ರಾಷ್ಟ್ರೀಯ ವಿಜ್ಞಾನ ದಿನ

 2021ರ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ವಿಜ್ಞಾನ ತಂತ್ರಜ್ಞಾನ ಮತ್ತು ನಾವೀನ್ಯತೆ - 

ಭವಿಷ್ಯವು ಶಿಕ್ಷಣ, ಕೌಶಲ್ಯ ಮತ್ತು ಕಾರ್ಯದ ಮೇಲೆ ಅದರ ಪ್ರಭಾವ ಎಂಬ ಧೈಯವಾಕ್ಯದೊಂದಿಗೆ ಆಚರಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನದಂದು ದೇಶಾದ್ಯಂತ ಶಾಲಾ-ಕಾಲೇಜುಗಳಲ್ಲಿ ವಿಜ್ಞಾನದ ಮಹತ್ವವನ್ನು ಪರಿಚಯಿಸಲಾಯಿತು ಮತ್ತು ವಿಜ್ಞಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಕ್ಷೇತ್ರದಲ್ಲಿ ಅನುಭವವನ್ನು ಪಡೆಯಲು ಉತ್ತೇಜಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನಕ್ಕೆ ಸಂಬಂಧಿಸಿದ ವಿಚಾರ ಗೋಷ್ಠಿಗಳನ್ನು, ವಿಜ್ಞಾನದ ಪ್ರದರ್ಶನಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತದೆ.


1987ರ ಫೆಬ್ರವರಿ 28 ರಂದು ಸರ್.ಸಿ.ವಿ. ರಾಮನ್‌ರವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಭಾರತ ಸರ್ಕಾರವು ಸರ್. ಸಿ.ವಿ. ರಾಮನ್‌ರವರ ವಿಜ್ಞಾನ ಕ್ಷೇತ್ರದ ಕೊಡುಗೆಗಳನ್ನು ಗುರುತಿಸಿ ಅವರ ಸಾಧನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಫೆಬ್ರವರಿ 28ನ್ನು “ರಾಷ್ಟ್ರೀಯ ವಿಜ್ಞಾನ ದಿನ” ಎಂದು ಆಚರಿಸಲು ಕರೆ ನೀಡಿತು. ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಹನ ಮಂಡಳಿಯು ಕೇಂದ್ರ ಸರ್ಕಾರಕ್ಕೆ ವಿಜ್ಞಾನ ದಿನಾಚರಣೆ ಆಚರಿಸುವಂತೆ ಮನವಿ ಸಲ್ಲಿಸಿತ್ತು.


1987ರ ಫೆಬ್ರವರಿ 28 ರಂದು ಮೊದಲ ಬಾರಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಪ್ರತೀ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಒಂದು ಧೈಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ದಿನದಂದು ವಿಜ್ಞಾನ ವಸ್ತು ಪ್ರದರ್ಶನ, ಯೋಜನೆಗಳ ಸಿದ್ಧ ಪಡಿಸುವಿಕೆ ಮತ್ತು ಪ್ರದರ್ಶನ, ಸಂಶೋಧನೆಯ ಪ್ರಾತ್ಯಕ್ಷಿಕತೆ, ವಿಜ್ಞಾನ ವಿಷಯದ ಬಗೆಗಿನ ಚರ್ಚಾಗೋಷ್ಠಿ, ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ


ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಹಿನ್ನಲೆ: ಭಾರತ ದೇಶದ ಭೌತ


ವಿಜ್ಞಾನಿ ಸರ್ ಚಂದ್ರಶೇಖರ್‌ ವೆಂಕಟರಾಮನ್ ಅಥವಾ ಸರ್, ಸಿ.ವಿ ರಾಮನ್ ಅವರು 1928 ಫೆಬ್ರವರಿ 28 ರಂದು ಬೆಂಗಳೂರಿನ ಸೆಂಟ್ರಲ್ ಬಗ್ಗೆ ಸಂಶೋಧನೆ ನಡೆಸಿದ್ದು, ಇದನ್ನು 'ರಾಮನ್ ಪರಿಣಾಮ' ಎಂದು ಕರೆಯಲಾಗಿದೆ. ರಾಮನ್ ಅವರು ನಡೆಸಿದ ಸಂಶೋಧನೆಗಾಗಿ 1930ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ ಸರ್. ಸಿ.ವಿ. ರಾಮನ್‌ರವರು ನೊಬೆಲ್ ಪ್ರಶಸ್ತಿ ಪಡೆದ ಮೊದಲ “ಏಷ್ಯನ್ ಭೌತ ವಿಜ್ಞಾನಿ" & ಮೊದಲ ಭಾರತೀಯ ವಿಜ್ಞಾನಿಯಾಗಿದ್ದಾರೆ.



