ಹವಾಗೋಳ

 ಭೂಮಿಯನ್ನು ಸುತ್ತುವರಿದಿರುವ ಅನಿಲಗಳ, ಧೂಳಿನ ಕಣ ಮತ್ತು ನೀರಾವಿಯ ತೆಳುವಾದ ಪದರವನ್ನು ವಾಯುಗೋಳವೆಂದು ಕರೆಯುತ್ತೇವೆ. ಈ ಅನಿಲದ ಪದರವು ಭೂಮೇಲ್ಮ ಮತ್ತು ಬಾಹ್ಯಾಕಾಶಗಳ ನಡುವಿನ ರಕ್ಷಣಾ ವಲಯ. ವಾಯುಗೋಳದ ದಪ್ಪ ಸುಮಾರು 1000 ಕಿ.ಮೀ. ಗಳಿದ್ದು, ಇದು ಭೂಮಿಯ ಎಲ್ಲಾ ಬಗೆಯ ಜೀವಿಗಳಿಗೆ ಅತ್ಯವಶ್ಯವಾಗಿದೆ. ವಾಯುಗೋಳದ ಕೆಲವು ಅನಿಲಗಳು ಮಾನವ ಮತ್ತು ಇತರ ಜೀವಿಗಳ ಉಸಿರಾಟಕ್ಕೆ ಅತ್ಯವಶ್ಯವಾಗಿದೆ. ಸಸ್ಯಗಳು ಈ ಅನಿಲಗಳ ನೆರವಿನಿಂದ ಆಹಾರವನ್ನು ವಾಯುಗೋಳವು ಉತ್ಪಾದಿಸುತ್ತವೆ ಸೂರ್ಯನ


ಶಾಖವನ್ನು ಹಿಡಿದಿರಿಸಿಕೊಂಡು ಭೂಮಿಯು ಒಂದು ಜೀವಗ್ರಹವಾಗಿರುವಂತೆ ಮಾಡಿದೆ.

ವಾಯುಗೋಳದ ಸಂಯೋಜನೆ


ವಾಯುಗೋಳವು ವಿವಿಧ ಬಗೆಯ ಅನಿಲಗಳು, ಧೂಳಿನ ಕಣಗಳು ಮತ್ತು ನೀರಾವಿಯ ಮಿಶ್ರಣವಾಗಿದೆ. ವಾಯುಗೋಳದ ಮುಖ್ಯ ಅನಿಲಗಳೆಂದರೆ (ಸಾರಜನಕ ಶೇ.78.08, ಆಮ್ಲಜನಕ ಶೇ.20,94, ಆರ್ಗಾನ ಶೇ.0.93, ಇಂಗಾಲದ ಡೈಆಡ್ ಶೇ.03, ಮತ್ತು ಓಜೋನ್ ಶೇ. 1,000005, ವಾಯುಗೋಳವು ಧೂಳಿನ ಕಣಗಳನ್ನು ಸಹ ಒಳಗೊಂಡಿದ್ದು, ನೀರಿನ ಕಣಗಳ ನಿರ್ಮಾಣಕ್ಕೆ ಸಹಾಯಕವಾಗಿದೆ. ವಾಯುಗೋಳದಲ್ಲಿರುವ ನೀರಾವಿಯು ಮೋಡದ ನಿರ್ಮಾಣ ಹಾಗೂ ದೃಷ್ಟಿಗೆ ಕಾರಣವಾಗುವುದಲ್ಲದೆ, ವಾಯುಗೋಳದ ಶಾಖ ಮತ್ತು ಶಕ್ತಿಯನ್ನು ಹಿಡಿದಿರಿಸಿಕೊಂಡು ಅದು ಒಂದು ಸ್ಥಳದ ಹವಾಮಾನದ ಪರಿಸ್ಥಿತಿಯ ಮೇಲೆ ಪ್ರಭಾವವನ್ನು ಬೀರುತ್ತವೆ.


ವಾಯುಗೋಳದ ಪದರುಗಳು


ವಾಯುಗೋಳವನ್ನು ಅದರ ಹಲವಾರು ಲಕ್ಷಣಗಳನ್ನು ಆಧರಿಸಿ ಐದು ಪದರುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪರಿವರ್ತನಾಮಂಡಲ, ಸಮೋಷಮಂಡಲ, ಮಧ್ಯಂತರಮಂಡಲ, ಉಷ್ಣತಾಮಂಡಲ ಮತ್ತು ಬಾಹ್ಯಮಂಡಲ.


