವು, ಸಂಸ್ಕೃತ ಬೋಧನಾ ಮಾಧ್ಯಮವಾಗಿತ್ತು. ಆರ್ಯರು ಗತ, ರೇಖಾಗಣಿತ, ಔಷಧಶಾಸ್ತ್ರ ಮತ್ತು ಲೋಹಶಾಸ್ತ್ರಗಳಲ್ಲಿ


ಹೆಚ್ಚಿನ ಪ್ರಗತಿ ಹೊಂದಿದ್ದರು. ಸೂರ್ಯ ಮತ್ತು ಚಂದ್ರ, ಚಂದ್ರ ಮತ್ತು ಭೂಮಿ ಹಾಗೂ ಸೂರ್ಯ ಮತ್ತು ಭೂಮಿಗಳ ನಡುವಿನ ಅಂತರದ ಲೆಕ್ಕಾಚಾರ ಅವರಿಗೆ ತಿಳಿದಿತ್ತು. ಗ್ರಹಣಗಳು ಮತ್ತು ಧೂಮಕೇತುಗಳ ಸಂಭವಿಸುವಿಕೆಯ ಜ್ಞಾನವೂ ಅವರಿಗಿತ್ತು, ಔಷಧಶಾಸ್ತ್ರದಲ್ಲಿಯೂ ಹೆಚ್ಚಿನ ಪ್ರಗತಿ ಸಾಧಿಸಿದ್ದರು. ಗಿಡಮೂಲಿಕೆಗಳು, ಗೆಡ್ಡೆಗಳು, ಎಲೆಗಳು, ತೈಲ, ಲವಣಗಳು ಮತ್ತು ಮಣ್ಣನ್ನು ಉಪಯೋಗಿಸಿ ರೋಗಗಳನ್ನು ಗುಣಪಡಿಸಲಾಗುತ್ತಿತ್ತು. ಅವರು ಚಂದ್ರಮಾನ ಪಂಚಾಂಗವನ್ನು ಅನುಸರಿಸುತ್ತಿದ್ದರು.

3 Comments

Post a Comment
Previous Post Next Post