 ಸರ್, ಸಿ.ವಿ. ರಾಮನ್ ಬಗ್ಗೆ ಸಂಕ್ಲಿಪ್ತ ಮಾಹಿತಿ * ಜನನ: 1888 ನವೆಂಬರ್ 7 (ಮದ್ರಾಸ್ ಪ್ರಾಂತ್ಯದ ತಿರುವನೈ ಕೋಯಿಲ್ )


* ಮರಣ: 1970 ನವೆಂಬರ್ 21 (ಬೆಂಗಳೂರು)


* ಪ್ರಶಸ್ತಿಗಳು: ದೇಶದ ನಾಗರಿಕ ಪ್ರಶಸ್ತಿಯಲ್ಲಿ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಮೊದಲ ವಿಜ್ಞಾನಿ, 1954 ರಲ್ಲಿ ರಾಮನ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲಾಗಿದೆ. ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (1930), ಲೆನಿನ್ ಶಾಂತಿ ಪ್ರಶಸ್ತಿ (1957)


ರಾಮನ್ ಪರಿಣಾಮ (Raman Effect)


ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು, ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳುತ್ತವೆ. ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆ ಯೇ ಇರುತ್ತವೆಯಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲಕ್ಕಿಂತ ಬದಲಾಗಿರುತ್ತದೆ. ಇದನ್ನೇ ಬೆಳಕಿನ ಚದುರುವಿಕೆ ಎಂದು ಕರೆಯಲಾಯಿತು. ಇದನ್ನು ಸಂಶೋಧನೆ ಮೂಲಕ ಸಿ.ವಿ. ರಾಮನ್ ಪ್ರಚುರ ಪಡಿಸಿದ್ದರಿಂದ ಈ ವಿದ್ಯಮಾನವನ್ನು “ರಾಮನ್ ಪರಿಣಾಮ” ಎನ್ನುವರು.


ರಾಮನ್ ಪರಿಣಾಮ ಅನ್ವಯಿಕೆಗಳು: ತರಂಗಾಂತರದಲ್ಲಿನ


ಬದಲಾವಣೆಗೂ ಪಾರದರ್ಶಕ ವಸ್ತುವಿನ ರಚನೆಗೂ ಸಂಬಂಧ ತಿಳಿಯಲು ಸಹಕಾರಿ, ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಸಹಕಾರಿ, ವಿವಿಧ ಬಗೆಯ ಹೂ ಬಣ್ಣಗಳಿಗೆ ಕಾರಣ ತಿಳಿಯಲು ಸಹಾಯಕ, ಬಟ್ಟೆಗಳು ಬೇರೆ ಬೇರೆ ಬಣ್ಣ ಹೊಂದಲು ಕಾರಣವೇನು? ಹೀಗೆ ನಿತ್ಯ ಜೀವನದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ರಾಮನ್ ಬೆಳಕಿನ ಪರಿಣಾಮ ಸಹಕಾರಿಯಾಯಿತು.


ಬೆಳಕಿನ ಚದುರುವಿಕೆಗೆ ಸಂಬಂಧಿಸಿದ ನಿದರ್ಶನಗಳು: ಸೂರ್ಯನು ಉದಯಿಸುವಾಗ ಮತ್ತು ಮುಳುಗುವಾಗ ಕೆಂಪಾಗಿ ಕಾಣವುದು, ಆಕಾಶ ನೀಲಿಯಾಗಿ ಕಾಣವುದು.



0/Post a Comment/Comments

Stay Conneted

WhatsApp Group Join Now
Telegram Group Join Now
Instagram Group Join Now