ಪರಿವರ್ತನಾಮಂಡಲ (Troposphere) : ಇದು ವಾಯುಗೋಳದ ಅತ್ಯಂತ ಕೆಳಪದರ, ಇದು ಸಮಭಾಜಕವೃತ್ತದ ಬಳಿ 18 ಕಿ.ಮೀ. ಎತ್ತರದವರೆಗೆ ಹಾಗೂ ಧ್ರುವಪ್ರದೇಶದ ಬಳಿ 8ಕಿ.ಮೀ. 


ಸಮೋಷ್ಠಮಂಡಲ (Stratosphere) : ಇದು ವಾಯುಮಂಡಲದ ಎರಡನೆಯ ಪದರವಾಗಿದ್ದು


50 ಕಿ.ಮೀ.ವರೆಗೆ ಹಬ್ಬಿದೆ. ಪರಿವರ್ತನಾ ಮಂಡಲ ಮತ್ತು ಮಧ್ಯಂತರ ಮಂಡಲಗಳ ನಡುವೆ ವಿಸ್ತರಿಸಿದೆ. ಈ ಪದರದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದುದು. ಇದು ಸೂರ್ಯನಿಂದ ಬರುವ ಅತಿನೇರಳೆ (ಅಲ್ಪಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸಿದೆ. ಈ ಪದರವು ಮೋಡ ಹಾಗೂ ಇತರೆ ಎಲ್ಲಾ ಬಗೆಯ ಹವಾಮಾನದ ಅಂಶಗಳಿಂದ ಮುಕ್ತವಾಗಿರುವುದು, ಇದರಿಂದ ಈ ಪದರದಲ್ಲಿ ಜೆಟ್ ವಿಮಾನಗಳು ಹಾರಾಡಲು ಸೂಕ್ತವಾಗಿವೆ.


ಮಧ್ಯಂತರ ಮಂಡಲ (Mesosphere) : ಇದು ಸಮೋಪಮಂಡಲದ ಮೇಲಿದ್ದು ಸುಮಾರು 80 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ. ಈ ವಲಯದಲ್ಲಿಯೂ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದು. ಈ ಪದರು ವಾಯುಮಂಡಲದ ಅತಿ ಶೀತವಾದ ವಲಯವಾಗಿದೆ.


ಉಷ್ಣತಾಮಂಡಲ (Thermosphere) : ಮಧ್ಯಂತರ ಮಂಡಲದ ನಂತರ ಉಷ್ಣತಾಮಂಡಲ ಕಂಡುಬರುತ್ತದೆ. ಈ ಪದರದಲ್ಲಿ ಉಷ್ಣಾಂಶವು ತೀವ್ರವಾಗಿ ಹೆಚ್ಚಾಗುತ್ತದೆ. ಈ ಪದರದಲ್ಲಿನ ಅತ್ಯಧಿ ಉಷ್ಣಾಂಶದ ಪರಿಣಾಮವಾಗಿ ಅನಿಲದ ಅಣುಗಳು ಆಯಾನುಗಳಾಗಿ ಪರಿವರ್ತನೆ ಹೊಂದಿರುತ್ತವೆ. ಆದುದರಿಂದ ಇದನ್ನು 'ಆಯಾನುಮಂಡಲ'ವೆಂತಲೂ ಕರೆಯುವರು, ಇಲ್ಲಿನ ಆಯಾನುಗಳು ಭೂಮಿಯಿಂದ ಪ್ರಸಾರಗೊಂಡ ಲೇಡಿಯೋ ತರಂಗಗಳನ್ನು ಪುನಃ ಭೂಮಿಯ ಕಡೆಗೆ ಪ್ರತಿಫಲಿಸುತ್ತವೆ.


ಬಾಹ್ಯಮಂಡಲ (Exosphere) : ಬಾಹ್ಯಮಂಡಲವು ವಾಯುಗೋಳದ ಅತ್ಯಂತ ಎತ್ತರದಲ್ಲಿದ್ದ ಪದರವಾಗಿದೆ. ಈ ಪದರಲ್ಲಿ ವಾಯುಗೋಳದ ಘಟಕಾಂಶಗಳು ವಿರಳವಾಗಿರುತ್ತದೆ ಮತ್ತು ಒತ್ತಡ ಅತ್ಯಂತ ಕಡಿಮೆ ಇರುತ್ತದೆ.


ಹವಾಗುಣದ ಘಟಕಾಂಶಗಳು (Elements of Weather)


ಒಂದು ಪ್ರದೇಶದ ಹವಾಮಾನದ ಪರಿಸ್ಥಿತಿಯು ಹಲವು ಅಂಶಗಳಿಂದ ಪ್ರಭಾವಿತವಾಗಿರುತ್ತದೆ. 'ಅವುಗಳೆಂದರೆ ಉಷ್ಣಾಂಶ, ಒತ್ತಡ, ಮಾರುತಗಳು, ತೇವಾಂಶ, ಮೋಡ, ಮಳೆ ಇತ್ಯಾದಿ.


ಒಂದು ಸ್ಥಳದಲ್ಲಿ ನಿಗದಿತ ಸಮಯದಲ್ಲಿ ಕಂಡುಬರುವ ವಾಯುಮಂಡಲದ ಪರಿಸ್ಥಿತಿಯ ಹವಾಮಾನ ಇದಕ್ಕೆ ಪ್ರತಿಯಾಗಿ ಒಂದು ಪ್ರದೇಶದ ದೀರ್ಘಾವಧಿಯ ಹವಾಮಾನದ ಸರಾಸರಿಯನ್ನು ವಾಯುಗುಣವೆಂದು ಕರೆಯುವರು.


ವಾಯುಗೋಳದ ಉಷ್ಣಾಂಶ


ಭೂಮಿಯು ಪಡೆಯುವ ಎಲ್ಲಾ ಶಕ್ತಿಗೂ ಸೂರ್ಯನೇ ಮೂಲ, ಭೂಮಿಯು ಸೂರ್ಯನಿಂದ ಪಡೆಯುವ ಶಾಖವನ್ನು ಸೂರ್ಯಜನ್ಯ ಶಾಖ' (Insolation)ಎಂದು ಕರೆಯುವರು. ಅಂದರೆ ಸೂರ್ಯನಿಂದ ಭೂಮಿಗೆ ತಲುಪುವ ಸೌರವಿಕಿರಣ ಶಾಖ ಎಂದಾಗಿದೆ. ವಾಯುಗೋಳದ ಉಷ್ಣಾಂಶವನ್ನು ಉಷ್ಣತಾಮಾಪಕ (Thermometer)ದಿಂದ ಅಳೆಯಲಾಗುವುದು. ಸೆಂಟಿಗೇಡ್ ಅಥವಾ ಫ್ಯಾರನ್ ಹೀಟ್ ಉಷ್ಣತಾಮಾಪಕಗಳನ್ನು ಉಷ್ಣಾಂಶವನ್ನು ಅಳೆಯಲು ಬಳಸುವ ಮುಖ್ಯ ಉಪಕರಣಗಳಾಗಿವೆ. ಉಷ್ಣಾಂಶದ ಮೇಲೆ ಪ್ರಭಾವವನ್ನು ಬೀರುವ ಅಂಶಗಳೆಂದರೆ ಅಕ್ಷಾಂಶ, ಒಂದು ಸ್ಥಳದ ಎತ್ತರ, ಸಮುದ್ರದಿಂದ ಇರುವ ದೂರ, ಮಾರುತಗಳು, ಸಾಗರ ಪ್ರವಾಹಗಳು, ಮೋಡಗಳು, ಮಳೆ ಇತ್ಯಾದಿ




ಉಷ್ಣಾಂಶದ ವಿಪರ್ಯಯ; ಕೆಲವು ವಿಶೇಷ ಸನ್ನಿವೇಶಗಳಲ್ಲಿ ವಾಯುಮಂಡಲದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವುದಕ್ಕೆ ಬದಲು ಹೆಚ್ಚಾಗುತ್ತಾ ಹೋಗುವುದು. ಇದನ್ನು 'ಉಷ್ಣಾಂಶ ವಿಪರ್ಯಯ" ಎನ್ನುವರು. ಪರ್ವತಗಳ ಕಣಿವೆ ಪ್ರದೇಶಗಳಲ್ಲಿ ಕಂಡುಬರುವುದು. ಇದಕ್ಕೆ ಕಾರಣಗಳೆಂದರೆ ದೀರ್ಘಾವಧಿಯ ರಾತ್ರಿ ಮೋಡರಹಿತ ಶುಭ್ರ ಆಕಾಶ, ಒಣಗಾಳಿ, ಮಾರುತರಹಿತ ಸ್ಥಿತಿ ಮತ್ತು ಹಿಮಾವೃತ ಪರ್ವತದ ಮೇಲ್ಬಾಗ ಇತ್ಯಾದಿ.


ಉಷ್ಣಾಂಶದ ವಲಯಗಳು: ಭೂ ಮೇಲೆಯಲ್ಲಿ ಉಷ್ಣಾಂಶದ ಹಂಚಿಕೆಯು ಏಕ ರೀತಿಯಾಗಿಲ್ಲ. ಸೂರ್ಯಜನ್ಯ ಶಾಖದ ಆಧಾರದಿಂದ ಭೂಮಿಯನ್ನು ಮೂರು ಉಷ್ಣಾಂಶ ವಲಯಗಳಾಗಿ ವಿಂಗಡಿಸಬಹುದು. ಅವು ಕೆಳಕಂಡಂತಿವೆ:


i) ಉಷ್ಣವಲಯ (Torrid Zone) : ಇದರಲ್ಲಿ ಸೌರಶಾಖವು ಅತ್ಯಧಿಕ. ಇದು ಸಮಭಾಜಕವೃತ್ತ ಶಾಖ ಹೆಚ್ಚು. ಇದು 0 ಆಕ್ಷಾಂಶ ಸಮಭಾಜಕವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತ (23) ಉತ್ತರ) ಹಾಗೂಮಕರ ಸಂಕ್ರಾಂತಿ ವೃತ್ತದವರೆಗೆ (23% ದಕ್ಷಿಣ) ವಿಸ್ತರಿಸಿದೆ. ಈ ವಲಯವು ಸೂರ್ಯನ ನೇರವಾದ ಕಿರಣಗಳನ್ನು ಪಡೆಯುವುದು,


ii) ಸಮಶೀತೋಷ್ಣವಲಯಗಳು (Temperate Zone) : ಈ ವಲಯದಲ್ಲಿ ಉಷ್ಣಾಂಶವು ಅತಿ ಹೆಚ್ಚು ಅಥವಾ ಅತಿಕಡಿಮೆಯಿರದ ಸಮತೋಲನವಾಗಿರುವುದು. ಇದು ಉತ್ತರಾರ್ಧಗೋಳದಲ್ಲಿ 234 ಉತ್ತರದಿಂದ, 66' ಉತ್ತರ (ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ಆರ್ಕ್ಟಿಕ್ ವೃತ್ತದವರೆಗೆ ಮತ್ತು ದಕ್ಷಿಣಾರ್ಧಗೋಳದಲ್ಲಿ 2334 ದಕ್ಷಿಣದಿಂದ 66 ದಕ್ಷಿಣದವರೆಗೆ (ಮಕರ ಸಂಕ್ರಾಂತಿ ವೃತ್ತದಿಂದ ಅಂಟಾರ್ಕ್ಟಿಕ್ ವೃತ್ತ) ವರೆಗೆ ವಿಸ್ತರಿಸಿವೆ.


iii) ಶೀತವಲಯಗಳು (Frigid Zone) : ಇವು ಅತ್ಯಂತ ಶೀತಪ್ರದೇಶಗಳು, ಇವು 66(ಆರ್ಕ್ಟಿಕ್ ವೃತ್ತ) ಉತ್ತರದಿಂದ 90%. ಉತ್ತರ ಧ್ರುವದವರೆಗೆ ಹಾಗೂ ದಕ್ಷಿಣಾರ್ಧಗೋಳದಲ್ಲಿ 66 ದಕ್ಷಿಣದಿಂದ (ಅಂಟಾರ್ಕ್ಟಿಕ್ ವೃತ್ತ): 90 ದಕ್ಷಿಣ ಧ್ರುವದವರೆಗೆ ಹರಡಿವೆ. ಈ ವಲಯದಲ್ಲಿ ಸೂರ್ಯನ ಕಿರಣಗಳು ಅತ್ಯಂತ ಓರೆಯಾಗಿ ಬೀಳುವುದರಿಂದ, ಉಷ್ಣಾಂಶ ಅತಿ ಕಡಿಮೆ. 


ಸಮೋಪ್ಯರೇಖೆ (Isotherm) : ಒಂದೇ ಪ್ರಮಾಣದ ಉಷ್ಣಾಂಶವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯಬಹುದಾದ ಕಾಲ್ಪನಿಕ ರೇಖೆಗಳೇ ಸಮೋಷ್ಣರೇಖೆಗಳು. ಇವುಗಳನ್ನು ಗೋಳ ಅಥವಾ ಭೂಪಟದ ಮೇಲೆ ಯಾವುದಾದರೊಂದು ಭಾಗದ ಉಷ್ಣಾಂಶದ ಹಂಚಿಕೆಯನ್ನು ತೋರಿಸಲು ಎಳೆಯಲಾಗುವುದು.

0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now